ಆ್ಯಪ್ನಗರ

ಕೊಹ್ಲಿಗೆ ಕೈಕೊಟ್ಟ ಲಕ್; ಟಾಸ್‌ನಲ್ಲೂ ಭಾರತ ವೈಟ್‌ವಾಶ್

ಟೆಸ್ಟ್ ಕ್ರಿಕೆಟ್‌ನಲ್ಲಿ ಟಾಸ್ ಅತಿ ಮುಖ್ಯವೆನಿಸುತ್ತದೆ. ಆದರೆ ಎಲ್ಲ ಐದು ಪಂದ್ಯಗಳಲ್ಲೂ ಎದುರಾಳಿ ತಂಡದ ನಾಯಕ ಜೋ ರೂಟ್ ಟಾಸ್ ಗೆದ್ದಿರುವುದು ಗನನಾರ್ಹವೆನಿಸಿದೆ.

TOI.in 7 Sep 2018, 6:04 pm
ಲಂಡನ್: ಇಂಗ್ಲೆಂಡ್ ನಾಡಿನಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲ್ಲುವ ಸುವರ್ಣಾವಕಾಶವನ್ನು ಟೀಮ್ ಇಂಡಿಯಾ ಕೈಚೆಲ್ಲಿದೆ. ಬ್ಯಾಟ್ಸ್‌ಮನ್‌ಗಳು ಕಳಪೆ ಪ್ರದರ್ಶನ ನೀಡಿರುವುದೇ ಟೀಮ್ ಇಂಡಿಯಾ ಕೆಟ್ಟ ಪ್ರದರ್ಶನಕ್ಕೆ ಕಾರಣವಾಗಿದೆ.
Vijaya Karnataka Web kohli-root-01


ಕೇವಲ ಬ್ಯಾಟ್ಸ್‌ಮನ್‌ಗಳು ಮಾತ್ರವಲ್ಲದೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಗೆ ಸ್ವಲ್ಪನೂ ಅದೃಷ್ಟವಿರಲಿಲ್ಲ ಎಂಬುದೀಗ ಸಾಬೀತುಗೊಂಡಿದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಟಾಸ್ ಅತಿ ಮುಖ್ಯವೆನಿಸುತ್ತದೆ. ಆದರೆ ಎಲ್ಲ ಐದು ಪಂದ್ಯಗಳಲ್ಲೂ ಎದುರಾಳಿ ತಂಡದ ನಾಯಕ ಜೋ ರೂಟ್ ಟಾಸ್ ಗೆದ್ದಿರುವುದು ಗನನಾರ್ಹವೆನಿಸಿದೆ.

ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ಕಳೆದ 20 ವರ್ಷಗಳಲ್ಲೇ ಎಲ್ಲ ಐದು ಪಂದ್ಯಗಳ ಟಾಸ್ ಗೆದ್ದ ಖ್ಯಾತಿಗೆ ರೂಟ್ ಪಾತ್ರವಾಗಿದ್ದಾರೆ.

ಈ ಹಿಂದೆ 1998-99ರ ಇಂಗ್ಲೆಂಡ್ ಸರಣಿಯಲ್ಲಿ ಆಸ್ಟ್ರೇಲಿಯಾದ ಮಾರ್ಕ್ ಟೇಲರ್ ಎಲ್ಲ ಐದು ಪಂದ್ಯಗಳಲ್ಲೂ ಟಾಸ್ ಗೆದ್ದ ಸಾಧನೆ ಮಾಡಿದ್ದರು.

ಹಾಗೆಯೇ ಭಾರತ ವಿರುದ್ಧದ ಸರಣಿಯಲ್ಲಿ ಎಲ್ಲ ಪಂದ್ಯಗಳಲ್ಲೂ ಟಾಸ್ ಗೆದ್ದ ಇಂಗ್ಲೆಂಡ್‌ನ ಮೊದಲ ಹಾಗೂ ಒಟ್ಟಾರೆಯಾಗಿ ಮೂರನೇ ನಾಯಕ ಎಂಬ ಗೌರವಕ್ಕೆ ರೂಟ್ ಅರ್ಹವಾಗಿದ್ದಾರೆ.

ಈ ಮೊದಲು ವೆಸ್ಟ್‌ಇಂಡೀಸ್‌ನ ಜಾನ್ ಗಾಡಾರ್ಡ್ (1948-49) ಹಾಗೂ ಕ್ಲೈವ್ ಲಾಯ್ಡ್ (1982-83) ಎಲ್ಲ ಪಂದ್ಯಗಳಲ್ಲೂ ಟಾಸ್ ಗೆದ್ದಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೊಹ್ಲಿ ನನಗನಿಸುತ್ತದೆ "ಟಾಸ್ ಗೆಲ್ಲಲು, ಎರಡು ಬದಿಗಳಲ್ಲೂ 'ಹೆಡ್ಸ್' ಇರಬೇಕಾದ ಅವಶ್ಯಕತೆಯಿದೆ" ಎಂದರು.

ಭಾರತದ ಪೈಕಿ ಎಲ್ಲ ಐದು ಟಾಸ್‌ಗಳನ್ನು ಸೋತಿರುವ ಸಾಲಿನಲ್ಲಿ ಮಾಜಿ ನಾಯಕರಾದ ಲಾಲಾ ಅಮರ್‌ನಾಥ್ ಹಾಗೂ ಕಪಿಲ್ ದೇವ್ ಕಾಣಿಸಿಕೊಂಡಿದ್ದಾರೆ. ಇನ್ನು 1963-64ರಲ್ಲಿ ಇಂಗ್ಲೆಂಡ್ ವಿರುದ್ದ ಟೈಗರ್ ಪಟೌಡಿ ಎಲ್ಲ ಐದು ಟಾಸ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌