ಆ್ಯಪ್ನಗರ

ಧೋನಿ ಒಡಿಐ ಕ್ರಿಕೆಟಿನ ಶ್ರೇಷ್ಠ ‘ಅಂಬಿಗ’: ಚಾಪೆಲ್‌

ಟೀಮ್‌ ಇಂಡಿಯಾವನ್ನು ಈ ಹಿಂದೆ ಅನೇಕ ಬಾರಿ ಗೆಲುವಿನ ದಡ ಸೇರಿಸಿದ್ದ ಮಹೇಂದ್ರ ಸಿಂಗ್‌ ಧೋನಿ ಈಗಲೂ ಏಕದಿನ ಕ್ರಿಕೆಟಿನ ಶ್ರೇಷ್ಠ 'ಅಂಬಿಗ'ನಾಗಿ ಪರಿಗಣಿಸಲ್ಪಡುತ್ತಾರೆ ಎಂದು ಆಸ್ಪ್ರೇಲಿಯಾ ತಂಡದ ಮಾಜಿ ನಾಯಕ ಇಯಾನ್‌ ಚಾಪೆಲ್‌ ಅಭಿಪ್ರಾಯ ಪಟ್ಟಿದ್ದಾರೆ.

PTI 21 Jan 2019, 5:00 am
ಹೊಸದಿಲ್ಲಿ : ಟೀಮ್‌ ಇಂಡಿಯಾವನ್ನು ಈ ಹಿಂದೆ ಅನೇಕ ಬಾರಿ ಗೆಲುವಿನ ದಡ ಸೇರಿಸಿದ್ದ ಮಹೇಂದ್ರ ಸಿಂಗ್‌ ಧೋನಿ ಈಗಲೂ ಏಕದಿನ ಕ್ರಿಕೆಟಿನ ಶ್ರೇಷ್ಠ 'ಅಂಬಿಗ'ನಾಗಿ ಪರಿಗಣಿಸಲ್ಪಡುತ್ತಾರೆ ಎಂದು ಆಸ್ಪ್ರೇಲಿಯಾ ತಂಡದ ಮಾಜಿ ನಾಯಕ ಇಯಾನ್‌ ಚಾಪೆಲ್‌ ಅಭಿಪ್ರಾಯ ಪಟ್ಟಿದ್ದಾರೆ.
Vijaya Karnataka Web ms dhoni is still worlds best odi finisher ian chappell
ಧೋನಿ ಒಡಿಐ ಕ್ರಿಕೆಟಿನ ಶ್ರೇಷ್ಠ ‘ಅಂಬಿಗ’: ಚಾಪೆಲ್‌


ಆತಿಥೇಯ ಆಸ್ಪ್ರೇಲಿಯಾ ತಂಡದ ವಿರುದ್ಧ ಕಳೆದ ಶುಕ್ರವಾರ ಮೆಲ್ಬೋರ್ನ್‌ನಲ್ಲಿ ನಡೆದ ಏಕದಿನ ಸರಣಿಯ 3ನೇ ಹಾಗೂ ಕೊನೆಯ ಪಂದ್ಯದಲ್ಲಿ ಭಾರತ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಧೋನಿ ನಿರ್ಣಾಯಕ ಪಾತ್ರ ವಹಿಸಿದ್ದರು. ಅದಕ್ಕಾಗಿ ಅವರು ಪಂದ್ಯ ಪುರುಷೋತ್ತಮನಾಗಿ ಪುರಸ್ಕೃತರಾಗಿದ್ದರು ಕೂಡ. ಧೋನಿಯವರ ಅಂದಿನ ಆಟ ವೀಕ್ಷಿಸಿದ್ದ ಇಯಾನ್‌ ಚಾಪೆಲ್‌, ವಿಶ್ವ ಕಪ್‌ ವಿಜೇತ ಭಾರತ ತಂಡದ ಮಾಜಿ ನಾಯಕ ಈಗಲೂ 50 ಓವರ್‌ಗಳ ಮಾದರಿಯಲ್ಲಿ 'ಬೆಸ್ಟ್‌ ಫಿನಿಷರ್‌' ಎಂದು ಪರಿಗಣಿಸಲ್ಪಡುತ್ತಾರೆ ಎಂದು ಗುಣಗಾನ ಮಾಡಿದ್ದಾರೆ.

ಗುರಿ ಬೆನ್ನಟ್ಟುವಲ್ಲಿ ಧೋನಿಗಿರುವ ತಾಕತ್ತು ಬೇರೆ ಯಾರಲ್ಲೂ ಇಲ್ಲ ಎಂಬುದು ನನ್ನ ಅನಿಸಿಕೆ. ನಿಕಟ ಪೈಪೋಟಿಯ ಪಂದ್ಯಗಳಲ್ಲಿ ಭರ್ಜರಿ ಹೊಡೆತಗಳೊಂದಿಗೆ ಅವರು ತಂಡವನ್ನು ಗೆಲುವಿನ ದಡ ಸೇರಿಸುವ ಪರಿ ಅದ್ಭುತ ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌