ಆ್ಯಪ್ನಗರ

ಕಾರ್ತಿಕ್ ಮಿಂಚಿನ ಶತಕ; ತ.ನಾಡು ಮುಡಿಗೆ ದೇವಧರ್ ಟ್ರೋಫಿ

ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಬಾರಿಸಿದ ಬಿರುಸಿನ ಶತಕದ (91 ಎಸೆತಗಳಲ್ಲಿ 126 ರನ್) ನೆರವಿನಿಂದ ಇಲ್ಲಿ ಭಾರತ ಬಿ ವಿರುದ್ಧ ನಡೆದ ದೇವಧರ್ ಟ್ರೋಫಿ ಫೈನಲ್ ಪಂದ್ಯವನ್ನು 42 ರನ್ ಅಂತರದಲ್ಲಿ ಮಣಿಸಿರುವ ತಮಿಳುನಾಡು, ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಟೈಮ್ಸ್ ಆಫ್ ಇಂಡಿಯಾ 29 Mar 2017, 9:17 pm
ವಿಶಾಖಪಟ್ಟಣ: ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಬಾರಿಸಿದ ಬಿರುಸಿನ ಶತಕದ (91 ಎಸೆತಗಳಲ್ಲಿ 126 ರನ್) ನೆರವಿನಿಂದ ಇಲ್ಲಿ ಭಾರತ ಬಿ ವಿರುದ್ಧ ನಡೆದ ದೇವಧರ್ ಟ್ರೋಫಿ ಫೈನಲ್ ಪಂದ್ಯವನ್ನು 42 ರನ್ ಅಂತರದಲ್ಲಿ ಮಣಿಸಿರುವ ತಮಿಳುನಾಡು, ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
Vijaya Karnataka Web karthik ton powers tamil nadu to deodhar trophy triumph
ಕಾರ್ತಿಕ್ ಮಿಂಚಿನ ಶತಕ; ತ.ನಾಡು ಮುಡಿಗೆ ದೇವಧರ್ ಟ್ರೋಫಿ


ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ತಮಿಳುನಾಡು ನಿಗದಿತ 50 ಓವರ್‌ಗಳಲ್ಲಿ 303 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಇದಕ್ಕುತ್ತರವಾಗಿ ಇಂಡಿಯಾ ಬಿ ತಂಡವು 46.1 ಓವರ್‌ಗಳಲ್ಲಿ 261 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

ಒಂದು ಹಂತದಲ್ಲಿ 11 ಓವರ್‌ಗಳಲ್ಲಿ 39 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ತಮಿಳುನಾಡು ಸಂಕಷ್ಟಕ್ಕೆ ಒಳಗಾಗಿತ್ತು. ಈ ಹಂತದಲ್ಲಿ ಜೊತೆಗೂಡಿದ ಕಾರ್ತಿಕ್ ಹಾಗೂ ನಾರಾಯಣ್ ಜಗದೀಶನ್ (55) ನಾಲ್ಕನೇ ವಿಕೆಟ್‌ಗೆ 136 ರನ್‌ಗಳ ಮಹತ್ವದ ಜೊತೆಯಾಟ ನೀಡಿದರು.

ಅಮೋಘ ಶತಕ ಸಿಡಿಸಿದ ದಿನೇಶ್ ಇನ್ನಿಂಗ್ಸ್‌ನಲ್ಲಿ 14 ಬೌಂಡರಿ ಹಾಗೂ ಮೂರು ಆಕರ್ಷಕ ಸಿಕ್ಸರ್‌ಗಳು ಸೇರಿದ್ದವು. ಇದಾದ ಬಳಿಕ ಐದನೇ ವಿಕೆಟ್‌ಗೆ ನಾಯಕ ವಿಜಯ್ ಶಂಕರ್ (21) ಜೊತೆಗೂ 66 ರನ್ ಗಳ ಜೊತೆಯಾಟ ನೀಡಿದ ತಂಡದ ಮೊತ್ತ 300ರ ಗಡಿ ದಾಟುವಲ್ಲಿ ನೆರವಾದರು. ಕೊನೆಗೆ ಬಂದ ಬಾಬಾ ಅಪರಾಜಿತ್ ಸಹ 31 ರನ್‌ಗಳ ಅಮೂಲ್ಯ ಸೇವೆ ನೀಡಿದರು.

ಮುಂಬೈ ಬಿ ತಂಡದ ಪರ ಅಮೋಘ ದಾಳಿ ಸಂಘಟಿಸಿದ ಧವಳ್ ಕುಲಕರ್ಣಿ ನಿಗದಿತ 10 ಓವರ್‌ನಲ್ಲಿ 39 ರನ್ ಬಿಟ್ಟುಕೊಟ್ಟು ಐದು ವಿಕೆಟ್‌ಗಳನ್ನು ಕಬಳಿಸಿದರು.

ಬಳಿಕ ಬೃಹತ್ ಮೊತ್ತ ಬೆನ್ನತ್ತಿದ ಇಂಡಿಯಾ ಬಿ ತಂಡಕ್ಕೆ ಆರಂಭದಲ್ಲೇ ಪಾರ್ಥಿವ್ ಪಟೇಲ್ ವಿಕೆಟ್ ನಷ್ಟವಾದರೂ ಮಗದೋರ್ವ ಓಪನರ್ ಶಿಖರ್ ಧವನ್ ಹಾಗೂ ಮನಿಶ್ ಪಾಂಡೆ ಎರಡನೇ ವಿಕೆಟ್‌ಗೆ 64 ರನ್‌ಗಳ ಮಹತ್ವದ ಜೊತೆಯಾಟ ನೀಡಿದರು. ಧವನ್ 34 ಎಸೆತಗಳಲ್ಲಿ 45 ಹಾಗೂ ಪಾಂಡೆ 24 ಬಾಲ್‌ಗಳಲ್ಲಿ 32 ರನ್ ಗಳಿಸಿ ಔಟಾಗುವುದರೊಂದಿಗೆ ತಂಡವು ಹಿನ್ನಡೆ ಅನುಭವಿಸಿತು.

ತಂಡದ ಪರ ಪಂಜಾಬ್‌ನ ಗುರ್‌ಕೀರಾತ್ ಸಿಂಗ್ ಗರಿಷ್ಠ 64 ರನ್ ಗಳಿಸಿದರು. ಇನ್ನುಳಿದಂತೆ ಇಶಾಂಕ್ ಜಗ್ಗಿ (36), ಅಕ್ಷಯ್ ಕರ್ನೆವಾರ್ (29), ಹರ್ಪಿತ್ ಸಿಂಗ್ (36) ಉಪಯುಕ್ತ ಬ್ಯಾಟಿಂಗ್ ಪ್ರದರ್ಶನ ನೀಡಿದರೂ ಗೆಲುವಿನ ಗೆರೆ ದಾಟಿಸಲಾಗಲಿಲ್ಲ. ತಮಿಳುನಾಡು ತಂಡದ ಪರ ರಾಹಿಲ್ ಶಹಾ ಮೂರು ಮತ್ತು ಆರ್ ಸಾಯ್ ಹಾಗೂ ಕೆ ಮೊಹಮ್ಮದ್ ತಲಾ ಎರಡು ವಿಕೆಟ್‌ಗಳನ್ನು ಹಂಚಿಕೊಂಡರು. ಅತ್ತ ದಿನೇಶ್ ಕಾರ್ತಿಕ್ ಪಂದ್ಯದ ಪುರುಷೋತ್ತಮನಾಗಿ ಹೊರಹೊಮ್ಮಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌