ಆ್ಯಪ್ನಗರ

ಆರ್ಥರ್‌ ಹುದ್ದೆಗೆ ಅರ್ಧಚಂದ್ರ

ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಸೆಮಿಫೈನಲ್ಸ್‌ ಪ್ರವೇಶಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಮುಖ್ಯ ತರಬೇತುದಾರ, ಮಿಕಿ ಆರ್ಥರ್‌ ಅವರ ಗುತ್ತಿಗೆಯನ್ನು ನವೀಕರಿಸದಿರಲು ಪಿಸಿಬಿ ತೀರ್ಮಾನಿಸಿದೆ.

PTI 8 Aug 2019, 5:00 am
ಕರಾಚಿ : ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಸೆಮಿಫೈನಲ್ಸ್‌ ಪ್ರವೇಶಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಮುಖ್ಯ ತರಬೇತುದಾರ, ಮಿಕಿ ಆರ್ಥರ್‌ ಅವರ ಗುತ್ತಿಗೆಯನ್ನು ನವೀಕರಿಸದಿರಲು ಪಿಸಿಬಿ ತೀರ್ಮಾನಿಸಿದೆ. ಬ್ಯಾಟಿಂಗ್‌ ಕೋಚ್‌ ಗ್ರಾಂಟ್‌ ಫ್ಲವರ್‌, ಬೌಲಿಂಗ್‌ ಕೋಚ್‌ ಅಜರ್‌ ಮಹಮೂದ್‌, ಟ್ರೈನರ್‌ ಗ್ರಾಂಟ್‌ ಲೂಡೆನ್‌ ಅವರ ಗುತ್ತಿಗೆಗೂ ಕತ್ತರಿ ಬೀಳಲಿದೆ. ವಿಪರ್ಯಾಸವೆಂದರೆ, ವಿಶ್ವಕಪ್‌ ಮುಗಿದ ಬೆನ್ನಿಗೇ ಆರ್ಥರ್‌ ಅವರು ಸಫ್ರ್ರಾಜ್‌ ಅಹಮ್ಮದ್‌ ಅವರನ್ನು ನಾಯಕತ್ವದಿಂದ ಕೆಳಗಿಳಿಸುವಂತೆ ಪಿಸಿಬಿಗೆ ಶಿಫಾರಸು ಮಾಡಿದ್ದರು. ಸಫ್ರ್ರಾಜ್‌ ಬದಲಿಗೆ ಕಿರು ಮಾದರಿಯ ತಂಡಗಳಿಗೆ ಶದಾಬ್‌ ಖಾನ್‌ ಅವರನ್ನೂ, ಟೆಸ್ಟ್‌ ತಂಡಕ್ಕೆ ಬಾಬರ್‌ ಅಜಂ ಅವರನ್ನೂ ನಾಯಕರನ್ನಾಗಿ ಮಾಡುವಂತೆ ದಕ್ಷಿಣ ಆಫ್ರಿಕಾ ಮೂಲದ ಕೋಚ್‌ ಸಲಹೆ ನೀಡಿದ್ದರು. ಆದರೆ, ಆರ್ಥರ್‌ ಸಲಹೆ ಅಂತಿಮವಾಗಿ ಅವರಿಗೇ ತಿರುಗುಬಾಣವಾಗಿದೆ.
Vijaya Karnataka Web pcb decides not to renew coach arthurs contract
ಆರ್ಥರ್‌ ಹುದ್ದೆಗೆ ಅರ್ಧಚಂದ್ರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌