ಆ್ಯಪ್ನಗರ

ಆಟದ ಜತೆಗೆ ಕೆಲಸದ ಮಿಶ್ರಣ; ರಾಷ್ಟ್ರೀಯ ಕ್ರೀಡಾ ದಿನಾಚರಣೆಯಂದು ಫಿಟ್ ಇಂಡಿಯಾ ಅಭಿಯಾನಕ್ಕೆ ಸಚಿನ್ ಬೆಂಬಲ!

ರಾಷ್ಟ್ರೀಯ ಕ್ರೀಡಾ ದಿನಾಚರಣೆಯಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೂತನ ಫಿಟ್ ಇಂಡಿಯಾ ಅಭಿಯಾನಕ್ಕೆ ಭಾರತದ ಮಾಜಿ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಬೆಂಬಲ ಸೂಚಿಸಿದ್ದಾರೆ.

Vijaya Karnataka Web 29 Aug 2019, 5:06 pm
ಹೊಸದಿಲ್ಲಿ: ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಜನ್ಮದಿನವಾದ ಆಗಸ್ಟ್ 29ರಂದು (ಇಂದು) ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಅದೇ ರೀತಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅತಿ ವಿಶಿಷ್ಟವಾದ ಫಿಟ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
Vijaya Karnataka Web sachin-tendulkar-01


ಮಾಜಿ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಸಹ ರಾಷ್ಟ್ರೀಯ ಕ್ರೀಡಾ ದಿನಾಚರಣೆಯಂದು ಫಿಟ್ ಇಂಡಿಯಾ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದು, ಆಟದ ಜತೆಗೆ ಕೆಲಸವನ್ನು ಮಿಶ್ರಣ ಮಾಡುವಂತೆ ಸಲಹೆ ಮಾಡಿದ್ದಾರೆ.

ಇತರೆಲ್ಲ ಸೆಲೆಬ್ರಿಟಿಗಿಂತಲೂ ವಿಭಿನ್ನವಾಗಿ ಮಹಿಳಾ ವೃದ್ದಾಶ್ರಮಕ್ಕೆ ಭೇಟಿ ನೀಡಿರುವ ಸಚಿನ್ ತೆಂಡೂಲ್ಕರ್, ಅಜ್ಜಿಯರೊಂದಿಗೆ ಕ್ಯಾರಮ್ ಆಟವನ್ನು ಆಡುವ ಮೂಲಕ ಗಮನ ಸೆಳೆದರು. ಅವರು ತೋರಿರುವ ಪ್ರೀತಿಯಿಂದ ಆಶೀರ್ವಾದ ಸಿಕ್ಕಂತಾಗಿದೆ ಎಂದವರು ಹೇಳಿದರು.

ತದಾ ಬಳಿಕ ವಿನೋದ್ ಕಾಂಬ್ಳಿ ಸೇರಿದಂತೆ ತಮ್ಮ ಸ್ನೇಹಿತರೊಂದಿಗೆ ಟೆನಿಸ್ ಆಟವನ್ನು ಆಡುವ ಮೂಲಕ ಸಚಿನ್ ಗಮನ ಸೆಳೆದರು. ಸಚಿನ್ ಹಂಚಿಕೊಂಡಿರುವ ಮಗದೊಂದು ಟ್ವೀಟ್‌ನಲ್ಲಿ ಬಾಲಿವುಡ್ ಸ್ಟಾರ್‌ಗಳಾದ ವರುಣ್ ಧವನ್ ಹಾಗೂ ಅಭಿಷೇಕ್ ಬಚ್ಚನ್ ಜತೆಗೆ ಗಲ್ಲಿ ಕ್ರಿಕೆಟ್ ಆಡುವ ಮೂಲಕ ಕ್ರೀಡಾ ದಿನಾಚರಣೆಯನ್ನು ಸಂಪೂರ್ಣವಾಗಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌