ಆ್ಯಪ್ನಗರ

ಐತಿಹಾಸಿಕ 281 ಇನ್ನಿಂಗ್ಸ್‌ನಲ್ಲಿ ದ್ರಾವಿಡ್ ಪಾತ್ರವನ್ನು ಸ್ಮರಿಸಿದ ಲಕ್ಷ್ಮಣ್

ಅಂದು ಮ್ಯಾಚ್ ಫಿಟ್ನೆಸ್ ಸಹ ಹೊಂದಿರಲಿಲ್ಲ ಎಂಬ ಅಚ್ಚರಿಯ ಮಾಹಿತಿ ಬಹಿರಂಗಪಡಿಸಿದ ಲಕ್ಷ್ಮಣ್

Vijaya Karnataka Web 23 Nov 2018, 7:43 pm
ಮುಂಬಯಿ: ಆಸ್ಟ್ರೇಲಿಯಾ ವಿರುದ್ಧ 2001ನೇ ಇಸವಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಮಾಜಿ ಕಲಾತ್ಮಕ ಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್ ಮ್ಯಾಚ್ ವಿನ್ನಿಂಗ್ಸ್ 281 ರನ್ ಗಳಿಸಿದ್ದರು.
Vijaya Karnataka Web dravid-laxman-01


ಇದು ಟೆಸ್ಟ್ ಕ್ರಿಕೆಟ್‌ನ ಅತ್ಯಂತ ಶ್ರೇಷ್ಠ ಇನ್ನಿಂಗ್ಸ್‌ಗಳಲ್ಲಿ ಒಂದಾಗಿ ಪರಗಣಿಸಲ್ಪಟ್ಟಿದೆ. ಇದೀಗ ಲಕ್ಷ್ಮಣ್ ಬಿಡುಗಡೆ ಮಾಡಿರುವ '281 ಆ್ಯಂಡ್ ಬಿಯಾಂಡ್' ಪುಸಕ್ತದಲ್ಲಿ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಆ ಪಂದ್ಯದ ಪರಿಸ್ಥಿತಿಯನ್ನು ನೋಡಿದರೆ ಆಸ್ಟ್ರೇಲಿಯಾ ವಿರುದ್ಧ 281 ರನ್ ಗಳಿಸಿರುವುದು ನಿಜಕ್ಕೂ ಅದ್ಭುತ ಸಾಧನೆ ಎಂದು ಲಕ್ಷ್ಮಣ್ ಉಲ್ಲೇಖಿಸಿದ್ದಾರೆ.

ನಿಜ ಹೇಳಬೇಕೆಂದರೆ ನನಗೆ ಮ್ಯಾಚ್ ಫಿಟ್ನೆಸ್ ಇರಲಿಲ್ಲ. ಆದರೆ ಅಂದಿನ ಫಿಸಿಯೋ ಆಂಡ್ರ್ಯೂ ಲಿಪಸ್ ಅವರಿಂದಾಗಿ ನಾನು ಪಂದ್ಯ ಆಂಡುವಂತಾಗಿತ್ತು ಎಂದು ಲಕ್ಷ್ಮಣ್ ಸೇರಿಸಿದರು.

ಜೊತೆಯಾಟದುದ್ಧಕ್ಕೂ ನನ್ನ ಜೊತೆಗಾರ ರಾಹುಲ್ ದ್ರಾವಿಡ್ ನನ್ನನ್ನು ಹುರಿದುಂಬಿಸುತ್ತಲೇ ಇದ್ದರು. ಇದರಿಂದಾಗಿ ಅದ್ಭುತ ಇನ್ನಿಂಗ್ಸ್ ಕಟ್ಟುವಂತಾಗಿತ್ತು. ದ್ರಾವಿಡ್ ಜೊತೆಗಿನ ಜೊತೆಯಾಟದ ಪಂದ್ಯದ ಪಾಲಿಗೆ ಅತ್ಯಂತ ನಿರ್ಣಾಯಕವೆನಿಸಿತ್ತು ಎಂದು ಲಕ್ಷ್ಮಣ್ ಅನುಭವಗಳನ್ನು ಹಂಚಿಕೊಂಡರು.

ಕೋಲ್ಕತ್ತಾ ಇನ್ನಿಂಗ್ಸ್ ನನ್ನ ಕ್ರೀಡಾ ಜೀವನಕ್ಕೆ ಹೊಸ ತಿರುವನ್ನು ನೀಡಿತ್ತು. ಬಳಿಕ ಸಿಡ್ನಿಯಲ್ಲಿ 167 ರನ್ ಗಳಿಸಿರುವುದು ಆಟದ ಕಡೆಗೆ ನನ್ನ ದೃಷ್ಟಿಕೋನವನ್ನೇ ಬದಲಾಯಿಸಿತು ಎಂದರು.

ಲಕ್ಷ್ಮಣ್ ಪುಸ್ತಕದ ವೇಳೆ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಸೇರಿದಂತೆ ಮಾಜಿ ಖ್ಯಾತ ಕ್ರಿಕೆಟಿಗರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌