ಆ್ಯಪ್ನಗರ

ಎಬಿಡಿಗಾಗಿ 3ನೇ ಕ್ರಮಾಂಕ ತ್ಯಾಗಕ್ಕೆ ಸಿದ್ಧ: ವಿರಾಟ್‌

ವಿಕ ಸುದ್ದಿಲೋಕ ಬೆಂಗಳೂರು ಸ್ಪೋಟಕ ಬ್ಯಾಟ್ಸ್‌ಮನ್‌ ಎಬಿ ಡಿ'ವಿಲಿಯರ್ಸ್‌ ಅವರಿಗಾಗಿ ತಮ್ಮ ನೆಚ್ಚಿನ 3ನೇ ಕ್ರಮಾಂಕವನ್ನು ತ್ಯಾಗ ಮಾಡಲು ಸಿದ್ಧನಿದ್ದೇನೆ ಎಂದು ರಾಯಲ್‌ ...

ವಿಕ ಸುದ್ದಿಲೋಕ 12 Apr 2016, 4:00 am

ಬೆಂಗಳೂರು: ಸ್ಪೋಟಕ ಬ್ಯಾಟ್ಸ್‌ಮನ್‌ ಎಬಿ ಡಿ'ವಿಲಿಯರ್ಸ್‌ ಅವರಿಗಾಗಿ ತಮ್ಮ ನೆಚ್ಚಿನ 3ನೇ ಕ್ರಮಾಂಕವನ್ನು ತ್ಯಾಗ ಮಾಡಲು ಸಿದ್ಧನಿದ್ದೇನೆ ಎಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ವಿರಾಟ್‌ ಕೊಹ್ಲಿ ತಿಳಿಸಿದ್ದಾರೆ.

ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯಕ್ಕೆ ಪೂರ್ವಭಾವಿಯಾಗಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್‌, ''ತಂಡಕ್ಕೆ ಒಳಿತಾಗುವುದಾದರೆ 3ನೇ ಕ್ರಮಾಂಕವನ್ನು ಡಿ'ವಿಲಿಯರ್ಸ್‌ಗೆ ಬಿಟ್ಟುಕೊಟ್ಟು ಆರಂಭಿಕನಾಗಿ ಆಡಲು ಸಿದ್ಧ. ಎಬಿಡಿ 3ನೇ ಕ್ರಮಾಂಕದಲ್ಲಿ ಆಡಿದರೆ ಅದರಿಂದ ಅವರಿಗೆ ಹೆಚ್ಚು ಎಸೆತಗಳನ್ನು ಎದುರಿಸುವ ಅವಕಾಶ ಲಭಿಸುತ್ತದೆ. ಅವರು ಲಯ ಕಂಡುಕೊಂಡರೆ ಅದು ಎದುರಾಳಿ ತಂಡಗಳಿಗೆ ಶುಭ ಸೂಚನೆಯಂತೂ ಅಲ್ಲವೇ ಅಲ್ಲ,'' ಎಂದು ತಿಳಿಸಿದರು.

ಘಿಆವಿಶಾಲ ಹೃದಯದ ಪ್ರೇಕ್ಷಕರು

ಘಿಆಇದೇ ವೇಳೆ ಬೆಂಗಳೂರಿನ ಕ್ರಿಕೆಟ್‌ ಪ್ರಿಯರು ವಿಶಾಲ ಹೃದಯದವರು ಎಂದು ಕೊಹ್ಲಿ ಬಣ್ಣಿಸಿದರು. ''ಇಲ್ಲಿನ ಜನ ಫಲಿತಾಂಶವನ್ನು ಲೆಕ್ಕಿಸದೆ ಹೃದಯಪೂರ್ವಕವಾಗಿ ನಮಗೆ ಬೆಂಬಲ ನೀಡುತ್ತಾರೆ. ಭಾರತೀಯ ಆಟಗಾರರು ಯಾವುದೇ ತಂಡಗಳಲ್ಲಿದ್ದರೂ ಎಲ್ಲರಿಗೂ ಸಮಾನ ಗೌರವ, ಪ್ರೋತ್ಸಾಹ ನೀಡುತ್ತಾರೆ. ಆದರೆ ಕೆಲ ಸಂದರ್ಭಗಳಲ್ಲಿ ನಾವು ನಮ್ಮದೇ ನೆಲದಲ್ಲಿ ನಮ್ಮದೇ ರಾಷ್ಟ್ರದ ಪ್ರೇಕ್ಷಕರಿಂದ ನಿಂದನೆ ಎದುರಿಸಿದ್ದೇವೆ. ಆದರೆ ಬೆಂಗಳೂರಿನಲ್ಲಿ ಆಡುವ ಸಂದರ್ಭದಲ್ಲಿ ಎಂದೂ ಅಂತಹ ಕಹಿ ಘಟನೆ ಎದುರಾಗಿಲ್ಲ. ಅಷ್ಟರ ಮಟ್ಟಿಗೆ ಜನ ನಮ್ಮನ್ನು ಪ್ರೀತಿಸುತ್ತಾರೆ,'' ಎಂದು ಆರ್‌ಸಿಬಿ ನಾಯಕ ಹೇಳಿದರು.

ಐಸಿಸಿ ಟಿ20 ವಿಶ್ವಕಪ್‌ ಸೋಲಿನ ಬಗ್ಗೆ ಮಾತನಾಡಿದ ವಿರಾಟ್‌, ಸೆಮಿಫೈನಲ್‌ನಲ್ಲಿ ಕಂಡ ಸೋಲಿನ ಆಘಾತದಿಂದ ಹೊರ ಬರಲು ಸಾಕಷ್ಟು ದಿನ ಬೇಕಾಯಿತು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌