ಆ್ಯಪ್ನಗರ

ವಿಜಯ್ ಶತಕ, ರಾಹುಲ್ ಫಿಫ್ಟಿ; ಅಭ್ಯಾಸ ಪಂದ್ಯ ಡ್ರಾದಲ್ಲಿ ಅಂತ್ಯ

ಒಂದೇ ಓವರ್‌ನಲ್ಲಿ 26 ರನ್ ಸಿಡಿಸಿ ಶತಕ ಪೂರ್ಣಗೊಳಿಸಿದ ವಿಜಯ್

Vijaya Karnataka Web 1 Dec 2018, 12:40 pm
ಸಿಡ್ನಿ: ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಪ್ರವಾಸಿ ಭಾರತ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ಇಲೆವೆನ್ ವಿರುದ್ಧ ನಡೆದ ನಾಲ್ಕು ದಿನಗಳ ಅಭ್ಯಾಸ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ.
Vijaya Karnataka Web murali-vijay


ಪಂದ್ಯದ ಕೊನೆಯ ದಿನದಾಟದಲ್ಲಿ ಅಮೋಘ ಶತಕ ಬಾರಿಸಿದ ಮುರಳಿ ವಿಜಯ್ ಹಾಗೂ ಆಕರ್ಷಕ ಅರ್ಧಶತಕ ಗಳಿಸಿದ ಕರ್ನಾಟಕದ ಕೆಎಲ್ ರಾಹುಲ್ ತಮ್ಮ ಟೀಕಾಕಾರರಿಗೆ ದಿಟ್ಟ ಉತ್ತರವನ್ನೇ ನೀಡಿದರು.

ಮೊದಲ ಇನ್ನಿಂಗ್ಸ್‌ನಲ್ಲಿ ಆಕರ್ಷಕ ಅರ್ಧಶತಕ ಬಾರಿಸಿರುವ ಪೃಥ್ವಿ ಶಾ ಫೀಲ್ಡಿಂಗ್ ವೇಳೆ ಗಾಯಗೊಂಡಿರುವ ಹಿನ್ನಲೆಯಲ್ಲಿ ಮೊದಲ ಪಂದ್ಯಕ್ಕೆ ಅಲಭ್ಯವಾಗಿದ್ದಾರೆ.

ಇದರಿಂದಾಗಿ ಪೃಥ್ವಿ ಜಾಗದಲ್ಲಿ ಕ್ರೀಸಿಗಿಳಿದ ವಿಜಯ್, ಬಿರುಸಿನ ಶತಕ ಬಾರಿಸುವ ಮೂಲಕ ಆಯ್ಕೆಗಾರರಿಗೆ ಸ್ಪಷ್ಟ ಸಂದೇಶವನ್ನೇ ನೀಡಿದರು.

ಅತೀವ ಒತ್ತಡದಲ್ಲಿದ್ದ ರಾಹುಲ್ ಹಾಗೂ ವಿಜಯ್ ಆಕರ್ಷಕ ಇನ್ನಿಂಗ್ಸ್ ಕಟ್ಟುವ ಮೂಲಕ ತಾವೇ ಓಪನಿಂಗ್ ಜೋಡಿ ಎಂಬುದನ್ನು ಸಾಬೀತು ಮಾಡಿದರು. ಅಲ್ಲದೆ ಇವರಿಬ್ಬರು ಮೊದಲ ವಿಕೆಟ್‌ಗೆ 109 ರನ್ ಪೇರಿಸಿದ್ದರು.

ಇದರೊಂದಿಗೆ 183 ರನ್ ಹಿನ್ನಡೆಯೊಂದಿಗೆ ಬ್ಯಾಟಿಂಗ್ ನಡೆಸಿದ ಭಾರತ ದಿನದಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 211 ರನ್ ಪೇರಿಸಿತ್ತು.

112 ಎಸೆತಗಳಲ್ಲಿ 74 ರನ್ ಗಳಿಸಿದ್ದ ವಿಜಯ್, ಒಂದೇ ಓವರ್‌ನಲ್ಲಿ 26 ರನ್ (ಎರಡು ಸಿಕ್ಸ್, 3 ಬೌಂಡರಿ) ಸಿಡಿಸುವ ಮೂಲಕ 118 ಎಸೆತಗಳಲ್ಲೇ ಶತಕ ಪೂರ್ಣಗೊಳಿಸಿದ್ದರು. ಅಂತಿಮವಾಗಿ 132 ಎಸೆತಗಳಲ್ಲಿ 16 ಬೌಂಡರಿ ಹಾಗೂ ಐದು ಸಿಕ್ಸರ್‌ಗಳ ನೆರವಿನಿಂದ 129 ರನ್ ಗಳಿಸಿದ್ದರು.

ಅತ್ತ ಆಕರ್ಷಕ ಅರ್ಧಶತಕ ಬಾರಿಸಿದ ರಾಹುಲ್ 98 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 62 ರನ್ ಗಳಿಸಿದರು. ಇನ್ನುಳಿದಂತೆ ಹನುಮ ವಿಹಾರಿ 15 ರನ್ ಗಳಿಸಿ ಅಜೇಯರಾಗುಳಿದರು.

ಸಂಕ್ಷಿಪ್ತ ಸ್ಕೋರ್ ಇಂತಿದೆ:

ಭಾರತ ಮೊದಲ ಇನ್ನಿಂಗ್ಸ್ 358 (ಪೃಥ್ವಿ 66, ಪೂಜಾರ 54, ಕೊಹ್ಲಿ 64, ರಹಾನೆ 56 ನಿವೃತ್ತಿ, ವಿಹಾರಿ 53, ರೋಹಿತ್ 40, ಹಾರ್ಡಿ 50/4)

ಕ್ರಿಕೆಟ್ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 544 (ಡಾರ್ಸಿ 74, ಬ್ರ್ಯಾಂಟ್ 62, ನೀಲ್ಸನ್ 100, ಹಾರ್ಡಿ 86, ಫಾಲಿನ್ಸ್ 43, ಶಮಿ 97/3)

ಭಾರತ ಎರಡನೇ ಇನ್ನಿಂಗ್ಸ್ 211/2 (ರಾಹುಲ್ 62, ವಿಜಯ್ 129)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌