ಆ್ಯಪ್ನಗರ

ಅಶ್ವಿನ್‌ಗೆ ಅನುಕೂಲಕರ ಪಿಚ್ ರಚನೆಗೆ ವೇಗಿಗಳು ನೆರವಾಗಬೇಕು: ಸಚಿನ್

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಬಹುನಿರೀಕ್ಷಿತ ಟೆಸ್ಟ್ ಸರಣಿಯು ಹೊಸ ವರ್ಷದಲ್ಲಿ ಆರಂಭವಾಗಲಿರುವಂತೆಯೇ ಹೇಳಿಕೆ ಕೊಟ್ಟಿರುವ ಮಾಜಿ ಬ್ಯಾಟಿಂಗ್ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಖ್ಯಾತಿಯ ಸಚಿನ್ ತೆಂಡೂಲ್ಕರ್, ಭಾರತೀಯ ವೇಗಿಗಳು ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ನೆರವಾಗುವ ಪಿಚ್ ರೂಪಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

TIMESOFINDIA.COM 4 Jan 2018, 6:30 pm
ಹೊಸದಿಲ್ಲಿ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಬಹುನಿರೀಕ್ಷಿತ ಟೆಸ್ಟ್ ಸರಣಿಯು ಹೊಸ ವರ್ಷದಲ್ಲಿ ಆರಂಭವಾಗಲಿರುವಂತೆಯೇ ಹೇಳಿಕೆ ಕೊಟ್ಟಿರುವ ಮಾಜಿ ಬ್ಯಾಟಿಂಗ್ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಖ್ಯಾತಿಯ ಸಚಿನ್ ತೆಂಡೂಲ್ಕರ್, ಭಾರತೀಯ ವೇಗಿಗಳು ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ನೆರವಾಗುವ ಪಿಚ್ ರೂಪಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web pacers need to make tracks conducive for ashwin sachin tendulkar
ಅಶ್ವಿನ್‌ಗೆ ಅನುಕೂಲಕರ ಪಿಚ್ ರಚನೆಗೆ ವೇಗಿಗಳು ನೆರವಾಗಬೇಕು: ಸಚಿನ್


ವೇಗಿ ಪಿಚ್‌ಗಳಲ್ಲೂ ಅಶ್ವಿನ್ ಉತ್ತಮ ದಾಳಿ ಎಸೆಯಬಲ್ಲರು. ಇದನ್ನು ಮನದಟ್ಟು ಮಾಡಿಕೊಂಡಿರುವ ಸಚಿನ್ ಇಂತಹದೊಂದು ಸಲಹೆಯನ್ನು ನೀಡಿದ್ದಾರೆ.

ಈ ಹಿನ್ನಲೆಯಲ್ಲಿ 2010-11ರ ಸರಣಿ ನೆನಪಿಸಿಕೊಂಡ ಸಚಿನ್, ಅಂದು ಹರಭಜನ್ ಸಿಂಗ್‌ಗೆ ಅನುಕೂಲಕರವಾಗುವ ರೀತಿಯಲ್ಲಿ ಜಹೀರ್ ಖಾನ್ ನೆರವಾಗಿದ್ದರು. ಅದೇ ರೀತಿ ನ್ಯೂಲ್ಯಾಂಡ್ಸ್ ಪಿಚ್‌ನಲ್ಲೀಗ ವೇಗಿಗಳು ಅಶ್ವಿನ್‌ಗೆ ರಫ್ ಪಿಚ್ ನಿರ್ಮಾಣವಾಗಲು ನೆರವಾಗಬೇಕಿದೆ ಎಂದರು.

ಅಂದು ಹರಭಜನ್ ಸಿಂಗ್ ಏಳು ವಿಕೆಟುಗಳ್ನು ಕಬಳಿಸಿದ್ದರು. ಈ ಮೂಲಕ ಹರಿಣಗಳ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಒಡ್ಡಿದ್ದರು ಎಂದು ಸಚಿನ್ ವಿವರಿಸಿದರು.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಕೇಪ್ ಟೌನ್‌ನಲ್ಲಿ ಜನವರಿ 05ರಂದು ಆರಂಭವಾಗಲಿದೆ.

ಅದೇ ಹೊತ್ತಿಗೆ ಸಾಂಘಿಕ ದಾಳಿ ನಡೆಸುವ ಮಹತ್ವದ ಕುರಿತಾಗಿಯೂ ಸಚಿನ್ ವಿವರಿಸಿದರು. ಅಲ್ಲದೆ ವಿರಾಟ್ ಕೊಹ್ಲಿ ಪಡೆಯಲ್ಲಿ ಹೆಚ್ಚಿನ ನಿರೀಕ್ಷೆಯನ್ನಿಟ್ಟುಕೊಂಡಿದ್ದೇವೆ ಎಂದು ಹೇಳಿದರು.

ಮೂವರು ವೇಗಿಗಳ ಜತೆಗೆ ನಾಲ್ಕನೇ ವೇಗಿಯ ರೂಪದಲ್ಲಿ ಹಾರ್ದಿಕ್ ಪಾಂಡ್ಯ ನೆರವಾಗಲಿದ್ದಾರೆ. ಇದರೊಂದಿಗೆ ಭಾರತೀಯ ತಂಡ ಹೆಚ್ಚು ಸಂಪನ್ನಗೊಂಡಿದೆ. ಆಲ್‌ರೌಂಡರ್ ಪಾಂಡ್ಯ ಏಳನೇ ಅಥವಾ ಎಂಟನೇ ಕ್ರಮಾಂಕದಲ್ಲೂ ಉಪಯುಕ್ತವೆನಿಸಬಲ್ಲರು ಎಂದು ಮಾಜಿ ಆಲ್‌ರೌಂಡರ್‌ಗಳಾದ ಕಪಿಲ್ ದೇವ್ ಹಾಗೂ ಮನೋಜ್ ಪ್ರಭಾಕರ್ ಉಲ್ಲೇಖಿಸುತ್ತಾ ಸಚಿನ್ ವಿವರಿಸಿದರು.

ಅದೇ ಹೊತ್ತಿಗೆ ಪಿಚ್‌ನಿಂದ ಹಿಡಿದು ಹಲವಾರು ಘಟಕಗಳು ಅನ್ವಯಿಸುವುದರಿಂದ ಹಾರ್ದಿಕ್ ಪಾಂಡ್ಯ ಹಾಗೂ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್, ಶಿಖರ್ ಧವನ್ ಹಾಗೂ ಮುರಳಿ ವಿಜಯ್ ಅವರಲ್ಲಿ ಯಾರೆಲ್ಲ ಆಡಬೇಕು ಎಂಬುದರ ಬಗ್ಗೆ ಹೇಳಿಕೆ ಕೊಡಲು ಹಿಂಜರಿದರು.

ಅವರೆಲ್ಲರೂ ನನ್ನ ಹೃದಯಕ್ಕೆ ಹತ್ತಿರವಾಗಿದ್ದು, ತಮ್ಮ ಕ್ರಿಕೆಟ್‌ಗಳ ಬಗ್ಗೆ ನನ್ನ ಬಳಿ ಚರ್ಚಿಸುತ್ತಾರೆ. ಹಾಗಾಗಿ ಹೋಲಿಕೆ ಮಾಡಲು ನನಗಿಷ್ಟವಿಲ್ಲ ಎಂದರು.

ಏತನ್ಮಧ್ಯೆ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ನಲ್ಲಿ ಜಸ್ಪ್ರೀತ್ ಬುಮ್ರಾ ಬೆಳವಣಿಗೆಯನ್ನು ಹತ್ತಿರದಿಂದ ಗಮನಿಸಿರುವ ಸಚಿನ್, ಅವರೊಬ್ಬ 'ಉಜ್ವಲ ಭರವಸೆ' ಎಂದು ಶ್ಲಾಘಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌