ಆ್ಯಪ್ನಗರ

ಏಷ್ಯಾ ಇಲೆವೆನ್ ಪರ ಭಾರತ-ಪಾಕ್ ಆಟಗಾರರು ಜೊತೆಯಾಗಿ ಆಡಲಿದ್ದಾರೆಯೇ?

ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಏಷ್ಯಾ ಇಲೆೆವೆನ್ ಹಾಗೂ ವಿಶ್ವ ಇಲೆವೆನ್ ನಡುವೆ ಎರಡು ಪಂದ್ಯಗಳನ್ನು ಆಯೋಜಿಸಲಾಗಿದೆ. ಪ್ರಸ್ತುತ ಭಾರತ ಹಾಗೂ ಪಾಕಿಸ್ತಾನ ಆಟಗಾರರು ಜತೆಯಾಗಿ ಆಡಲಿದ್ದಾರೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

Vijaya Karnataka Web 26 Dec 2019, 5:34 pm
ಹೊಸದಿಲ್ಲಿ: ಬಾಂಗ್ಲಾದೇಶ ರಾಷ್ಟ್ರಪಿತಾಮಹ ಶೇಖ್ ಮುಜಿಬುರ್ ರಹಮಾನ್ ಅವರ ಜನ್ಮ ಶತಮಾನೋತ್ಸವದಂಗವಾಗಿ ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆಯು (ಬಿಸಿಬಿ) ಏಷ್ಯಾ ಇಲೆವೆನ್ ಹಾಗೂ ವಿಶ್ವ ಇಲೆವೆನ್ ಮಧ್ಯೆ ಎರಡು ಪಂದ್ಯಗಳ ಟ್ವೆಂಟಿ-20 ಪಂದ್ಯಗಳನ್ನು ಆಯೋಜಿಸಲು ಸಿದ್ಧತೆ ನಡೆಸುತ್ತಿದೆ. ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಏಷ್ಯಾ ಇಲೆವೆನ್ ಹಾಗೂ ವಿಶ್ವ ಇಲೆವೆನ್ ನಡುವೆ ಟೂರ್ನಿ ಆಯೋಜನೆಯಾಗಲಿದೆ. ಈ ಮಹತ್ತರ ಟೂರ್ನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಗ್ರೀನ್ ಸಿಗ್ನಲ್ ನೀಡಿದೆ.
Vijaya Karnataka Web ಹಾರ್ದಿಕ್ ಪಾಂಡ್ಯ


ಪ್ರಸ್ತುತ ಟೂರ್ನಿಯಲ್ಲಿ ಭಾರತೀಯ ಆಟಗಾರರು ಪಾಲ್ಗೊಳ್ಳುವರೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಮಹೇಂದ್ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಸೇರಿದಂತೆ ಪ್ರಮುಖರಿಗೆ ಅವಕಾಶ ನೀಡುವಂತೆ ಬಿಸಿಸಿಐನಲ್ಲಿ ಬಿಸಿಬಿ ಕೋರಿದೆ.

ಈ ಮಧ್ಯೆ ಹೇಳಿಕೆ ನೀಡಿರುವ ಬಿಸಿಸಿಐ ಜಂಟಿ ಕಾರ್ಯದರ್ಶಿ ಜಯೇಶ್ ಜಾರ್ಜ್, "ಏಷ್ಯಾ ಇಲೆವನ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ಆಟಗಾರರು ಜತೆಯಾಗಿ ಆಡುವ ಪರಿಸ್ಥಿತಿಯೇ ಉದ್ಭವಿಸುವುದಿಲ್ಲ" ಎಂದಿದ್ದಾರೆ.

ಬ್ಯಾಟಿಂಗ್‌ ವೇಳೆ ಮೈಕಲ್‌ ಜಾಕ್ಸನ್‌ ಸ್ಟೆಪ್‌ ಹಾಕಿದ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌!

"ನಮಗೆ ತಿಳಿದಿರುವ ಪ್ರಕಾರ ಏಷ್ಯಾ ಇಲೆವೆನ್‌ ಯಾವುದೇ ಪಾಕಿಸ್ತಾನ ಆಟಗಾರನನ್ನು ಹೊಂದಿರುವುದಿಲ್ಲ. ನಮಗೆ ಲಭಿಸಿರುವ ಮಾಹಿತಿಯೇ ಇದಾಗಿದೆ. ಹಾಗಾಗಿ ಉಭಯ ದೇಶಗಳ ಆಟಗಾರರು ಜತೆಯಾಗಿ ಆಡುತ್ತಿದೆಯೇ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಏಷ್ಯಾ ಇಲೆವೆನ್‌ನಲ್ಲಿ ಭಾಗವಹಿಸುವ ಭಾರತದ ಐವರು ಆಟಗಾರರನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೆಸರಿಸಲಿದ್ದಾರೆ" ಎಂದಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಇಶಾನ್ ಮನಿ ಹೇಳಿಕೆಯಿಂದ ಭಾರತ ಹಾಗೂ ಪಾಕಿಸ್ತಾನ ಮಂಡಳಿಗಳ ನಡುವಣ ಬಾಂಧವ್ಯ ಮತ್ತಷ್ಟು ಹದೆಗೆಟ್ಟಿತ್ತು. ಶ್ರೀಲಂಕಾ ವಿರುದ್ಧದ ಯಶಸ್ವಿ ಟೆಸ್ಟ್ ಸರಣಿ ಆಯೋಜನೆಯ ಬಳಿಕ ಹೇಳಿಕೆ ನೀಡಿರುವ ಮನಿ, "ಭಾರತದಲ್ಲಿ ಭದ್ರತೆಯ ಅಪಾಯ ಪಾಕಿಸ್ತಾನಕ್ಕಿಂತಲೂ ಹೆಚ್ಚಿದೆ" ಎಂದು ಟೀಕಿಸಿದ್ದರು.

ಆಸೀಸ್ ಸಾರ್ವಕಾಲಿಕ ಟಾಪ್ 10 ಟೆಸ್ಟ್ ಬ್ಯಾಟ್ಸ್‌ಮನ್‌ಗಳ ಪಟ್ಟಿಗೆ ಲಗ್ಗೆಯಿಟ್ಟ ಸ್ಟೀವ್ ಸ್ಮಿತ್

"ಪಾಕಿಸ್ತಾನ ಸೇಫ್ ಎಂಬುದನ್ನು ನಾವು ಸಾಬೀತು ಮಾಡಿದ್ದೇವೆ. ಹಾಗಾಗಿ ಯಾರೇ ಬರಲು ಹಿಂದೇಟು ಹಾಕಿದ್ದಲ್ಲಿ ಪಾಕಿಸ್ತಾನ ಸುರಕ್ಷಿತವಲ್ಲ ಎಂಬುದನ್ನು ಅವರೇ ಸಾಬೀತು ಮಾಡಬೇಕು. ಸದ್ಯದ ಪರಿಸ್ಥಿತಿಯಲ್ಲಿ ಪಾಕಿಸ್ತಾನಕ್ಕಿಂತಲೂ ಭಾರತವೇ ಹೆಚ್ಚು ಭದ್ರತಾ ಭೀತಿಯನ್ನು ಎದುರಿಸುತ್ತಿದೆ" ಎಂದು ಇಶಾತ್ ಮನಿ ವಿವಾದತ್ಮಾಕ ಹೇಳಿಕೆ ನೀಡಿದ್ದರು.

ಅತ್ತ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಾಲ್ಕು ದೇಶಗಳ ನೂತನ ಸರಣಿಯ ಪ್ರಸ್ತಾಪ ಮುಂದಿರಿಸಿದ್ದರು. ಇದರ ವಿರುದ್ಧ ಸಿಡಿದೆದ್ದಿರುವ ಪಾಕಿಸ್ತಾನ ಮಾಜಿ ನಾಯಕ ರಶೀದ್ ಲತೀಫ್, "ಇದೊಂದು ಫ್ಲಾಫ್ ಯೋಜನೆ ಎಂದು ಜರಿದಿದ್ದರು. ನಾಲ್ಕು ದೇಶಗಳ ಟೂರ್ನಿ ಆಯೋಜಿಸುವ ಮೂಲಕ ಇತರೆ ದೇಶಗಳನ್ನು ಬದಿಗೊತ್ತಲು ಬಯಸುತ್ತಿದೆ" ಎಂದು ಟೀಕಿಸಿದ್ದರು.

ದಾದಾ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಪಾಕ್‌ನ ಮಾಜಿ ಕ್ರಿಕೆಟಿಗ ಸಕ್ಲೇನ್‌ ಮುಷ್ತಾಕ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌