ಆ್ಯಪ್ನಗರ

ಒಪ್ಪೊ ಜಾಗಕ್ಕೆ ಬೆಂಗಳೂರಿನ ಬೈಜುಸ್‌

ಎಲ್ಲವೂ ನಿರೀಕ್ಷೆಯಂತೆ ನಡೆದಲ್ಲಿ ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ತಂಡ ಧರಿಸುವ ಜರ್ಸಿಯಲ್ಲಿ ಸೆಪ್ಟೆಂಬರ್‌ನಿಂದ 'ಒಪ್ಪೊ' ಬದಲಿಗೆ ಬೆಂಗಳೂರು ಮೂಲದ ಆನ್‌ಲೈನ್‌ ಕಲಿಕಾ ಸಂಸ್ಥೆ ಬೈಜುಸ್‌ನ ಲೋಗೊ ಕಾಣಿಸಿಕೊಳ್ಳಲಿದೆ.

Vijaya Karnataka 26 Jul 2019, 5:00 am
ಹೊಸದಿಲ್ಲಿ: ಎಲ್ಲವೂ ನಿರೀಕ್ಷೆಯಂತೆ ನಡೆದಲ್ಲಿ ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ತಂಡ ಧರಿಸುವ ಜರ್ಸಿಯಲ್ಲಿ ಸೆಪ್ಟೆಂಬರ್‌ನಿಂದ 'ಒಪ್ಪೊ' ಬದಲಿಗೆ ಬೆಂಗಳೂರು ಮೂಲದ ಆನ್‌ಲೈನ್‌ ಕಲಿಕಾ ಸಂಸ್ಥೆ ಬೈಜುಸ್‌ನ ಲೋಗೊ ಕಾಣಿಸಿಕೊಳ್ಳಲಿದೆ.
Vijaya Karnataka Web cricket center1


ಮೊಬೈಲ್‌ ತಯಾರಕ ಸಂಸ್ಥೆಯಾಗಿರುವ ಒಪ್ಪೊ, ಬಿಸಿಸಿಐ ಜತೆಗಿನ ಈ ಒಪ್ಪಂದ ಮುಂದುವರಿಸಲು ಆಸಕ್ತಿ ತೋರದಿರುವ ಹಿನ್ನೆಲೆಯಲ್ಲಿ ಬೈಜುಸ್‌ ಬಿಡ್‌ ಸಲ್ಲಿಸಲು ಮುಂದಾಗಿದೆ ಎನ್ನಲಾಗಿದೆ. ಹೀಗಾಗಿ ಸೆಪ್ಟೆಂಬರ್‌ ಬಳಿಕ ಹೊಸ ಜರ್ಸಿಯ ಬಳಕೆ ಶುರುವಾಗಲಿದೆ.

ಪ್ರಸ್ತುತ ಒಪ್ಪೊ ಸಂಸ್ಥೆ ದ್ವಿಪಕ್ಷೀಯ ಪಂದ್ಯಕ್ಕೆ ಬಿಸಿಸಿಐಗೆ 4.61 ಕೋಟಿ ರೂಪಾಯಿ ಹಾಗೂ ಐಸಿಸಿ ಆತಿಥ್ಯದ ಪಂದ್ಯಕ್ಕೆ 1.56 ಕೋಟಿ ರೂ. ಪಾವತಿ ಮಾಡುತ್ತಿದೆ. ಈ ಹಿಂದೆ ಸ್ಟಾರ್‌ ಸಂಸ್ಥೆಯು ದ್ವಿಪಕ್ಷೀಯ ಪಂದ್ಯಕ್ಕೆ 1.92 ಕೋಟಿ ಹಾಗೂ ಐಸಿಸಿ ಪಂದ್ಯಕ್ಕೆ 61 ಲಕ್ಷ ರೂ. ಸಂದಾಯ ಮಾಡುತ್ತಿತ್ತು. ಹೊಸ ಬಿಡ್‌ನಲ್ಲಿ ಈ ಮೊತ್ತ ಹೆಚ್ಚಳವಾಗಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌