ಆ್ಯಪ್ನಗರ

ನಿಮ್ಮ ಪ್ರೀತಿಗೆ ನಾನು ಆಭಾರಿ: ಬೆಂಗಳೂರಿನಲ್ಲಿ ಸೌರವ್ ಗಂಗೂಲಿ

ಬೆಂಗಳೂರಿಗೆ ಆಗಮಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನೂತನ ಅಧ್ಯಕ್ಷ ಸೌರವ್ ಗಂಗೂಲಿ, ಜನರ ಪ್ರೀತಿಗೆ ಆಭಾರಿಯಾಗಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಸೆಲ್ಫಿ ಚಿತ್ರವನ್ನು ಹಂಚಿದ್ದಾರೆ.

Vijaya Karnataka Web 31 Oct 2019, 10:34 am
ಬೆಂಗಳೂರು: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಾಜಿ ನಾಯಕ ಸೌರವ್ ಗಂಗೂಲಿ, ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ್ದರು.
Vijaya Karnataka Web sourav-ganguly-03


ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭೇಟಿ ಕೊಟ್ಟಿರುವ ಗಂಗೂಲಿ, ಎನ್‌ಸಿಎ ಮುಖ್ಯಸ್ಥ ಹಾಗೂ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರನ್ನು ಭೇಟಿ ಮಾಡಿದರು. ಈ ವೇಳೆಯಲ್ಲಿ ರಾಷ್ಟ್ರಯೀ ಕ್ರಿಕೆಟ್ ಅಕಾಡೆಮಿ ಉನ್ನತಿಗಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ.

ಚೊಚ್ಚಲ ಪಿಂಕ್ ಬಾಲ್ ಟೆಸ್ಟ್ ಆಡಲು ಭಾರತಕ್ಕೆ ಯಾರು ನೆರವಾಗಲಿದ್ದಾರೆ ಗೊತ್ತಾ?

ಬೆಂಗಳೂರು ವಿಮಾನ ನಿಲ್ಡಾಣಕ್ಕೆ ಬಂದಿಳಿದ ಸೌರವ್ ಗಂಗೂಲಿಗೆ ಅಭಿಮಾನಿಗಳು ಹೃತ್ಪೂರ್ವಕ ಸ್ವಾಗತವನ್ನು ಕೋರಿದರು. ಗಂಗೂಲಿ ಎಲ್ಲೇ ತೆರಳಿದರೂ ಜನರು ಜೈಕಾರ ಕೂಗುವ ಮೂಲಕ ಚಾಂಪಿಯನ್ ಆಟಗಾರನಿಗೆ ತಮ್ಮ ಪ್ರೀತಿಯನ್ನು ತೋರಿಸುತ್ತಿದ್ದಾರೆ.

ಇದೀಗ ಜನರ ಪ್ರೀತಿಗೆ ಆಭಾರಿಯಾಗಿದ್ದೇನೆ ಎಂದು ಗಂಗೂಲಿ ತಿಳಿಸಿದ್ದಾರೆ. ಅಲ್ಲದೆ ಟ್ವಿಟರ್‌ನಲ್ಲಿ ಅಭಿಮಾನಿಗಳ ಜತೆಗಿನ ಸೆಲ್ಪಿ ಚಿತ್ರವನ್ನು ಹಂಚಿದ್ದಾರೆ.

ಭಾರತದ ಅತ್ಯಂತ ಯಶಸ್ವಿ ಮಾಜಿ ನಾಯಕರಾಗಿರುವ ಸೌರವ್ ಗಂಗೂಲಿ, ಅಕ್ಟೋಬರ್ 23ರಂದು ಅವಿರೋಧವಾಗಿ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಎನ್‌ಸಿಎ ಅಭಿವೃದ್ಧಿ ಬಗ್ಗೆ ಚರ್ಚಿಸಿದ ದಾದಾ-ದ್ರಾವಿಡ್‌, ತಲೆಯೆತ್ತಲಿದೆ ಹೊಸ ಕೇಂದ್ರ!

ಎನ್‌ಸಿಎ ಅಧಿಕಾರಿಗಳೊಂದಿಗೆ ಸೌರವ್ ಗಂಗೂಲಿ ಎನ್‌ಸಿಎ ಸೌಲಭ್ಯ ನಿರ್ಮಿಸಲು ಉದ್ದೇಶಿಸಿರುವ ಸ್ಥಳಕ್ಕೆ ಭೇಟಿಕೊಟ್ಟರು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅತ್ಯುತ್ತಮ ಕೇಂದ್ರವನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ಕ್ರಿಕೆಟ್ ಆಡಳಿತ ಮಂಡಳಿಗೆ ಕರ್ನಾಟಕ ಸರಕಾರದಿಂದ ಹೆಚ್ಚುವರಿಯಾಗಿ 15 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಬಿಸಿಸಿಐ ರಾಜ್ಯ ಸರಕಾರದೊಂದಿಗೆ 25 ಎಕರೆ ಒಪ್ಪಂದವನ್ನು ಕಳೆದ ಮೇನಲ್ಲಿ ಪೂರ್ಣಗೊಳಿಸಿದ್ದು, ಸೌಲಭ್ಯದ ಒಟ್ಟು ವಿಸ್ತೀರ್ಣ ಈಗ 40 ಎಕರೆಯಾಗಿದೆ.

ಹಲವು ಪ್ರಥಮಗಳಿಗೆ ಸಾಕ್ಷಿಯಾಗಿರುವ 'ಈಡನ್ ಗಾರ್ಡನ್' ಮೈದಾನದ ಬಗ್ಗೆ ನಿಮಗೆಷ್ಟು ಗೊತ್ತು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌