ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಟೀಮ್ ಇಂಡಿಯಾ 80 ರನ್ ಅಂತರದ ಹೀನಾಯ ಸೋಲಿಗೊಳಗಾಗಿದೆ. ಈ ಮೂಲಕ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ 1-0 ಅಂತರದ ಹಿನ್ನಡೆಗೊಳಗಾಗಿದೆ. ಈ ನಡುವೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತವನ್ನು ಜತೆಯಾಗಿ ಪ್ರತಿನಿಧಿಸಿದ ಗೌರವಕ್ಕೆ ಪಾಂಡ್ಯ ಸೋದರರು ಪಾತ್ರವಾಗಿದ್ದಾರೆ.
ಇದುವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಜತೆಯಾಗಿ ಪ್ರತಿನಿಧಿಸಿರುವ ಹಾರ್ದಿಕ್ ಪಾಂಡ್ಯ ಹಾಗೂ ಕುೃಣಾಲ್ ಪಾಂಡ್ಯ ಇದೀಗ ಜತೆಯಾಗಿ ಟೀಮ್ ಇಂಡಿಯಾ ಜರ್ಸಿ ಧರಿಸಿದ್ದಾರೆ.
ಅಷ್ಟೇ ಅಲ್ಲದೆ ಭಾರತವನ್ನು ಪ್ರತಿನಿಧಿಸಿದ ಮೂರನೇ ಬ್ರದರ್ಸ್ ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ. ಈ ಹಿಂದೆ ಮೊಹಿಂದರ್ ಹಾಗೂ ಸುರಿಂದರ್ ಅಮರ್ನಾಥ್ ಮತ್ತು ಇರ್ಫಾನ್ ಹಾಗೂ ಯೂಸುಫ್ ಪಠಾಣ್ ಸೋದರರು ಭಾರತವನ್ನು ಪ್ರತಿನಿಧಿಸಿದ್ದರು.
ಹಾಗಿದ್ದರೂ ಜತೆಯಾಗಿ ಆಡಿದ ಮೊದಲ ಪಂದ್ಯದಲ್ಲೇ ಪಾಂಡ್ಯ ಸೋದರರು ವೈಫಲ್ಯವನ್ನು ಅನುಭವಿಸಿದ್ದಾರೆ. ಹಾರ್ದಿಕ್ ತಮ್ಮ ನಾಲ್ಕು ಓವರ್ಗಳ ಕೋಟಾದಲ್ಲಿ 51 ರನ್ ಬಿಟ್ಟುಕೊಟ್ಟಿದ್ದರೆ ಕೃುಣಾಲ್ 37 ರನ್ ನೀಡಿ ದುಬಾರಿ ಎನಿಸಿಕೊಂಡಿದ್ದರು. ಇವರಿಬ್ಬರು ಅನುಕ್ರಮವಾಗಿ ಎರಡು ಹಾಗೂ ಒಂದು ವಿಕೆಟನ್ನು ಹಂಚಿಕೊಂಡಿದ್ದರು.
ಬ್ಯಾಟಿಂಗ್ನಲ್ಲೂ ಹಾರ್ದಿಕ್ ಹಾಗೂ ಕೃುಣಾಲ್ ಅನುಕ್ರಮವಾಗಿ 4 ಹಾಗೂ 20 ರನ್ಗಳನ್ನಷ್ಟೇ ಗಳಿಸಿದ್ದರು.
ಪ್ರಸ್ತುತ ಸರಣಿ ಗೆಲ್ಲಲು ಭಾರತ ಮುಂದಿನ ಎರಡು ಪಂದ್ಯಗಳಲ್ಲೂ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.