ಆ್ಯಪ್ನಗರ

Emerging Nations Cup: ಎಮರ್ಜಿಂಗ್ ನೇಷನ್ಸ್ ಕಪ್‌ಗೆ ಪಾಕ್ ಆತಿಥ್ಯ - ಲಂಕಾದಲ್ಲಿ ಆಡಲಿರುವ ಭಾರತ

ಭದ್ರತಾ ಕಾರಣಗಳಿಂದಾಗಿ ಪಾಕ್‌ಗೆ ತೆರಳಲು ಭಾರತ ನಕಾರ

Vijaya Karnataka Web 28 Nov 2018, 12:32 pm
ಹೊಸದಿಲ್ಲಿ: ಮುಂದಿನ ಡಿಸೆಂಬರ್‌ನಲ್ಲಿ ನಡೆಯಲಿರುವ ಏಷ್ಯನ್ ಎಮರ್ಜಿಂಗ್ ನೇಷನ್ಸ್ ಕಪ್ 2018 ಟೂರ್ನಮೆಂಟ್‌ನ ಆರು ಪಂದ್ಯಗಳಿಗೆ ಪಾಕಿಸ್ತಾನ ಆತಿಥ್ಯ ವಹಿಸಲಿದೆ.
Vijaya Karnataka Web stumps


ಭಾರತ ಭದ್ರತಾ ಕಾರಣಗಳಿಂದಾಗಿ ಪಾಕಿಸ್ತಾನದಲ್ಲಿ ಆಡುವುದಕ್ಕೆ ವಿಸಮ್ಮತಿ ಸೂಚಿಸಿರುವ ಹಿನ್ನಲೆಯಲ್ಲಿ, ಭಾರತದ ಪಂದ್ಯಗಳಿಗೆ ಶ್ರೀಲಂಕಾ ಆತಿಥ್ಯ ವಹಿಸಲಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ಬಗ್ಗೆ ಹೇಳಿಕೆ ಕೊಟ್ಟಿದ್ದು, ಲಾಹೋರ್ ಹಾಗೂ ಕರಾಚಿಯಲ್ಲಿ ನಡೆಯಲಿರುವ ಟೂರ್ನಿಗೆ ತಂಡವನ್ನು ಕಳುಹಿಸಲು ಬಿಸಿಸಿಐ ನಕಾರ ಎಂದಿದೆ ಎಂಬುದನ್ನು ಸ್ಪಷ್ಟಪಡಿಸಿದೆ.

ಹಾಗಾಗಿ ಭಾರತ ತನ್ನೆಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದ್ದು, ಫೈನಲ್ ಕೂಡಾ ಲಂಕಾದಲ್ಲೇ ನಡೆಯಲಿದೆ.

ಪಾಕಿಸ್ತಾನ ಗುಂಪಿನಲ್ಲಿರುವ ಬಾಂಗ್ಲಾದೇಶ, ಯುಎಇ ಹಾಗೂ ಹಾಂಕಾಂಗ್ ತಂಡಗಳು ಕರಾಚಿಯಲ್ಲಿ ಪಂದ್ಯಗಳನ್ನು ಆಡಲಿದೆ. ಇನ್ನೊಂದೆಡೆ ಶ್ರೀಲಂಕಾ, ಭಾರತ ಹಾಗೂ ಅಪಘಾನಿಸ್ತಾನ ತಂಡಗಳು ಕೊಲಂಬೊದಲ್ಲಿ ಕಣಕ್ಕಿಳಿಯಲಿದೆ.

ಡಿಸೆಂಬರ್ 4ರಿಂದ 10ರ ವರೆಗೆ ನಡೆಯಲಿರುವ ಟೂರ್ನಿಗೆ ಗರಿಷ್ಠ ಭದ್ರತೆಯನ್ನು ಒದಗಿಸಲಾಗಿದೆ ಎಂದು ಪಾಕ್ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌