ಆ್ಯಪ್ನಗರ

ಭಾರತದ ವಿರುದ್ಧದ ಟಿ-20 ಪಂದ್ಯಕ್ಕೂ ಮುನ್ನ ಲಂಕಾಗೆ ಆಘಾತ

ನಿಧಹಸ್ ತ್ರಿಕೋನ ಟ್ವೆಂಟಿ-20 ಸರಣಿಯಲ್ಲಿ ಸೋಮವಾರ ಭಾರತ ವಿರುದ್ಧ ನಡೆಯಲಿರುವ ಮಹತ್ವದ ಪಂದ್ಯಕ್ಕೂ ಮುನ್ನ ಆತಿಥೇಯ ಶ್ರೀಲಂಕಾ ತಂಡವು ಆಘಾತಕ್ಕೊಳಗಾಗಿದೆ.

TIMESOFINDIA.COM 11 Mar 2018, 8:36 pm
ಕೊಲಂಬೊ: ನಿಧಹಸ್ ತ್ರಿಕೋನ ಟ್ವೆಂಟಿ-20 ಸರಣಿಯಲ್ಲಿ ಸೋಮವಾರ ಭಾರತ ವಿರುದ್ಧ ನಡೆಯಲಿರುವ ಮಹತ್ವದ ಪಂದ್ಯಕ್ಕೂ ಮುನ್ನ ಆತಿಥೇಯ ಶ್ರೀಲಂಕಾ ತಂಡವು ಆಘಾತಕ್ಕೊಳಗಾಗಿದೆ.
Vijaya Karnataka Web nidahas trophy chandimal gets two match suspension for over rate offence
ಭಾರತದ ವಿರುದ್ಧದ ಟಿ-20 ಪಂದ್ಯಕ್ಕೂ ಮುನ್ನ ಲಂಕಾಗೆ ಆಘಾತ


ನಿಧಾನ ಗತಿಯ ಓವರ್‌ರೇಟ್‌ಗಾಗಿ ಲಂಕಾ ನಾಯಕ ದಿನೇಶ್ ಚಾಂಧಿಮಾಲ್ ಎರಡು ಪಂದ್ಯಗಳ ನಿಷೇಧಕ್ಕೊಳಗಾಗಿದ್ದಾರೆ.

ಇದರಿಂದಾಗಿ ತ್ರಿಕೋನ ಸರಣಿಯಲ್ಲಿ ಮುಂದಿನ ಎರಡು ಪಂದ್ಯಗಳಿಗೆ ಅಲಭ್ಯವಾಗಲಿದ್ದಾರೆ. ಅಂದರೆ ಲಂಕಾ ಫೈನಲ್ ಪ್ರವೇಶಿಸಿದ್ದಲ್ಲಿ ಮಾತ್ರ ಚಾಂಧಿಮಾಲ್ ಮತ್ತೆ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಐಸಿಸಿ ಎಲೈಟ್ ಪ್ಯಾನೆಲ್ ಮ್ಯಾಚ್ ರೆಫರಿ ಆಗಿರುವ ಕ್ರಿಸ್ ಬೋರ್ಡ್ ನಿಷೇಧವನ್ನು ಹೇರಿದ್ದಾರೆ. ಬಾಂಗ್ಲಾ ವಿರುದ್ಧದ ಹೈ ಸ್ಕೋರಿಂಗ್ ಪಂದ್ಯದಲ್ಲಿ ನಿಗದಿತ ಅವಧಿಯ ವೇಳೆಯಲ್ಲಿ ಲಂಕಾ ನಾಲ್ಕು ಓವರ್‌ಗಳಷ್ಟು ಹಿನ್ನಡೆ ಅನುಭವಿಸಿತ್ತು.

ಅದೇ ಹೊತ್ತಿಗೆ ಲಂಕಾ ಆಟಗಾರರ ಮೇಲೆ ಪಂದ್ಯ ಶುಲ್ಕದ ಶೇಕಡಾ 20ರಷ್ಟು ದಂಡ ವಿಧಿಸಲಾಗಿದೆ.

ಏತನ್ಮಧ್ಯೆ ಬಾಂಗ್ಲಾ ನಾಯಕ ಮೊಹಮ್ಮುದುಲ್ಲಾ ಮೇಲೆ ಸಹ ಸ್ಲೋ ಓವರ್ ರೇಟ್‌ಗಾಗಿ ಶೇಕಡಾ 20ರಷ್ಟು ಹೇರಲಾಗಿದೆ. ಇನ್ನುಳಿದಂತೆ ತಂಡದ ಆಟಗಾರರಿಗೆ ಶೇಕಡಾ 10ರಷ್ಟು ದಂಡ ವಿಧಿಸಲಾಗಿದೆ. ನಿಗದಿತ ಅವಧಿಯ ವೇಳೆ ಬಾಂಗ್ಲಾ ಒಂದು ಓವರ್‌ಗಳ ಹಿನ್ನಡೆ ಅನುಭವಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌