ಆ್ಯಪ್ನಗರ

ಆಲಿಸ್ಟಾರ್ ವಿಕೆಟ್‌ಗೆ 'ಕುಕ್ಕಿ'ದ ಅಶ್ವಿನ್

ಇಲ್ಲಿನ ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಆರಂಭವಾಗಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಭಾರತ ಮೊದಲು ಫೀಲ್ಡಿಂಗ್‌ಗಿಳಿಸಲ್ಪಟ್ಟಿದೆ.

Vijaya Karnataka Web 1 Aug 2018, 5:12 pm
ಬರ್ಮಿಂಗ್‌ಹ್ಯಾಮ್: ಇಲ್ಲಿನ ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಆರಂಭವಾಗಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಭಾರತ ಮೊದಲು ಫೀಲ್ಡಿಂಗ್‌ಗಿಳಿಸಲ್ಪಟ್ಟಿದೆ.
Vijaya Karnataka Web ashwin-clin-bowled-cook


ಆದರೆ ಟಾಸ್ ವೇಳೆಯಲ್ಲೇ ಪ್ರತಿಕ್ರಿಯೆ ನೀಡಿರುವ ನಾಯಕ ವಿರಾಟ್ ಕೊಹ್ಲಿ, ಮೊದಲು ಕ್ಷೇತ್ರರಕ್ಷಣೆ ಮಾಡಲು ಬಯಸಿದ್ದರು.

ಇದಕ್ಕೆ ತಕ್ಕಂತೆ ಪ್ರತಿಕ್ರಿಯಿಸಿರುವ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಇಂಗ್ಲೆಂಡ್‌ನ ಎಡಗೈ ಅನುಭವಿ ಬ್ಯಾಟ್ಸ್‌ಮನ್ ಆಲಿಸ್ಟಾರ್ ಕುಕ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಆತಿಥೇಯರಿಗೆ ಮೊದಲ ಆಘಾತ ನೀಡಿದ್ದಾರೆ.


ಆಫ್ ಸ್ಪಿನ್ನರ್ ಓರ್ವ ಎಡಗೈ ಬ್ಯಾಟ್ಸ್‌ಮನ್‌ಗೆ ಮಾಡಲು ಬಯಸುವ ಡ್ರೀಮ್ ಎಸೆತ ಎಂದು ಅಶ್ವಿನ್ ಬೌಲಿಂಗ್‌ನ್ನು ಕ್ರಿಕೆಟ್ ವಿಶ್ಲೇಷಕರು ಕೊಂಡಾಡಿದ್ದಾರೆ.

28 ಎಸೆತಗಳನ್ನು ಎದುರಿಸಿರುವ ಕುಕ್ ಎರಡು ಬೌಂಡರಿಗಳ ನೆರವಿನಿಂದ 13 ರನ್ ಗಳಿಸಲಷ್ಟೇ ಶಕ್ತವಾಗಿದ್ದರು. ಅತ್ತ ತಾವೊಬ್ಬ ಶ್ರೇಷ್ಠ ಟೆಸ್ಟ್ ಬೌಲರ್ ಎಂಬುದನ್ನು ಅಶ್ವಿನ್ ಮಗದೊಮ್ಮೆ ನಿರೂಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌