ಆ್ಯಪ್ನಗರ

ಮ್ಯಾಂಚೆಸ್ಟರ್ ದಾಳಿ; ಟೀಮ್ ಇಂಡಿಯಾ ಭದ್ರತೆ ಬಗ್ಗೆ ಬಿಸಿಸಿಐ ಕಳವಳ

ಇಂಗ್ಲೆಂಡ್‌ನ ಮ್ಯಾಂಚೆಸ್ಟರ್ ನಗರದಲ್ಲಿ ನಡೆದ ಭೀಕರ ದಾಳಿಯ ಹಿನ್ನಲೆಯಲ್ಲಿ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ ಟೀಮ್ ಇಂಡಿಯಾ ಆಟಗಾರರ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೀವ್ರ ಕಳವಳವನ್ನು ವ್ಯಕ್ತಪಡಿಸಿದೆ.

ಏಜೆನ್ಸೀಸ್ 23 May 2017, 6:34 pm
ಹೊಸದಿಲ್ಲಿ: ಇಂಗ್ಲೆಂಡ್‌ನ ಮ್ಯಾಂಚೆಸ್ಟರ್ ನಗರದಲ್ಲಿ ನಡೆದ ಭೀಕರ ದಾಳಿಯ ಹಿನ್ನಲೆಯಲ್ಲಿ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ ಟೀಮ್ ಇಂಡಿಯಾ ಆಟಗಾರರ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೀವ್ರ ಕಳವಳವನ್ನು ವ್ಯಕ್ತಪಡಿಸಿದೆ.
Vijaya Karnataka Web manchester blasts have raised security concerns over icc champions trophy
ಮ್ಯಾಂಚೆಸ್ಟರ್ ದಾಳಿ; ಟೀಮ್ ಇಂಡಿಯಾ ಭದ್ರತೆ ಬಗ್ಗೆ ಬಿಸಿಸಿಐ ಕಳವಳ


ಇದರಂತೆ ತುರ್ತು ಸಭೆಯನ್ನು ಕರೆದಿರುವ ಬಿಸಿಸಿಐ, ತಮ್ಮ ಆತಂಕವನ್ನು ವ್ಯಕ್ತಪಡಿಸುತ್ತಾ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ಪತ್ರವನ್ನು ಬರೆದಿದೆ.

ಸೋಮವಾರ ರಾತ್ರಿ ಅಮೆರಿಕ ಪಾಪ್ ಗಾಯಕ ಅರಿನಾ ಗ್ರಾಂಡೆ ಅವರು ಮ್ಯಾಂಚೆಸ್ಟರ್‌ನಲ್ಲಿ ನಡೆಸುತ್ತಿದ್ದ ಕಾರ್ಯಕ್ರಮದ ಸ್ಥಳದಲ್ಲಿ ಬಾಂಬ್ ಸ್ಫೋಟ ನಡೆದಿತ್ತು. ಘಟನೆಯಲ್ಲಿ 22 ಮಂದಿ ಮೃತಪಟ್ಟಿದ್ದರೆ ಇತರೆ ಅನೇಕರು ಗಾಯಗೊಂಡಿದ್ದರು.

ಇದರೊಂದಿಗೆ ಜೂನ್ ತಿಂಗಳಲ್ಲಿ ಇಂಗ್ಲೆಂಡ್ ಆಯೋಜಿಸುತ್ತಿರುವ ಚಾಂಪಿಯನ್ಸ್ ಟ್ರೋಫಿ ಬಗ್ಗೆ ಕಳವಳ ವ್ಯಕ್ತವಾಗಿದೆ. ಆಟಗಾರರ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಬಿಸಿಸಿಐ ತುರ್ತು ಸಭೆಯನ್ನು ಕರೆದಿತ್ತು.

ಈ ನಡುವೆ ಪ್ರತಿಕಾ ಪ್ರಕಟಣೆ ಹೊರಡಿಸುರುವ ಐಸಿಸಿ, ಮ್ಯಾಂಚೆಸ್ಟರ್ ಭೀಕರ ದಾಳಿಗೆ ಬಲಿಯಾಗಿರುವ ಕುಟುಂಬದೊಂದಿಗೆ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದು, ಐಸಿಸಿ ಹಾಗೂ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಮುಂಬರುವ ಚಾಂಪಿಯನ್ಸ್ ಟ್ರೋಫಿ ಹಾಗೂ ಮಹಿಳಾ ವಿಶ್ವಕಪ್ ಯಶಸ್ವಿ ಆಯೋಜನೆಯನ್ನು ಖಾತ್ರಿಪಡಿಸಲಿದೆ ಎಂದಿದೆ.

15 ಸದಸ್ಯರ ಟೀಮ್ ಇಂಡಿಯಾ ಬುಧವಾರ ರಾತ್ರಿ ಇಂಗ್ಲೆಂಡ್ ವಿಮಾನವನ್ನೇರಲಿದ್ದು, ಮೇ 28 ಹಾಗೂ 30ರಂದು ಅನುಕ್ರಮವಾಗಿ ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶಗಳ ವಿರುದ್ಧ ಅಭ್ಯಾಸ ಪಂದ್ಯಗಳಲ್ಲಿ ಭಾಗವಹಿಸಲಿದೆ.

ಅಂದ ಹಾಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜೂನ್ 1ರಂದು ಆರಂಭವಾಗಲಿದೆ. ಅಂತೆಯೇ ಜೂನ್ 4ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ವಿರಾಟ್ ಕೋಹ್ಲಿ ಪಡೆ ಸಂಪ್ರದಾಯಕ ಬದ್ದ ಎದುರಾಳಿ ಪಾಕಿಸ್ತಾನ ಸವಾಲನ್ನು ಎದುರಿಸಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌