ಆ್ಯಪ್ನಗರ

ಚೊಚ್ಚಲ ಏಕದಿನ ಕ್ಯಾಪ್ ಧರಿಸಿದ ಖಲೀಲ್ ಅಹ್ಮದ್

ಯುಎಇನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ 2018 ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಭಾರತ ತಂಡವು ಕ್ರಿಕೆಟ್ ಕೂಸು ಹಾಂಕಾಂಗ್ ಸವಾಲನ್ನು ಎದುರಿಸುತ್ತಿದೆ.

Vijaya Karnataka Web 18 Sep 2018, 5:16 pm
ದುಬೈ: ಯುಎಇನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ 2018 ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಭಾರತ ತಂಡವು ಕ್ರಿಕೆಟ್ ಕೂಸು ಹಾಂಕಾಂಗ್ ಸವಾಲನ್ನು ಎದುರಿಸುತ್ತಿದೆ.
Vijaya Karnataka Web khaleel-ahmed


ಇದರಂತೆ ಇಲ್ಲಿನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಚೊಚ್ಚಲ ಪಂದ್ಯವನ್ನಾಡುವ ಅವಕಾಶವನ್ನು ಉದಯೋನ್ಮುಖ ಎಡಗೈ ವೇಗಿ ಖಲೀಲ್ ಅಹ್ಮದ್ ಪಡೆದಿದ್ದಾರೆ.

ಇದರೊಂದಿಗೆ ಏಕದಿನದಲ್ಲಿ ಭಾರತವನ್ನು ಪ್ರತಿನಿಧಿಸಿದ 222ನೇ ಆಟಗಾರ ಎಂಬ ಗೌರವಕ್ಕೆ ಖಲೀಲ್ ಪಾತ್ರವಾಗಿದ್ದಾರೆ.

ಈ ಮೊದಲು ಏಷ್ಯಾ ಕಪ್‌ಗಾಗಿನ ಟೀಮ್ ಇಂಡಿಯಾಕ್ಕೆ ಖಲೀಲ್ ಚೊಚ್ಚಲ ಬುಲಾವ್ ಪಡೆದಿದ್ದಾರೆ. ಇದರಂತೆ ಇಂಗ್ಲೆಂಡ್ ವಿರುದ್ಧದ ಸುದೀರ್ಘ ಸರಣಿಯ ಬಳಿಕ ತಂಡದ ಪ್ರಮುಖ ವೇಗಿಗಳಿಗೆ ವಿಶ್ರಾಂತಿ ಸೂಚಿಸಿರುವ ಹಿನ್ನಲೆಯಲ್ಲಿ ಖಲೀಲ್ ಅವಕಾಶವನ್ನು ಪಡೆದಿದ್ದಾರೆ.

20ರ ಹರೆಯದ ಈ ರಾಜಸ್ತಾನ ವೇಗಿ, 2016ರ ಕಿರಿಯರ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅಲ್ಲದೆ ಭಾರತ ರನ್ನರ್-ಅಪ್ ಪ್ರಶಸ್ತಿ ಜಯಿಸಿತ್ತು. ಅಂತೆಯೇ 2018 ಐಪಿಎಲ್ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತೆಕ್ಕೆಗೆ ಸೇರಿಕೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌