ಆ್ಯಪ್ನಗರ

ಟಿ-20ನಲ್ಲಿ ಫೇವರಿಟ್‌ಗಳಿಲ್ಲ: ರೋಹಿತ್

ಇಲ್ಲಿ ಸಾಗಲಿರುವ ಟ್ವೆಂಟಿ-20 ತ್ರಿಕೋನ ಸರಣಿಗೂ ಮುಂಚಿತವಾಗಿ ಪ್ರತಿಕ್ರಿಯಿಸಿರುವ ಭಾರತೀಯ ನಾಯಕ ರೋಹಿತ್ ಶರ್ಮಾ, ಚುಟುಕು ಕ್ರಿಕೆಟ್‌ನಲ್ಲಿ ಫೇವರಿಟ್‌ಗಳಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

TIMESOFINDIA.COM 6 Mar 2018, 2:45 pm
ಕೊಲಂಬೊ: ಇಲ್ಲಿ ಸಾಗಲಿರುವ ಟ್ವೆಂಟಿ-20 ತ್ರಿಕೋನ ಸರಣಿಗೂ ಮುಂಚಿತವಾಗಿ ಪ್ರತಿಕ್ರಿಯಿಸಿರುವ ಭಾರತೀಯ ನಾಯಕ ರೋಹಿತ್ ಶರ್ಮಾ, ಚುಟುಕು ಕ್ರಿಕೆಟ್‌ನಲ್ಲಿ ಫೇವರಿಟ್‌ಗಳಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web like epl no favourites in t20 format too rohit sharma
ಟಿ-20ನಲ್ಲಿ ಫೇವರಿಟ್‌ಗಳಿಲ್ಲ: ರೋಹಿತ್


ಖಾಯಂ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಪ್ರಮುಖ ಆಟಗಾರರಿಗೆ ವಿಶ್ರಾಂತಿ ಸೂಚಿಸಿರುವ ಹಿನ್ನಲೆಯಲ್ಲಿ ಯುವ ಆಟಗಾರರಿಂದ ತುಂಬಿಕೊಂಡಿರುವ ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸುತ್ತಿದ್ದಾರೆ.

ಆತಿಥೇಯ ಶ್ರೀಲಂಕಾ ಹೊರತಾಗಿ ಬಾಂಗ್ಲಾದೇಶ ಸರಣಿಯಲ್ಲಿ ಭಾಗವಹಿಸುತ್ತಿರುವ ಮೂರನೇ ತಂಡವಾಗಿದೆ.

ಭಾರತ ನೆಚ್ಚಿನ ತಂಡವೇ ಎಂಬ ಪ್ರಶ್ನೆಗೆ ಉತ್ತರವಾಗಿ ನಾವು ಫೇವರಿಟ್ ಹೌದೇ ಅಲ್ಲವೇ ಎಂಬುದರ ಬಗ್ಗೆ ನಾನು ಯೋಚಿಸುತ್ತಿಲ್ಲ ಎಂದಿದ್ದಾರೆ.

ಟ್ವೆಂಟಿ-20 ಪ್ರಕಾರದ ಕ್ರಿಕೆಟ್‌ನಲ್ಲಿ ಆ ನಿರ್ದಿಷ್ಟ ದಿನದಲ್ಲಿ ಯಾರೇ ಗೆಲುವು ದಾಖಲಿಸಬಹುದು. ಕೇವಲ ಒಂದು ಓವರ್‌ ಅಥವಾ ಕೆಲವೇ ಕ್ಷಣಗಳಲ್ಲಿ ಪಂದ್ಯ ಬದಲಾಗಬಲ್ಲದು. ನಾನೇಗೆ ವಿವರಿಸಲಿ? ಬಹುಶ: ಇಂಗ್ಲಿಂಷ್ ಪ್ರೀಮಿಯರ್‌ಗೆ ಲೀಗ್‌ಗೆ ಸಮಾನ. ಕೆಲವು ತಂಡಗಳು ಬಲಶಾಲಿಯಾಗಿರಬಹುದು. ಆದರೆ ಗೆಲ್ಲಲು ಎಲ್ಲರಿಗೂ ಮುಕ್ತ ಅವಕಾಶ ಎಂದರು.

ದ್ವಿತೀಯ ದರ್ಜೆಯ ಭಾರತೀಯ ತಂಡದ ಬಗ್ಗೆ ಪ್ರತಿಕ್ರಿಯಿಸಿರುವ ರೋಹಿತ್, ನಾನು ಆ ರೀತಿಯಾಗಿ ನೋಡುತ್ತಿಲ್ಲ. ನನ್ನ ಪಾಲಿಗೆ ಭಾರತ ತಂಡವನ್ನು ಮುನ್ನಡೆಸುವ ಅವಕಾಶ ದೊರಕಿರುವುದು ಮಹತ್ತರವೆನಿಸಿದೆ ಎಂದರು.

ಈಗಿನ ಬಿಡುವಿಲ್ಲದ ಕ್ರಿಕೆಟ್‌ನ್ನು ಪರಿಗಣಿಸಿದಾಗ ಆಟಗಾರರಿಗೆ ಬೇಕಾದಷ್ಟು ವಿಶ್ರಾಂತಿ ನೀಡುವುದು ಅಗತ್ಯವೆನಿಸಿದೆ. ನನ್ನ ಪಾಲಿಗೆ ಕಪ್ತಾನಗಿರಿ ಗೌರವವಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌