ಆ್ಯಪ್ನಗರ

ಭಾರತದ ನಂ.4 ಸಮಸ್ಯೆಗೆ ಉತ್ತರವಾಗಲಿದ್ದಾರೆಯೇ ಮನೀಶ್ ಪಾಂಡೆ?

ಐಪಿಎಲ್ ಹಾಗೂ ಭಾರತ ಎ ತಂಡದ ಗಮನಾರ್ಹ ಪ್ರದರ್ಶನವನ್ನು ನೀಡಿರುವ ಕರ್ನಾಟಕದ ಮನೀಶ್ ಪಾಂಡೆ, ಮುಂಬರುವ ವೆಸ್ಟ್‌ಇಂಡೀಸ್ ಸರಣಿ ವೇಳೆಯಲ್ಲಿ ಟೀಮ್ ಇಂಡಿಯಾಗೆ ಕಮ್‌ಬ್ಯಾಕ್ ಮಾಡಿಕೊಳ್ಳುವ ಗುರಿಯನ್ನಿರಿಸಿದ್ದಾರೆ.

Vijaya Karnataka Web 18 Jul 2019, 2:08 pm
ಹೊಸದಿಲ್ಲಿ: ಕಳೆದೆರಡು ವರ್ಷಗಳಿಂದ ನಾಲ್ಕನೇ ಕ್ರಮಾಂಕದಲ್ಲಿ ಆಡಲು ಯಾರು ಸೂಕ್ತವಾಗಲಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿವಾದಗಳು ಹುಟ್ಟಿಕೊಂಡಿದೆ. ಅನೇಕ ಆಟಗಾರರನ್ನು ಪ್ರಯೋಗ ಮಾಡಿದರೂ ಯಾವುದೇ ಫಲ ಕಾಣಲಿಲ್ಲ.
Vijaya Karnataka Web manish-pandey-02


ಬಳಿಕ ಏಕದಿನ ವಿಶ್ವಕಪ್‌ನಲ್ಲಿ ಮಧ್ಯಮ ಕ್ರಮಾಂಕದ ವೈಫಲ್ಯದಿಂದಾಗಿಯೇ ಭಾರತ ಸೆಮಿಫೈನಲ್‌ನಲ್ಲಿ ಮುಗ್ಗರಿಸಬೇಕಾಯಿತು. ಈ ಮೂಲಕ ಭಾರಿ ಬೆಲೆಯನ್ನೇ ತೆರಬೇಕಾಯಿತು.

ಈ ಪೈಕಿ ಮನೀಶ್ ಪಾಂಡೆ ಅವರಿಗೂ ಸೀಮಿತ ಅವಕಾಶಗಳನ್ನು ನೀಡಲಾಗಿತ್ತು. ಕ್ರಮೇಣ ತಂಡದಿಂದ ಹೊರದಬ್ಬಲಾಗಿದೆ. ಇದೀಗ ಭಾರತ ಎ ತಂಡದ ಪರ ನಾಯಕನಾಗಿ ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ಟೀಮ್ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವ ನಿರೀಕ್ಷೆ ಮೂಡಿಸಿದ್ದಾರೆ.

ಈ ಬಗ್ಗೆ ಸ್ವತ: ಮನೀಶ್ ಪಾಂಡೆ ಕೂಡಾ ಆಶಾಭಾವನೆ ಮೂಡಿಸಿದ್ದಾರೆ. ಅಲ್ಲದೆ ಕಳೆದ ಐಪಿಎಲ್‌ನಲ್ಲೂ ತಮ್ಮ ಪ್ರದರ್ಶನವನ್ನು ಮೆಲುಕು ಹಾಕಿದ್ದಾರೆ.

29ರ ಹರೆಯದ ಮನೀಶ್ ಕೊನೆಯದಾಗಿ 2018 ನವೆಂಬರ್ ತವರಿನಲ್ಲಿ ನಡೆದ ಟ್ವೆಂಟಿ-20 ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಬಳಿಕ ಐಪಿಎಲ್‌ನಲ್ಲಿ 12 ಪಂದ್ಯಗಳಲ್ಲಿ 344 ರನ್ ಪೇರಿಸಿದ್ದರು.

ಕಳೆದೆರಡು ವರ್ಷಗಳಿಂದ ಭಾರತ ಎ ತಂಡವನ್ನು ಮುನ್ನಡೆಸುತ್ತಿದ್ದು, ಉತ್ತಮ ಪ್ರದರ್ಶನವನ್ನೇ ನೀಡಿದ್ದೇವೆ. ಗುಣಮಟ್ಟದ ಕ್ರಿಕೆಟ್ ಆಡಿದ್ದರಿಂದ ಚಾಂಪಿಯನ್ ಆಗಿ ಮೂಡಿಬಂದಿದ್ದೇವೆ. ಉತ್ತಮ ದಿನಚರಿ ಹಾಗೂ ಫಿಟ್ನೆಸ್ ಕಾಪಾಡಿದ್ದರಿಂದ ಯಶಸ್ಸು ದಕ್ಕಿದೆ ಎಂದಿದ್ದಾರೆ.

ಹೆಚ್ಚೆಚ್ಚು ರನ್ ಗಳಿಸುವ ಮೂಲಕ ತಂಡಕ್ಕೆ ಪುನರಾಗಮನ ಮಾಡಬಹುದಾಗಿದೆ. ಇತ್ತೀಚೆಗಿನ ಸರಣಿಗಳು ನನ್ನ ಪಾಲಿಗೆ ಉತ್ತಮವಾಗಿ ಪರಿಣಮಿಸಿದೆ ಎಂದರು.

ವೆಸ್ಟ್‌ಇಂಡೀಸ್ ಎ ವಿರುದ್ಧ ನಡೆದ ಪಂದ್ಯದಲ್ಲಿ ಪಾಂಡೆ 87 ಎಸೆತಗಳಲ್ಲೇ ಅಮೋಘ ಶತಕ ಬಾರಿಸಿದ್ದರು. ಬಿಸಿಸಿಐ ಆಯ್ಕೆ ಸಮಿತಿ ಇದೀಗ ಜುಲೈ 19 ಶುಕ್ರವಾರಂದು ವಿಂಡೀಸ್‌ಗಾಗಿನ ಭಾರತ ತಂಡವನ್ನು ಆರಿಸಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌