ಆ್ಯಪ್ನಗರ

ಡಿಆರ್‌ಎಸ್‌ನಲ್ಲಿ ಎಡವಿದ ಧೋನಿ

ಅಭಿಮಾನಿಗಳೆಡೆಯಲ್ಲಿ ಮಹೇಂದ್ರ ಸಿಂಗ್ ಧೋನಿ ಮನವಿ ಮಾಡಿದರೆ 100ರಲ್ಲಿ ಬಹುತೇಕ ಬಾರಿ ಔಟಾಗಿರುತ್ತದೆ ಎಂಬ ಮಾತಿದೆ. ಆದರೆ ಇದೇ ಮೊದಲ ಬಾರಿಗೆ ಡಿಆರ್‌ಎಸ್ ಮನವಿಯಲ್ಲಿ ಧೋನಿ ಎಡವಿ ಬಿದ್ದಿದ್ದಾರೆ.

Vijaya Karnataka Web 11 Oct 2017, 3:51 pm
ಗುವಾಹಟಿ: ಅಭಿಮಾನಿಗಳೆಡೆಯಲ್ಲಿ ಮಹೇಂದ್ರ ಸಿಂಗ್ ಧೋನಿ ಮನವಿ ಮಾಡಿದರೆ 100ರಲ್ಲಿ ಬಹುತೇಕ ಬಾರಿ ಔಟಾಗಿರುತ್ತದೆ ಎಂಬ ಮಾತಿದೆ. ಆದರೆ ಇದೇ ಮೊದಲ ಬಾರಿಗೆ ಡಿಆರ್‌ಎಸ್ ಮನವಿಯಲ್ಲಿ ಧೋನಿ ಎಡವಿ ಬಿದ್ದಿದ್ದಾರೆ.
Vijaya Karnataka Web ms dhoni virat kohli mess up a drs call
ಡಿಆರ್‌ಎಸ್‌ನಲ್ಲಿ ಎಡವಿದ ಧೋನಿ


ಭುವನೇಶ್ವರ್ ಕುಮಾರ್ ಎಸೆತದಲ್ಲಿ ಮೊಯ್ಸೆಸ್‌ ಹೆನ್ರಿಕ್ಸ್‌ ಔಟ್ ಆದರೂ ಡಿಆರ್‌ಎಸ್ ಮನವಿಗೆ ಭಾರತೀಯ ತಂಡ ಮೊರೆ ಹೋಗದಿರುವುದು ವಿಕೆಟ್ ಪಡೆಯುವ ಅವಕಾಶ ನಷ್ಟವಾಯಿತು.

ಅಂಪೈರ್ ನಾಟೌಟ್ ಘೋಷಿಸಿದರೂ ಭಾರತಕ್ಕೆ ರಿವ್ಯೂ ಪಡೆಯುವ ಅವಕಾಶವಿದ್ದರೂ ಮಹೇಂದ್ರ ಸಿಂಗ್ ಧೋನಿ ಆಸಕ್ತಿ ತೋರದಿರುವುದು ಹಿನ್ನೆಡೆಗೆ ಕಾರಣವಾಯಿತು. ಬಳಿಕ ರಿಪ್ಲೇನಲ್ಲಿ ಔಟ್ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು.

ನಾಯಕ ವಿರಾಟ್ ಕೋಹ್ಲಿ ಡಿಆರ್‌ಎಸ್ ಮನವಿಗೆ ಮೊರೆ ಹೋಗಲು ಸಾಕಷ್ಟು ಉತ್ಸುಕರಾಗಿದ್ದರು. ಆದರೆ ಧೋನಿ ಆಸಕ್ತಿ ತೋರದಿರುವುದರಿಂದ ಮಾಜಿ ಆಟಗಾರನ ಸಲಹೆ ಮೀರದಿರಲು ಕೋಹ್ಲಿ ನಿರ್ಧರಿಸಿದ್ದರು.

ಬಳಿಕ ಪರಿಣಾಮಕಾರಿ ಇನ್ನಿಂಗ್ಸ್ ಕಟ್ಟಿದ ಹೆನ್ರಿಕ್ಸ್ ಆಕರ್ಷಕ ಅರ್ಧಶತಕ ಬಾರಿಸಿದ್ದರಲ್ಲದೆ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌