ಆ್ಯಪ್ನಗರ

ರಹಮತ್ ಶಾ ಆಫ್ಘನ್‌ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್

ರಹಮತ್ ಶಾ ಅಫಘಾನಿಸ್ತಾನ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಪಾತ್ರವಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಈ ಸ್ಮರಣೀಯ ಸಾಧನೆ ಮಾಡಿದ್ದಾರೆ.

Vijaya Karnataka Web 6 Sep 2019, 10:57 am
ಆತಿಥೇಯ ಬಾಂಗ್ಲಾದೇಶ ತಂಡದ ವಿರುದ್ಧ ಚಿತ್ತಗಾಂಗ್‌ನಲ್ಲಿ ನಡೆಯುತ್ತಿರುವ ಟೆಸ್ಟ್‌ ಪಂದ್ಯದಲ್ಲಿ ಅಫಘಾನಿಸ್ತಾನದ ರಹಮತ್‌ ಶಾ ಶತಕ ಬಾರಿಸಿದ್ದು, ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಫ್ಘನ್‌ ಪರ ಮೂರಂಕಿ ಮೊತ್ತ ಗಳಿಸಿದ ಮೊದಲ ಬ್ಯಾಟ್ಸ್‌ಮನ್‌ ಎನ್ನುವ ಖ್ಯಾತಿ ಗಳಿಸಿಕೊಂಡಿದ್ದಾರೆ.
Vijaya Karnataka Web rahmat-shah


ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನ ನಡುವೆ ನಿಗದಿಯಾದ ಏಕೈಕ ಟೆಸ್ಟ್‌ ಪಂದ್ಯದಲ್ಲಿ ರಹಮತ್‌ ಶಾ 187 ಎಸೆತಗಳಲ್ಲಿ 102 ರನ್‌ ಬಾರಿಸಿದ್ದಾರೆ.

ಅತಿ ಕಿರಿಯ ನಾಯಕ
ಈ ಮೊದಲು ಅಫಘಾನಿಸ್ತಾನ ತಂಡದ ಆಲ್‌ರೌಂಡರ್‌ ರಶೀದ್‌ ಖಾನ್‌ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲೇ ಅತಿ ಕಿರಿಯ ನಾಯಕನಾಗಿ ದಾಖಲೆಗಳ ಕಡತ ಸೇರಿದ್ದಾರೆ.

ರಶೀದ್‌ಗೆ ಗುರುವಾರ 20 ವರ್ಷ 350 ದಿನವಾಗಿದ್ದು, 15 ವರ್ಷಗಳ ಹಿಂದಿನ ದಾಖಲೆ ಮುರಿದಿದ್ದಾರೆ. 2004ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದ ವೇಳೆ ಜಿಂಬಾಬ್ವೆ ತಂಡದ ನಾಯಕರಾಗಿದ್ದ ಟಿ.ತೈಬುಗೆ 21 ವರ್ಷ 2 ದಿನಗಳಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌