ಆ್ಯಪ್ನಗರ

ಕೊಹ್ಲಿ ಉತ್ತಮ ಬ್ಯಾಟ್ಸ್‌ಮನ್: ಗವಾಸ್ಕರ್

ಟಿ 20ಯಲ್ಲಿ ಭಾರತವನ್ನು ಸೆಮಿ ಫೈನಲ್‌ಗೆ ಕೊಂಡೊಯ್ದಿರುವ ವಿರಾಟ್ ಕೊಹ್ಲಿ ಜಗತ್ತಿನ ಉತ್ತಮ ಮತ್ತು ಅಸಾಧಾರಣ ಬ್ಯಾಟ್ಸ್‌ಮನ್. ಈ ಬಗ್ಗೆ ಅನುಮಾನವೇ ಇಲ್ಲ ಎಂದು ಮಾಜಿ ಕ್ಯಾಪ್ಟನ್ ಸುನಿಲ್ ಗವಾಸ್ಕರ್ ಹೊಗಳಿದ್ದಾರೆ.

ಏಜೆನ್ಸೀಸ್ 28 Mar 2016, 1:26 pm
ಹೊಸದಿಲ್ಲಿ: ಟಿ 20ಯಲ್ಲಿ ಭಾರತವನ್ನು ಸೆಮಿ ಫೈನಲ್‌ಗೆ ಕೊಂಡೊಯ್ದಿರುವ ವಿರಾಟ್ ಕೊಹ್ಲಿ ಜಗತ್ತಿನ ಉತ್ತಮ ಮತ್ತು ಅಸಾಧಾರಣ ಬ್ಯಾಟ್ಸ್‌ಮನ್. ಈ ಬಗ್ಗೆ ಅನುಮಾನವೇ ಇಲ್ಲ ಎಂದು ಮಾಜಿ ಕ್ಯಾಪ್ಟನ್ ಸುನಿಲ್ ಗವಾಸ್ಕರ್ ಹೊಗಳಿದ್ದಾರೆ.
Vijaya Karnataka Web kohli worlds best batsman gavaskar
ಕೊಹ್ಲಿ ಉತ್ತಮ ಬ್ಯಾಟ್ಸ್‌ಮನ್: ಗವಾಸ್ಕರ್


ಕೊಹ್ಲಿ ಭಾರತವನ್ನು ಸೆಮಿಫೈನಲ್‌ಗೆ ಒಯ್ಯುವಲ್ಲಿ ತೋರಿದ ನಿರ್ವಹಣೆಯ ಆ ಕ್ಷಣ ಅವರು ಜಗತ್ತಿನ ಉತ್ತಮ ಬ್ಯಾಟ್ಸ್‌ಮನ್ ಎಂದು ತೋರಿಸಿದೆ. ಅವರು ಅದ್ಭುತವನ್ನು ಮೀರಿದ್ದು ಈ ಬಗ್ಗೆ ಸಂಶಯ ಉಳಿದಿಲ್ಲ ಎಂದು ಗವಾಸ್ಕರ್ ಹೇಳಿದರು.

ಒತ್ತಡದಲ್ಲೂ ತಂಡವನ್ನು ಉತ್ಸಾಹದಿಂದ ಮುನ್ನಡೆಸುವ ಬುದ್ಧಿ, ಸಾಮರ್ಥ್ಯ ಅವರಲ್ಲಿದೆ. ಉದ್ವೇಗದ ಸನ್ನಿವೇಶದಲ್ಲೂ ಅವರು ಶಾಂತ ಚಿತ್ತರಾಗಿರುತ್ತಾರೆ. ಫೀಲ್ಡಿಂಗ್ ವೇಳೆ ಕೊಹ್ಲಿ ಎಷ್ಟೊಂದು ಉತ್ಸಾಹದಲ್ಲಿರುತ್ತಾರೆ. ಅದೇ ರೀತಿ ಬ್ಯಾಟ್ ಕೈಗೆ ಬಂದಾಗ ಮತ್ತೊಂದು ಬಗೆಯ ಉತ್ಸಾಹಿ ವ್ಯಕ್ತಿತ್ತ್ವ ಗೋಚರಿಸುತ್ತದೆ ಎಂದು ಗವಾಸ್ಕರ್ ಶ್ಲಾಘಿಸಿದರು.

ಇದೇ ವೇಳೆ ಮಹೇಂದ್ರ ಸಿಂಗ್ ಧೋನಿ ಅವರ ಆಟ ಕೂಡ ಗೆಲುವಿನಲ್ಲಿ ಮಹತ್ವದ್ದಾಗಿದೆ. ಎದುರಾಳಿಗಳ ಸಾಮರ್ಥ್ಯವನ್ನು ತಿಳಿಯುವ ಶಕ್ತಿ ಅವರಿಗಿದ್ದು, ಅದನ್ನನುಸರಿಸಿ ಆಟವಾಡಿದರು ಎಂದು ಗವಾಸ್ಕರ್ ಹೊಗಳಿದರು. ವೇಗಿ ಆಶಿಸ್ ನೆಹ್ರಾ ಅವರು ಉತ್ತಮ ನಿರ್ವಹಣೆ ತೋರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌