ಆ್ಯಪ್ನಗರ

ಭಾರತಕ್ಕೆ ಬಹಿಷ್ಕಾರ ಹಾಕಿ; ಅಬುದಾಬಿ ಟಿ10 ಲೀಗ್‌ನಲ್ಲಿ ಭಾಗವಹಿಸದಂತೆ ಪಾಕ್ ಆಟಗಾರರಿಗೆ ಕರೆ

ಬಹುತೇಕ ಭಾರತ ಪ್ರಾಯೋಕತ್ವವನ್ನು ಹೊಂದಿರುವ ಅಬುದಾಬಿ ಟಿ10 ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಆಟಗಾರರು ಭಾಗವಹಿಸದಂತೆ ಪಾಕಿಸ್ತಾನ ಸೆನೆಟರ್ ಆಗಿರುವ ಫೈಜಲ್ ಜಾವೇದ್ ಖಾನ್ ಕರೆ ನೀಡಿದ್ದಾರೆ.

Vijaya Karnataka Web 19 Nov 2019, 3:15 pm
ಹೊಸದಿಲ್ಲಿ: ಭಾರತದಿಂದ ಹೆಚ್ಚಿನ ಪ್ರಾಯೋಕತ್ವ ಪಡೆದಿರುವ ಅಬುಬಾದಿ ಟಿ10 ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ಕ್ರಿಕೆಟಿಗರು ಭಾಗವಹಿಸದಂತೆ ಪಾಕ್‌ನ ಸೆನೆಟರ್ ಕರೆ ನೀಡಿದ್ದಾರೆ.
Vijaya Karnataka Web ಅಬುದಾಬಿ ಟಿ10 ಕ್ರಿಕೆಟ್ ಲೀಗ್


ಕಾಶ್ಮೀರದ ಹೋರಾಟಕ್ಕೆ ಬೆಂಬಲ ಸೂಚಿಸುವ ಸಲುವಾಗಿ ಭಾರತ ಜತೆಗಿನ ಎಲ್ಲ ಬಾಂಧವ್ಯವನ್ನು ಕೈಬಿಡುವಂತೆ ಕರೆ ನೀಡಲಾಗಿದೆ. ಅಬುದಾಬಿ ಟಿ20 ಕ್ರಿಕೆಟ್ ಲೀ‌ಗ್‌ನಲ್ಲಿ ಭಾಗವಹಿಸುತ್ತಿರುವ ಬಹುತೇಕ ಎಲ್ಲ ತಂಡಗಳಿಗೆ ಭಾರತೀಯ ಮೂಲದ ಉದ್ಯಮಿಗಳೇ ಮಾಲಿಕರಾಗಿದ್ದಾರೆ.

ಕಾಲ್ಚೆಂಡಿನ ಆಟದಲ್ಲೂ ಸೈ ಎನಿಸಿದ ಬಾಲಿವುಡ್ ತಾರೆ ಸನ್ನಿ ಲಿಯೋನ್

ಹಾಗಾಗಿ ಭಾರತದಿಂದ ಪ್ರಾಯೋಜಿತ ಟೂರ್ನಿಯಲ್ಲಿ ಪಾಕ್ ಆಟಗಾರರು ಭಾಗವಹಿಸದಂತೆ ಪಿಟಿಐ ಸೆನೆಟರ್ ಆಗಿರುವ ಫೈಜಲ್ ಜಾವೇದ್ ಖಾನ್ ಆಹ್ವಾನ ನೀಡಿದ್ದಾರೆ.

ಕೆಲವು ಸಮಯಗಳ ಹಿಂದೆಯಷ್ಟೇ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ 370ನೇ ವಿಧಿಯನ್ನು ಭಾರತ ರದ್ದುಗೊಳಿಸಿತ್ತು. ಭಾರತ ಸರಕಾರದ ನಿಯಮವನ್ನು ಖಂಡಿಸಿದ ಪಾಕಿಸ್ತಾನ, ಎಲ್ಲ ರೀತಿಯ ದ್ವಿಪಕ್ಷೀಯ ಬಾಂಧ್ಯವವನ್ನು ಕಡಿತುಕೊಂಡಿತ್ತು.

ಅಬುಧಾಬಿ ಟಿ10 ಲೀಗ್‌ನಲ್ಲಿ ಕರ್ನಾಟಕ ಟಸ್ಕರ್ಸ್‌ ಮಾಲೀಕತ್ವ ಬದಲಾಗಿದ್ದೇಕೆ ಗೊತ್ತ?

ಇದೀಗ ಪಾಕಿಸ್ತಾನ ಸರಕಾರದ ಸೆನೆಟರ್, ಭಾರತ ಪ್ರಾಯೋಜಿತ ಟೂರ್ನಿಯಲ್ಲಿ ಭಾಗವಹಿಸದಂತೆ ಪಾಕ್ ಆಟಗಾರರಿಗೆ ಬಹಿರಂಗ ಕರೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

ಈ ಮಧ್ಯೆ ಪಾಕ್ ಸೆನೆಟರ್ ಹೇಳಿಕೆಗೆ ಅಲ್ಲಿನ ಕ್ರೀಡಾ ಪತ್ರಕರ್ತರಿಂದಲೇ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೆ ಕ್ರೀಡೆಯನ್ನು ರಾಜಕೀಯಗೊಳಿಸಬಾರದು ಎಂಬ ಕೂಗು ಕೇಳಿ ಬಂದಿದೆ.

IPL 2020: ಆರ್‌ಸಿಬಿ ಕಪ್ತಾನಗಿರಿಯಲ್ಲಿ ಬದಲಾವಣೆಯಾಗಬೇಕೇ?

ಕೆರೆಬಿಯನ್ ಪ್ರೀಮಿಯರ್ ಲೀಗ್ ಹಾಗೂ ದಕ್ಷಿಣ ಆಫ್ರಿಕಾ ಲೀಗ್‌ನಲ್ಲಿ ಪಾಕಿಸ್ತಾನ ಕ್ರಿಕೆಟಿಗರು ಭಾಗವಹಿಸುತ್ತಿದ್ದಾರೆ. ಅಲ್ಲೂ ಭಾರತೀಯ ಉದ್ಯಮಿಗಳು ಶೇರನ್ನು ಹೊಂದಿದ್ದು, ತಂಡದ ಮಾಲಿಕತ್ವವನ್ನು ಹೊಂದಿದ್ದಾರೆ. ಕೆರೆಬಿಯನ್ ಲೀಗ್‌ನಲ್ಲಿ ಶಾರೂಕ್ ಖಾನ್ ತಂಡವನ್ನು ಹೊಂದಿದ್ದಾರೆ. ಇದರ ಬದಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಕ್ರಮವಾಗಿರಿಸಲು ಗಮನ ಹರಿಸಿ ಎಂದು ಕ್ರೀಡಾ ಪತ್ರಕರ್ತ ಮಿರ್ಜಾ ಇಕ್ಬಾಲ್ ಬೇಗ್ ಸಲಹೆ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌