ಆ್ಯಪ್ನಗರ

ಡೇ-ನೈಟ್‌ ಟೆಸ್ಟ್‌: ಆಸೀಸ್‌ಗೆ ತಲೆಬಾಗಿದ ಕಿವೀಸ್‌!

ಭರ್ಜರಿ ಬೌಲಿಂಗ್‌ ದಾಳಿ ಸಂಘಟಿಸಿದ ಆತಿಥೇಯ ಆಸ್ಟ್ರೇಲಿಯಾ ತಂಡ, ಪ್ರವಾಸಿ ನ್ಯೂಜಿಲೆಂಡ್‌ ವಿರುದ್ಧ ಇಲ್ಲಿ ನಡೆದ ಡೇ-ನೈಟ್‌ ಟೆಸ್ಟ್‌ ಪಂದ್ಯದಲ್ಲಿ ಮೂರನೇ ದಿನವಾದ ಭಾನುವಾರ 296 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

Vijaya Karnataka Web 15 Dec 2019, 8:34 pm
ಪರ್ತ್‌: ಭರ್ಜರಿ ಬೌಲಿಂಗ್‌ ದಾಳಿ ಸಂಘಟಿಸಿದ ಆತಿಥೇಯ ಆಸ್ಟ್ರೇಲಿಯಾ ತಂಡ, ಪ್ರವಾಸಿ ನ್ಯೂಜಿಲೆಂಡ್‌ ವಿರುದ್ಧ ಇಲ್ಲಿ ನಡೆದ ಡೇ-ನೈಟ್‌ ಟೆಸ್ಟ್‌ ಪಂದ್ಯದಲ್ಲಿ ಮೂರನೇ ದಿನವಾದ ಭಾನುವಾರ 296 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.
Vijaya Karnataka Web aus vs nz 1st test 2019


ಇಲ್ಲಿನ ಪರ್ತ್‌ ಕ್ರೀಡಾಂಗಣದಲ್ಲಿ ಭಾನುವಾರ ತನ್ನ 2ನೇ ಇನಿಂಗ್ಸ್‌ನಲ್ಲಿ 9 ವಿಕೆಟ್‌ಗೆ 217 ರನ್‌ಗಳಿಸಿ ಡಿಕ್ಲೇರ್‌ ಮಾಡಿಕೊಳ್ಳುವ ಮೂಲಕ ಮೊದಲ ಇನಿಂಗ್ಸ್‌ ಮುನ್ನಡೆಯೊಟ್ಟಿಗೆ 468 ರನ್‌ಗಳ ಅಸಾಧ್ಯದ ಗುರಿ ನೀಡಿದ ಆಸ್ಟ್ರೇಲಿಯಾ ತಂಡ, ಬಳಿಕ ಕಿವೀಸ್‌ ಪಡೆಯನ್ನು 61.3 ಓವರ್‌ಗಳಲ್ಲಿ 171 ರನ್‌ಗಳಿಗೆ ಆಲ್‌ಔಟ್‌ ಮಾಡಿತು.

ಈ ಮೂಲಕ ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌ ನಲ್ಲಿ ಆಸ್ಟ್ರೇಲಿಯಾ ತಂಡ ಸಂಪೂರ್ಣ 40 ಅಂಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿದೆ. ಆಸೀಸ್ ಪರ ಆಕ್ರಮಣಕಾರಿ ಬೌಲಿಂಗ್‌ ದಾಳಿ ನಡೆಸಿದ ಎಡಗೈ ವೇಗಿ ಮಿಚೆಲ್‌ ಸ್ಟಾರ್ಕ್‌, 45ಕ್ಕೆ 4 ವಿಕೆಟ್‌ ಪಡೆದರು. ಮೊದಲ ಇನಿಂಗ್ಸ್‌ನಲ್ಲೂ ಸ್ಟಾರ್ಕ್‌ 5 ವಿಕೆಟ್‌ ಉರುಳಿಸಿದ್ದರು. ಅವರಿಗೆ ಉತ್ತಮ ಸಾಥ್‌ ನೀಡಿದ ನೇಥನ್‌ ಲಯಾನ್‌ 63ಕ್ಕೆ 4 ವಿಕೆಟ್‌ ಪಡೆದ ಕಿವೀಸ್‌ ಬ್ಯಾಟ್ಸ್‌ಮನ್‌ಗಳ ಹುಟ್ಟಡಗಿಸಿದರು. ವಿಶ್ವ ನಂ.1 ಟೆಸ್ಟ್‌ ಬೌಲರ್‌ ಪ್ಯಾಟ್‌ ಕಮಿನ್ಸ್‌ (31ಕ್ಕೆ 2) ಕೂಡ ಯಶಸ್ಸು ಗಳಿಸಿದರು.

ಟೆಸ್ಟ್‌ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ವಿಶೇಷ ವಿಶ್ವ ದಾಖಲೆ ಬರೆದ ಪಾಕ್‌ ಬ್ಯಾಟ್ಸ್‌ಮನ್‌!

ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌ ತಂಡ ಸತತ ವಿಕೆಟ್‌ ಕಳೆದುಕೊಳ್ಳುವ ಮೂಲಕ ಸೋಲಿನ ಸುಳಿಗೆ ಸಿಲುಕಿತು. ಮಧ್ಯಮ ಕ್ರಮಾಂಕದಲ್ಲಿ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಬಿಜೆ ವ್ಯಾಟ್ಲಿಂಗ್‌ (40) ಮತ್ತು ಆಲ್‌ರೌಂಡರ್‌ ಕಾಲಿನ್‌ ಡಿ'ಗ್ರ್ಯಾಂಡ್‌ಹೋಮ್‌ (33) ಕೊಂಚ ಹೋರಾಟ ವ್ಯಕ್ತ ಪಡಿಸಿದರು.

ಇತ್ತಂಡಗಳು ಇದೀಗ ಮೆಲ್ಬೋರ್ನ್‌ನಲ್ಲಿ ಡಿ.26ರಂದು ಆರಂಭವಾಗಲಿರುವ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ ಪೈಪೋಟಿ ನಡೆಸಲಿವೆ. ಮೂರು ಪಂದ್ಯಗಳ ಸರಣಿಯಲ್ಲಿ ಪಿಂಕ್‌ ಬಾಲ್‌ ಕದನ ಗೆದ್ದ ಆಸ್ಟ್ರೇಲಿಯಾ ತಂಡ 1-0 ಅಂತರದ ಮುನ್ನಡೆಯಲ್ಲಿದೆ.

ಕಿಚ್ಚ ಸುದೀಪ್‌ ಮತ್ತು ಸಲ್ಮಾನ್‌ ಖಾನ್‌ರ ಫೇವರಿಟ್‌ ಕ್ರಿಕೆಟರ್ ಯಾರು ಗೊತ್ತಾ?

ಸಂಕ್ಷಿಪ್ತ ಸ್ಕೋರ್‌
ಆಸ್ಟ್ರೇಲಿಯಾ: 416 ಮತ್ತು 2ನೇ ಇನಿಂಗ್ಸ್‌ 69.1 ಓವರ್‌ಗಳಲ್ಲಿ 9 ವಿಕೆಟ್‌ಗೆ 217 ಡಿ. (ಜೋ ಬರ್ನ್ಸ್‌ 53, ಮಾರ್ನಸ್‌ ಲಾಬುಶೇನ್‌ 50; ಟಿಮ್‌ ಸೌಥೀ 69ಕ್ಕೆ 5, ನೇಯ್ಲ್‌ ವ್ಯಾಗ್ನರ್‌ 59ಕ್ಕೆ 3).
ನ್ಯೂಜಿಲೆಂಡ್‌: 166 ಮತ್ತು 2ನೇ ಇನಿಂಗ್ಸ್‌ 171 ಆಲ್‌ಔಟ್‌ (ಬಿಜೆ ವ್ಯಾಟ್ಲಿಂಗ್‌ 40, ಕಾಲಿನ್‌ ಡಿ'ಗ್ರ್ಯಾಂಡ್‌ಹೋಮ್‌ 33; ಮಿಚೆಲ್ ಸ್ಟಾರ್ಕ್‌ 45ಕ್ಕೆ 4, ನೇಥನ್‌ ಲಯಾನ್‌ 63ಕ್ಕೆ 2, ಪ್ಯಾಟ್‌ ಕಮಿನ್ಸ್‌ 31ಕ್ಕೆ 2).

ಟಿ20 ವಿಶ್ವಕಪ್‌ಗೆ ಡಿ'ವಿಲಿಯರ್ಸ್‌ ನಿವೃತ್ತಿಯಿಂದ ಹೊರಬರುವ ಸುಳಿವು ಕೊಟ್ಟ ಮಾರ್ಕ್‌ ಬೌಷರ್‌!

ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌ ಅಂಕಪಟ್ಟಿ
1. ಭಾರತ (7 ಪಂದ್ಯ, 7 ಜಯ, 0 ಸೋಲು, ಡ್ರಾ 0, 360 ಅಂಕ)
2. ಆಸ್ಟ್ರೇಲಿಯಾ (8 ಪಂದ್ಯ, 5 ಜಯ, 2 ಸೋಲು, ಡ್ರಾ 1, 216 ಅಂಕ)
3. ಶ್ರೀಲಂಕಾ (3 ಪಂದ್ಯ, 1 ಜಯ, 1 ಸೋಲು, ಡ್ರಾ 1, 80 ಅಂಕ)
4. ನ್ಯೂಜಿಲೆಂಡ್‌ (3 ಪಂದ್ಯ, 1 ಜಯ, 2 ಸೋಲು, ಡ್ರಾ 0, 60 ಅಂಕ)
5. ಇಂಗ್ಲೆಂಡ್‌ (5 ಪಂದ್ಯ, 2 ಜಯ, 2 ಸೋಲು, ಡ್ರಾ 1, 56 ಅಂಕ)


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌