ಆ್ಯಪ್ನಗರ

ಸಾಕ್ಷಿಯ ಚಪ್ಪಲಿಯ ಲೇಸ್‌ ಕಟ್ಟಿಕೊಟ್ಟು, ಅಭಿಮಾನಿಗಳ ಹೃದಯ ಗೆದ್ದ ಎಂಎಸ್‌ ದೋನಿ

ಹೊಸ ಚಪ್ಪಲಿ ಕೊಡಿಸಿದ ಎಂಎಸ್‌ ದೋನಿಗೆ ಅವುಗಳನ್ನು ಕಟ್ಟಿಕೊಡುವ ಕೆಲಸವನ್ನು ವಹಿಸಿರುವ ಪತ್ನಿ ಸಾಕ್ಷಿ ದೋನಿ! ಕೂಲ್‌ ಕ್ಯಾಪ್ಟನ್‌ ದೋನಿಯ ಕೂಲ್‌ ನಡೆಯನ್ನು ಮೆಚ್ಚಿದ ಅಭಿಮಾನಿಗಳು.

Vijaya Karnataka Web 17 Dec 2018, 8:14 am
ಬೆಂಗಳೂರು: ಕೂಲ್‌ ಕ್ಯಾಪ್ಟನ್‌ ಮಹೇಂದ್ರ ಸಿಂಗ್‌ ದೋನಿ ಪತ್ನಿ ಸಾಕ್ಷಿಯ ಹೊಸ ಜೋಡುಗಳನ್ನು ಧರಿಸಲು ಸಹಾಯ ಮಾಡುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.
Vijaya Karnataka Web MS Dhoni

ಮೈದಾನದಲ್ಲಿ ಎದುರಾಳಿಗಳು ಮೆಚ್ಚುವಂತ ನಡತೆ ತೋರುವ ಮೂಲಕ ಅಪಾರ ಅಭಿಮಾನಿಗಳನ್ನು ಪಡೆದಿರುವ ಎಂಎಸ್‌ ದೋನಿ ಇಂದಿಗೂ ಕೂಲ್‌ ಕೂಲ್‌ ಎನಿಸುತ್ತಾರೆ.

ಟೀಮ್‌ ಇಂಡಿಯಾದ ಯಶಸ್ವಿ ನಾಯಕರಲ್ಲಿ ಒಬ್ಬರಾದ ಎಂಎಸ್‌ ದೋನಿ ತಮ್ಮ ಇನ್‌ಸ್ಟಾಗ್ರಾಮ್‌ ಮೂಲಕ ಮಗಳ ಜತೆಗಿರುವ ಫೋಟೋಗಳನ್ನು, ವೀಡಿಯೋಗಳನ್ನು ಅಪ್‌ಲೋಡ್‌ ಮಾಡುತ್ತ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇತ್ತೀಚೆಗೆ ಸಾಕ್ಷಿ ದೋನಿ ತಮ್ಮ ಸಾಮಾಜಿಕ ತಾಣದಲ್ಲಿ ದೋನಿ ಹೊಸ ಚಪ್ಪಲಿ ಧರಿಸಲು ದೋನಿ ಸಹಾಯ ಮಾಡುತ್ತಿರುವ ಫೋಟೋ ಅಪ್‌ಲೋಡ್‌ ಮಾಡಿದ್ದರು. 'ಹೊಸ ಚಪ್ಪಲಿಗಳನ್ನು ಕೊಡಿಸಿದ್ದೀರಾ, ಅವಗಳನ್ನು ಕಟ್ಟಿಕೊಡುವುದು ನಿಮ್ಮ ಜವಾಬ್ದಾರಿ' ಎಂದಿರುವ ಸಾಕ್ಷಿ ಯಜಮಾನಿತನಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

View this post on Instagram You paid for the shoes so you tie them tooo 🤗😘 !!! Photo Credit - @k.a.b.b.s A post shared by Sakshi Singh Dhoni (@sakshisingh_r) on Dec 15, 2018 at 9:54am PST

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಕೊಂಚ ಬ್ರೇಕ್‌ ಪಡೆದಿರುವ ದೋನಿ ಸಾಮಾಜಿಕ ತಾಣಗಳಲ್ಲಿ ಫುಲ್‌ ಆ್ಯಕ್ಟಿವ್‌ ಇದ್ದಾರೆ.
ದೋನಿ-ಜೀವ ಕೂಲ್‌ ಕೂಲ್‌ ಡಾನ್ಸ್‌, ನೋಡಿಲ್ಲಾಂದ್ರೆ ಏನೋ ಮಿಸ್‌ ಮಾಡ್ಕೋತೀರಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌