ಆ್ಯಪ್ನಗರ

ಧೋನಿ ಸ್ಟಂಪಿಂಗ್ 'ತರಂಗ' ಶತಕ ಮಿಸ್

ಇಲ್ಲಿ ನಡೆಯುತ್ತಿರುವ ಭಾರತ ಮತ್ತು ಶ್ರೀಲಂಕಾ ನಡುವಣ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಮತ್ತೆ ಮಿಂಚಿನ ಸ್ಟಂಪಿಂಗ್ ಮಾಡುವ ಗಮನ ಸೆಳೆದಿದ್ದಾರೆ.

Vijaya Karnataka Web 17 Dec 2017, 5:55 pm
ವಿಶಾಖಪಟ್ಟಣ: ಇಲ್ಲಿ ನಡೆಯುತ್ತಿರುವ ಭಾರತ ಮತ್ತು ಶ್ರೀಲಂಕಾ ನಡುವಣ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಮತ್ತೆ ಮಿಂಚಿನ ಸ್ಟಂಪಿಂಗ್ ಮಾಡುವ ಗಮನ ಸೆಳೆದಿದ್ದಾರೆ.
Vijaya Karnataka Web ms dhoni took brilliant stumping to dismiss upul tharanga on 95
ಧೋನಿ ಸ್ಟಂಪಿಂಗ್ 'ತರಂಗ' ಶತಕ ಮಿಸ್


ಶ್ರೀಲಂಕಾ ಇನ್ನಿಂಗ್ಸ್‌ನ ನಿರ್ಣಾಯಕ ಹಂತದಲ್ಲಿ ಶತಕದತ್ತ ಮುನ್ನುಗ್ಗುತ್ತಿದ್ದ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಉಪುಲ್ ತರಂಗ ಅವರನ್ನು ಧೋನಿ ಸ್ಟಂಪಿಂಗ್ ಬಲೆಗೆ ಸಿಲುಕಿಸಿದ್ದರು.

ಕುಲ್‌ದೀಪ್ ಯಾದವ್ ಎಸೆದ ಪಂದ್ಯದ 28ನೇ ಓವರ್‌ನಲ್ಲಿ ಅಪಾಯಕಾರಿಯಾಗಿ ಮುನ್ನಗ್ಗುತ್ತಿದ್ದ ತರಂಗ ಅವರನ್ನು ಧೋನಿ ಅತ್ಯಂತ ಚಾಣಕ್ಷತಣದಿಂದ ಸ್ಟಂಪಿಂಗ್ ಮಾಡಿದ್ದರು.


ಆಗಲೇ ಏಕದಿನದಲ್ಲಿ 36ನೇ ಅರ್ಧಶತಕವನ್ನು ಬಾರಿಸಿರುವ ತರಂಗ, 2017ನೇ ಸಾಲಿನಲ್ಲಿ 1000 ರನ್ ಸಾಧನೆಯನ್ನು ಮಾಡಿದ್ದರು.

82 ಎಸೆತಗಳನ್ನು ಎದುರಿಸಿದ ತರಂಗ 12 ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 95 ರನ್ ಗಳಿಸಿದ್ದರು. ಈ ಮೂಲಕ ಲಂಕಾಗೆ ಭದ್ರ ಅಡಿಪಾಯ ಹಾಕಿಕೊಟ್ಟರೂ ಸ್ವಲ್ಪದರಲ್ಲೇ ಶತಕ ಮಿಸ್ ಮಾಡಿಕೊಂಡರು.

ತರಂಗ ಸ್ಟಂಪಿಂಗ್ ಪರಿಶೀಲಿಸಿದ ಮೂರನೇ ಅಂಪೈರ್ ಔಟ್ ಎಂದು ಘೋಷಿಸಿದ್ದರು. ನೂತನ ಐಸಿಸಿ ನಿಯಮದಂತೆ ಕಾಲು ಕ್ರೀಸ್ ಮೇಲಿದ್ದರೂ ಔಟ್ ಎಂದು ಘೋಷಿಸಲಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌