ಆ್ಯಪ್ನಗರ

ಮಿಂಚಿದ ಪಾಂಡೆ; ಅಪ್ಘಾನ್ ವಿರುದ್ಧ ಭಾರತಕ್ಕೆ ಜಯ

ನಾಯಕ ಮನೀಶ್ ಪಾಂಡೆ ಮತ್ತು ರಿಷಬ್ ಪಂತ್ ಅವರ ಆಕರ್ಷಕ ಅರ್ಧಶತಕಗಳ ನೆರವಿನಂದ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ತ್ರಿಕೋನ ಏಕದಿನ ಸರಣಿಯಲ್ಲಿ ಅಪಘಾನಿಸ್ತಾನ ಎ ತಂಡದ ವಿರುದ್ಧ ಭಾರತ ಎ ತಂಡವು 113 ರನ್‌ಗಳ ಅಂತರದ ಬೃಹತ್ ಗೆಲುವು ದಾಖಲಿಸಿದೆ.

ಟೈಮ್ಸ್ ಆಫ್ ಇಂಡಿಯಾ 2 Aug 2017, 9:34 am
ಪ್ರೆಟೊರಿಯಾ: ನಾಯಕ ಮನೀಶ್ ಪಾಂಡೆ ಮತ್ತು ರಿಷಬ್ ಪಂತ್ ಅವರ ಆಕರ್ಷಕ ಅರ್ಧಶತಕಗಳ ನೆರವಿನಂದ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ತ್ರಿಕೋನ ಏಕದಿನ ಸರಣಿಯಲ್ಲಿ ಅಪಘಾನಿಸ್ತಾನ ಎ ತಂಡದ ವಿರುದ್ಧ ಭಾರತ ಎ ತಂಡವು 113 ರನ್‌ಗಳ ಅಂತರದ ಬೃಹತ್ ಗೆಲುವು ದಾಖಲಿಸಿದೆ.
Vijaya Karnataka Web manish pandey guides india a to a 113 run win over afghanistan a
ಮಿಂಚಿದ ಪಾಂಡೆ; ಅಪ್ಘಾನ್ ವಿರುದ್ಧ ಭಾರತಕ್ಕೆ ಜಯ


ಈ ಮೂಲಕ ಸರಣಿಯಲ್ಲಿ ಎರಡನೇ ಗೆಲುವು ದಾಖಲಿಸಿದೆ. ಪಾಂಡೆ 87 ಎಸೆತಗಳಲ್ಲಿ 86 ರನ್ ಗಳಿಸಿದರೆ ರಿಷಬ್ ಪಂತ್ 59 ಎಸೆತಗಳಿಂದ 60 ರನ್ ಬಾರಿಸಿದರು. ಕೊನೆಯಲ್ಲಿ ಮಿಂಚಿನ ಆಟ ಪ್ರದರ್ಶಿಸಿದ ಕುೃನಾಲ್ ಪಾಂಡ್ಯ ಕೇವಲ 27 ಎಸೆತಗಳಲ್ಲಿ 48 ರನ್ ಚಚ್ಚುವ ಮೂಲಕ ಭಾರತದ ಮೊತ್ತವನ್ನು ಐದು ವಿಕೆಟ್ ನಷ್ಟಕ್ಕೆ 322 ರನ್‌ಗಳಿಗೆ ಏರಿಸಿದರು.

ಪಾಂಡ್ಯ ಇನ್ನಿಂಗ್ಸ್‌ನಲ್ಲಿ ಒಂಬತ್ತು ಬೌಂಡರಿ ಹಾಗೂ ಸಿಕ್ಸರ್ ಸೇರಿದ್ದವು. ಇನ್ನೊಂದೆಡೆ ಪಂತ್ ಐದು ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿದ್ದರು. ಅತ್ತ ಕುೃನಾಲ್ ಏಳು ಬೌಂಡರಿ ಹಾಗೂ ಸಿಕ್ಸರ್ ಬಾರಿಸಿದ್ದರು.

ಬಳಿಕ ಪರಿಣಾಮಕಾರಿ ದಾಳಿ ಸಂಘಟಿಸಿದ ಭಾರತೀಯ ಎ ತಂಡವು ಅಪ್ಘಾನ್ ತಂಡವನ್ನು 209 ರನ್‌ಗಳಿಗೆ ನಿಯಂತ್ರಿಸಿತ್ತು. ಭಾರತದ ಪರ ಮೊಹಮ್ಮದ್ ಸಿರಾಜ್ ಮೂರು, ವಿಜಯ್ ಶಂಕರ್ ಮತ್ತು ಸಿದ್ದಾರ್ಥ್ ಕೌಲ್ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.

manish pandey guides india a to a 113-run win over afghanistan a

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌