ಆ್ಯಪ್ನಗರ

ಐಪಿಎಲ್‌ನಿಂದ ಕ್ರಿಸ್‌ ಲಿನ್‌ ಔಟ್‌?

ಏಜೆನ್ಸೀಸ್‌ ಮುಂಬಯಿ ಎಡ ಭುಜದ ಗಾಯಕ್ಕೊಳಗಾಗಿರುವ ಕೋಲ್ಕೊತಾ ನೈಟ್‌ ರೈಡರ್ಸ್‌ ತಂಡದ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್‌ ಕ್ರಿಸ್‌ ಲಿನ್‌ ಐಪಿಎಲ್‌ನ ಮುಂದಿನ ಪಂದ್ಯಗಳಿಗೆ ...

ಏಜೆನ್ಸೀಸ್ 11 Apr 2017, 4:00 am

ಮುಂಬಯಿ: ಎಡ ಭುಜದ ಗಾಯಕ್ಕೊಳಗಾಗಿರುವ ಕೋಲ್ಕೊತಾ ನೈಟ್‌ ರೈಡರ್ಸ್‌ ತಂಡದ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್‌ ಕ್ರಿಸ್‌ ಲಿನ್‌ ಐಪಿಎಲ್‌ನ ಮುಂದಿನ ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆ ದಟ್ಟವಾಗಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮುಂಬಯಿ ಇಂಡಿಯನ್ಸ್‌ ವಿರುದ್ಧದ ಪಂದ್ಯದ ವೇಳೆ ಕ್ಯಾಚ್‌ ಪಡೆಯಲು ಜಿಗಿದಾಗ ಕ್ರಿಸ್‌ ಲಿನ್‌ ಅವರ ಭುಜಕ್ಕೆ ಗಾಯವಾಗಿತ್ತು. ಕೂಡಲೇ ಮೈದಾನ ತೊರೆದ ಆಸ್ಪ್ರೇಲಿಯಾದ ಲಿನ್‌ ಅವರಿಗೆ ಫಿಸಿಯೊ ಆ್ಯಂಡ್ರ್ಯೂ ಲೀಪಸ್‌ ಡ್ರೆಸಿಂಗ್‌ ರೂಂನಲ್ಲಿ ಪ್ರಥಮ ಚಿಕಿತ್ಸೆ ನೀಡಿದ್ದರು. ಕಳೆದೆರಡು ವರ್ಷಗಳಲ್ಲಿ ಕ್ರಿಸ್‌ ಲಿನ್‌ ಅವರ ಎಡ ಭುಜಕ್ಕೆ ಆಗಿರುವ ಮೂರನೇ ಗಾಯ ಇದಾಗಿದೆ.

ಗಾಯಗೊಂಡ ನಂತರ ಹತಾಶೆಯಲ್ಲಿ ಟ್ವೀಟ್‌ ಮಾಡಿರುವ ಕ್ರಿಸ್‌ ಲಿನ್‌,''ಪ್ರೀತಿಯ ಕ್ರಿಕೆಟ್‌ ದೇವರೇ, ನಾನೇನಾದರೂ ತಪ್ಪು ಮಾಡಿದ್ದೇನೆಯೇ,'' ಎಂದು ಪ್ರಶ್ನಿಸಿದ್ದಾರೆ. ಸೋಮವಾರ 27ನೇ ಹುಟ್ಟು ಹಬ್ಬ ಆಚರಿಸಿಕೊಂಡಿರುವ ಲಿನ್‌, ಎಂಆರ್‌ಐ ಸ್ಕ್ಯಾ‌ನಿಂಗ್‌ಗೊಳಗಾಗಿದ್ದಾರೆ.

ನೈಟ್‌ ರೈಡರ್ಸ್‌ ತಂಡದ ಮ್ಯಾಚ್‌ ವಿನ್ನರ್‌ ಆಗಿರುವ ಕ್ರಿಸ್‌ ಲಿನ್‌, ಗುಜರಾತ್‌ ಲಯನ್ಸ್‌ ವಿರುದ್ಧದ ಮೊದಲ ಪಂದ್ಯದಲ್ಲಿ ಕೇವಲ 41 ಎಸೆತಗಳಲ್ಲಿ ಅಜೇಯ 93 ರನ್‌ ಸಿಡಿಸಿ ಅಬ್ಬರಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌