ಆ್ಯಪ್ನಗರ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಬಾರಿಸಿದ ಜಡ್ಡು

ಚೊಚ್ಚಲ ಟೆಸ್ಟ್ ಶತಕ ಬಾರಿಸಿದ ರವೀಂದ್ರ ಜಡೇಜಾ

Vijaya Karnataka Web 5 Oct 2018, 2:53 pm
ರಾಜ್‌ಕೋಟ್: ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ಆಟಗಾರ ರವೀಂದ್ರ ಜಡೇಜಾ ಚೊಚ್ಚಲ ಟೆಸ್ಟ್ ಶತಕವನ್ನು ಬಾರಿಸಿದ್ದಾರೆ.
Vijaya Karnataka Web ravindra-jadeja-100


ವಿಶೇಷವೆಂದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದು ಜಡೇಜಾ ಬ್ಯಾಟ್‌ನಿಂದ ಸಿಡಿದ ಚೊಚ್ಚಲ ಶತಕವೂ ಹೌದು.

ತಮ್ಮ 38ನೇ ಟೆಸ್ಟ್ (56ನೇ ಇನ್ನಿಂಗ್ಸ್) ಪಂದ್ಯದಲ್ಲಿ ಜಡೇಜಾ ಶತಕ ಸಾಧನೆ ಮಾಡಿದ್ದಾರೆ. 140 ಏಕದಿನ ಹಾಗೂ 40 ಟ್ವೆಂಟಿ-20 ಪಂದ್ಯಗಳಲ್ಲೂ ಜಡೇಜಾಗೆ ಶತಕ ಬಾರಿಸಲು ಸಾಧ್ಯವಾಗಿಲ್ಲ ಎಂಬುದು ಅಷ್ಟೇ ಮಹತ್ವದೆನಿಸಿಕೊಳ್ಳುತ್ತದೆ.

ಜಡ್ಡು ಇದುವರೆಗೆ ಟೆಸ್ಟ್‌ನಲ್ಲಿ ಒಂಬತ್ತು ಹಾಗೂ ಏಕದಿನದಲ್ಲಿ 10 ಅರ್ಧಶತಕಗಳನ್ನು ಹೊಂದಿದ್ದಾರೆ. ಇದುವರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಗರಿಷ್ಠ ಮೊತ್ತ 90 ಆಗಿತ್ತು. ಅದನ್ನೀಗ ಮುರಿದಿದ್ದಾರೆ.

132 ಎಸೆತಗಳನ್ನು ಎದುರಿಸಿದ ಜಡೇಜಾ ತಲಾ ಐದು ಬೌಂಡರಿ ಹಾಗೂ ಸಿಕ್ಸರ್‌ಗಳ ನೆರವಿನಿಂದ 100 ರನ್ ಗಳಿಸಿ ಅಜೇಯರಾಗುಳಿದಿದ್ದರು.

ಚೊಚ್ಚಲ ಶತಕಕ್ಕಾಗಿ ಅತಿ ಹೆಚ್ಚು ಇನ್ನಿಂಗ್ಸ್‌ಗಳನ್ನು ಆಡಿರುವ ಭಾರತೀಯ ಬ್ಯಾಟ್ಸ್‌ಮನ್‌ಗಳು:
ಅನಿಲ್ ಕುಂಬ್ಳೆ (151)
ಹರ್ಭಜನ್ ಸಿಂಗ್ (122)
ರವೀಂದ್ರ ಜಡೇಜಾ (56)
ಮನೋಜ್ ಪ್ರಭಾಕರ್ (53)
ಸಯ್ಯದ್ ಕಿರ್ಮಾನಿ (51)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌