ಆ್ಯಪ್ನಗರ

ನಾಲ್ಕು ವಿಕೆಟುಗಳನ್ನು ಕಿತ್ತು ಮಿಂಚಿದ ಕೃುಣಾಲ್ ಪಾಂಡ್ಯ

ಟಿ-20ನಲ್ಲಿ ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದ ಕೃುಣಾಲ್ ಪಾಂಡ್ಯ

Vijaya Karnataka Web 25 Nov 2018, 3:31 pm
ಸಿಡ್ನಿ: ಆಸ್ಟ್ರೇಲಿಯಾ ವಿರುದ್ದ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ನಾಲ್ಕು ವಿಕೆಟುಗಳನ್ನು ಕಬಳಿಸಿರುವ ಆಲ್‌ರೌಂಡರ್ ಕೃುಣಾಲ್ ಪಾಂಡ್ಯ ಪ್ರಭಾವಿ ಎನಿಸಿಕೊಂಡಿದ್ದಾರೆ.
Vijaya Karnataka Web krunal-pandya-03


ಸೋದರ ಹಾರ್ದಿಕ್ ಪಾಂಡ್ಯ ಗಾಯಗೊಂಡ ಬಳಿಕ ಟೀಮ್ ಇಂಡಿಯಾಕ್ಕೆ ಚೊಚ್ಚಲ ಬುಲಾವ್ ಪಡೆದಿರುವ ಕೃುಣಾಲ್, ಟೀಮ್ ಇಂಡಿಯಾ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಿದ್ದಾರೆ.

ಗಬ್ಬಾದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸಾಕಷ್ಟು ದುಬಾರಿ ಎನಿಸಿಕೊಂಡರು ಮೆಲ್ಪೋರ್ನ್‌ನಲ್ಲಿ ಪರಿಣಾಮಕಾರಿ ಎನಿಸಿಕೊಂಡಿದ್ದರು. ಇದೀಗ ಮೂರನೇ ಪಂದ್ಯದಲ್ಲೂ ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ.

ಕಳೆದ ವೆಸ್ಟ್‌ಇಂಡೀಸ್ ಸರಣಿ ವೇಳೆ ಟಿ-20ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಕೃುಣಾಲ್ 36 ರನ್‌ಗಳಿಗೆ ನಾಲ್ಕು ವಿಕೆಟುಗಳನ್ನು ಕಬಳಿಸುವ ಮೂಲಕ ಜೀವನಶ್ರೇಷ್ಠ ಸಾಧನೆ ಮಾಡಿದ್ದರು.

ಕೃುಣಾಲ್ ದಾಳಿಯಲ್ಲಿ ಅಪಾಯಕಾರಿ ಡಾರ್ಸಿ ಶಾರ್ಟ್, ಗ್ಲೆನ್ ಮ್ಯಾಕ್ಸ್‌ವೆಲ್, ಡೆನ್ ಮೆಕ್‌ಡೆರ್ಮಾಟ್ ಹಾಗೂ ಅಲೆಕ್ಸ್ ಕ್ಯಾರಿ ಬಲಿಯಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌