ಆ್ಯಪ್ನಗರ

ರಹಾನೆ ಕೈಬಿಟ್ಟ ನಿರ್ಧಾರ ಸಮರ್ಥಿಸಿಕೊಂಡ ರವಿಶಾಸ್ತ್ರಿ

ವಿದೇಶ ನೆಲದಲ್ಲಿ ಅತ್ಯುತ್ತಮ ದಾಖಲೆ ಹೊಂದಿರುವ ಹೊರತಾಗಿಯೂ ಮಧ್ಯಮ ಕ್ರಮಾಂಕದ ಕಲಾತ್ಮಕ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಅವರನ್ನು ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲೆರಡು ಟೆಸ್ಟ್ ಪಂದ್ಯಗಳಿಂದ ಕೈಬಿಡಲಾಗಿತ್ತು.

TIMESOFINDIA.COM 23 Jan 2018, 3:38 pm
ಜೋಹಾನ್ಸ್‌ಬರ್ಗ್: ವಿದೇಶ ನೆಲದಲ್ಲಿ ಅತ್ಯುತ್ತಮ ದಾಖಲೆ ಹೊಂದಿರುವ ಹೊರತಾಗಿಯೂ ಮಧ್ಯಮ ಕ್ರಮಾಂಕದ ಕಲಾತ್ಮಕ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಅವರನ್ನು ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲೆರಡು ಟೆಸ್ಟ್ ಪಂದ್ಯಗಳಿಂದ ಕೈಬಿಡಲಾಗಿತ್ತು.
Vijaya Karnataka Web ravi shastri defends ajinkya rahanes omission from first two tests
ರಹಾನೆ ಕೈಬಿಟ್ಟ ನಿರ್ಧಾರ ಸಮರ್ಥಿಸಿಕೊಂಡ ರವಿಶಾಸ್ತ್ರಿ


ಇತ್ತೀಚೆಗಿನ ಫಾರ್ಮ್ ಗಮನಿಸಿ ರಹಾನೆ ಜಾಗಕ್ಕೆ ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಟೀಮ್ ಇಂಡಿಯಾದ ಈ ನಿರ್ಧಾರ ತಪ್ಪಾಗಿತ್ತು ಎಂಬುದು ಸಾಬೀತಾಗಿದೆ.

ಈ ನಡುವೆ ರಹಾನೆ ಅವರನ್ನು ಹೊರಗಿರಿಸಿರುವ ನಿರ್ಧಾರವನ್ನು ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ ಸಮರ್ಥಿಸಿಕೊಂಡಿದ್ದಾರೆ.

ಒಂದು ವೇಳೆ ರಹಾನೆ ಮೊದಲ ಟೆಸ್ಟ್ ಆಡುತ್ತಿದ್ದಲ್ಲಿ ಹಾಗೂ ಉತ್ತಮ ನಿರ್ವಹಣೆ ನೀಡದಿದ್ದಲ್ಲಿ ನೀವು ಇದೇ ಪ್ರಶ್ನೆಯನ್ನು ಕೇಳುವೀರಿ. ಯಾಕೆ ರೋಹಿತ್ ಅವರನ್ನು ಆಯ್ಕೆ ಮಾಡಲಿಲ್ಲ?. ಇಲ್ಲಿ ರೋಹಿತ್ ಆಡಿದರು. ಆದರೆ ಉತ್ತಮ ನಿರ್ವಹಣೆ ನೀಡಲಿಲ್ಲ. ಹಾಗಾಗಿ ರಹಾನೆ ಯಾಕೆ ಆಡಿಸಲಿಲ್ಲ ಎಂದು ಪ್ರಶ್ನಿಸುತ್ತಿದ್ದೀರಿ ಎಂದು ಶಾಸ್ತ್ರಿ ಹೇಳಿದರು.

ವೇಗಿಗಳ ವಿಷಯದಲ್ಲೂ ಇದೇ ಸಂಭವಿಸುತ್ತಿತ್ತು. ಹಾಗಾಗಿ ನಿಮಗೆ ನಿಮ್ಮದೇ ಆದ ಆಯ್ಕೆಗಳಿವೆ. ಟೀಮ್ ಮ್ಯಾನೇಜ್‌ಮೆಂಟ್ ಎಲ್ಲವನ್ನೂ ಚರ್ಚಿಸಿದ ಬಳಿಕ ಶ್ರೇಷ್ಠ ತಂಡವನ್ನು ಆಯ್ಕೆ ಮಾಡಿದೆ. ಅದಕ್ಕವರು ಬದ್ಧವಾಗಿದ್ದಾರೆ ಎಂದರು.

ವಿಶ್ಲೇಷಕರಿಗೆ ಅವರದ್ದೇ ಆದ ಕೆಲಸಗಳಿವೆ. ಅವರಿಗೆ ಅನಿಸಿರುವುದನ್ನು ಹೇಳುತ್ತಾರೆ. ಇದು ನಮಗೆ ಭಾದಕವಲ್ಲ ಎಂದರು.

ಭಾರತದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಸೇರಿದಂತೆ ಅನೇಕ ಮಾಜಿಗಳು ಅಜಿಂಕ್ಯ ರಹಾನೆ ಹಾಗೂ ಭುವರನೇಶ್ವರ್ ಕುಮಾರ್ ಅವರನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌