ಆ್ಯಪ್ನಗರ

ರಸ್ತೆಯಲ್ಲಿ ಕಸ ಎಸೆದವರಿಗೆ ಕೊಹ್ಲಿ-ಅನುಷ್ಕಾ ಚಾಟಿ!

ರಸ್ತೆಯಲ್ಲೇ ಕಸ ಎಸೆದು ಕಾರ್‌ನಲ್ಲಿ ಸಾಗುತ್ತಿದ್ದವರಿಗೆ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ ಚಾಟಿ ಬೀಸಿರುವ ಘಟನೆಯನ್ನು ಕೊಹ್ಲಿ ಟ್ವಿಟರ್‌ ಮೂಲಕ ಹಂಚಿಕೊಂಡಿದ್ದಾರೆ.

Vijaya Karnataka 17 Jun 2018, 11:38 am
ಬೆಂಗಳೂರು: ರಸ್ತೆಯಲ್ಲೇ ಕಸ ಎಸೆದು ಕಾರ್‌ನಲ್ಲಿ ಸಾಗುತ್ತಿದ್ದವರಿಗೆ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ ಚಾಟಿ ಬೀಸಿರುವ ಘಟನೆಯನ್ನು ಕೊಹ್ಲಿ ಟ್ವಿಟರ್‌ ಮೂಲಕ ಹಂಚಿಕೊಂಡಿದ್ದಾರೆ.
Vijaya Karnataka Web virushka-15


ಲಗ್ಷುರಿ ಕಾರ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಗಳು ರಸ್ತೆಯಲ್ಲೇ ಕಸ ಎಸೆದದ್ದನ್ನು ಕಂಡು ಆಕ್ರೋಶಗೊಂಡ ಅನುಷ್ಕಾ ಶರ್ಮಾ, ಅವರಿಗೆ ಪಾಠ ಹೇಳುತ್ತಿರುವ ವಿಡಿಯೊವನ್ನು ಟ್ವಿಟರ್‌ನಲ್ಲಿ ಕೊಹ್ಲಿ ಪ್ರಕಟಿಸಿದ್ದಾರೆ.

''ಐಷಾರಾಮಿ ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗಳು ರಸ್ತೆಯಲ್ಲಿ ಕಸ ಎಸೆದದ್ದನ್ನು ನೋಡಿದೆವು. ಇಂತವ ವ್ಯಕ್ತಿಗಳು ನಮ್ಮ ದೇಶವನ್ನು ಶುಚಿಯಾಗಿಡುತ್ತಾರೆಯೇ? ಇಂತಹ ಘಟನೆಗಳು ನಿಮ್ಮ ಕಣ್ಣಿಗೆ ಬಿದ್ದಲ್ಲಿ ಇದೇ ರೀತಿ ಮಾಡಿ,'' ಎಂದು ಕೊಹ್ಲಿ ಟ್ವಿಟರ್‌ನಲ್ಲಿ ಸಲಹೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌