ಆ್ಯಪ್ನಗರ

ನನ್ನ ಮಾತನ್ನು ಸಂದರ್ಭಾತೀತವಾಗಿ ಬಳಸಲಾಗಿದೆ: ಶೋಯೆಬ್ ಅಖ್ತರ್

ಹಿಂದೂ ಎಂಬ ಕಾರಣಕ್ಕಾಗಿ ದನೀಶ್ ಕನೇರಿಯಾ ಮೇಲೆ ಅನ್ಯಾಯವಾಗಿತ್ತು ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಮಾಜಿ ವೇಗದ ಬೌಲರ್ ಶೋಯಿಬ್ ಅಖ್ತರ್ ಸ್ಪಷ್ಟನೆ ನೀಡಿದ್ದು, ತಮ್ಮ ಮಾತನ್ನು ಸಂದರ್ಭಾತೀತವಾಗಿ ಬಳಸಲಾಗಿದೆ ಎಂದಿದ್ದಾರೆ.

Vijaya Karnataka Web 29 Dec 2019, 12:03 pm
ಲಾಹೋರ್: ಹಿಂದೂ ಎಂಬ ಕಾರಣಕ್ಕೆ ಮಾಜಿ ಲೆಗ್ ಸ್ಪಿನ್ನರ್ ದನೀಶ್ ಕನೇರಿಯಾ ಮೇಲೆ ತಾರತಮ್ಯ ಎಸಗಲಾಗುತ್ತಿತ್ತು ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಮತ್ತಷ್ಟು ಸ್ಪಷ್ಟನೆಯೊಂದಿಗೆ ಮುಂದೆ ಬಂದಿದ್ದಾರೆ. ಅಲ್ಲದೆ ತಮ್ಮ ಮಾತನ್ನು ಸಂದರ್ಭಾತೀತವಾಗಿ ಬಳಸಲಾಗಿದೆ ಎಂದು ಹೇಳಿದ್ದಾರೆ.
Vijaya Karnataka Web ದನೀಶ್ ಕನೇರಿಯಾ - ಶೋಯೆಬ್ ಅಖ್ತರ್


ಕಳೆದೆರಡು ದಿನಗಳಲ್ಲಿ ತಮ್ಮ ಹೇಳಿಕೆಗಳ ಬಗ್ಗೆ ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ಗಮನಿಸುತ್ತಲೇ ಇದ್ದೇನೆ. ಆದರೆ ಧರ್ಮದ ಆಧಾರದಲ್ಲಿ ಆಟಗಾರರನ್ನು ತಾರತಮ್ಯ ಮಾಡುವ ಸಂಸ್ಕೃತಿ ತಂಡದಲ್ಲಿರಲಿಲ್ಲ ಎಂದು ಹೇಳಿದ್ದಾರೆ.

ಕಳೆದ ಗುರುವಾರ ಖಾಸಗಿ ಸಂದರ್ಶನವೊಂದರಲ್ಲಿ ದನೀಶ್ ಕನೇರಿಯಾ ಹಿಂದೂ ಆಗಿರುವ ಕಾರಣ ತಾರತಾಮ್ಯ ಎಸಗಲಾಗಿತ್ತು ಎಂದು ಹೇಳಿದ್ದರು. ಆದರೆ ಕೆಲವು ಆಟಗಾರರು ಮಾತ್ರ ಈ ರೀತಿಯ ವರ್ತನೆ ಮಾಡಿದ್ದರು. ಅಂತಹ ಆಟಗಾರರನ್ನು ತಂಡದಿಂದ ತೆಗೆದು ಹೊರಹಾಕುವೆ ಎಂದಿದ್ದೆ ಎಂದು ಅಖ್ತರ್ ತಿಳಿಸಿದರು.

ಪಾಕ್‌ನಲ್ಲಿ ಹಿಂದೂ ಕ್ರಿಕೆಟಿಗನಿಗೆ ಅನ್ಯಾಯ; ಶೀಘ್ರದಲ್ಲೇ ಹೆಸರು ಬಹಿರಂಗಪಡಿಸಲಿರುವ ಕನೇರಿಯಾ

ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಖ್ತರ್ ಸ್ಪಷ್ಟನೆ ನೀಡಿದ್ದಾರೆ. ಪ್ರತಿಯೊಬ್ಬ ಆಟಗಾರನಿಗೂ ನಾವು ಗೌರವ ಸಲ್ಲಿಸಬೇಕು. ಆದರೆ ಕೆಲವು ಆಟಗಾರರು ತಾರತಮ್ಯ ತೋರಿದ್ದರು. ಇದು ನಮ್ಮ ತಂಡದ ನಡವಳಿಕೆಯ ವಿರುದ್ಧವಾಗಿತ್ತು. ಒಂದಿಬ್ಬರು ಆಟಗಾರರು ತಾರತಮ್ಯ ತೋರಿದ್ದರು. ಇಂತಹ ಆಟಗಾರರು ವಿಶ್ವದೆಲ್ಲೆಡೆ ಇರುತ್ತಾರೆ ಎಂದು ವಿವರಿಸಿದರು.

ಸಮಾಜದ ಭಾಗವಾಗಿ ನಾವಿದ್ದನ್ನು ತೆಗೆದು ಹಾಕಬೇಕು. ಇಂತಹ ಮಾತುಗಳನ್ನು ಆಡಿದರೆ ತೆಗೆದು ಹೊರಗೆಸೆಯುವೆ ಎಂದು ನಾನು ಹೇಳಿದ್ದೆ. ಯಾಕೆಂದರೆ ಇದು ನಮ್ಮ ತಂಡದ ಸಂಸ್ಕೃತಿಯ ಭಾಗವಾಗಿರಲಿಲ್ಲ. ನಾವೊಂದು ರಾಷ್ಟ್ರದ ಭಾಗವಾಗಿ ಇಂತಹ ತಾರತಮ್ಯಗಳಿಗೆ ಆಸ್ಪದ ನೀಡಲಿಲ್ಲ. ಇದು 15 ವರ್ಷಗಳ ಹಿಂದೆ ನಡೆದ ಘಟನೆಯಾಗಿದ್ದು, ಅಲ್ಲಿಗೆ ವಿರಾಮ ಹಾಕಿದ್ದೆ ಎಂದು ಹೇಳಿದರು.

2019ರಲ್ಲಿ ಪಂದ್ಯದ ಗತಿಯನ್ನೇ ಬದಲಾಸಿದ ನಂಬಲಾಗದ 5 ವಿಸ್ಮಯಕಾರಿ ಕ್ಯಾಚ್‌ಗಳು!

ದನೀಶ್ ಕನೇರಿಯಾ ಪಾಕಿಸ್ತಾನಕ್ಕಾಗಿ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಪಾಕಿಸ್ತಾನ ಪರ 10 ವರ್ಷಗಳಷ್ಟು ಕಾಲ ಆಡಿದ್ದಾರೆ. ಅವರನ್ನು ತಂಡದಿಂದ ಪಾಕಿಸ್ತಾನ ಹೊರದಬ್ಬಲಿಲ್ಲ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಸ್ಪಾಟ್ ಫಿಕ್ಸಿಂಗ್ ಸಂಬಂಧ ಆಜೀವ ನಿಷೇಧ ಹೇರಿತ್ತು ಎಂದು ಅಖ್ತರ್ ಸೇರಿಸಿದರು.

ಈ ಮೊದಲು ಅಖ್ತರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ದನೀಶ್ ಕನೇರಿಯಾ, ಶೋಯೆಬ್‌ ಅಖ್ತರ್‌ ಮಾಡಿರುವ ಆರೋಪದಲ್ಲಿಸತ್ಯಾಂಶವಿದೆ. ಆದರೆ, ಈ ವಿಷಯಕ್ಕೆ ರಾಜಕೀಯ ಬೆರೆಸುವುದು ಸರಿಯಲ್ಲ ಎಂದು ಹೇಳಿದ್ದರು.

2019ರಲ್ಲಿ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ 10 ಪ್ರಮುಖ ಕ್ರಿಕೆಟಿಗರು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌