ಆ್ಯಪ್ನಗರ

ಫಿಟ್ನೆಸ್ ಇದ್ದರೂ ಯುವಿ, ರೈನಾ ಕಡೆಗಣಿಸಿದ್ದು ಏಕೆ?

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 'ಯೊ-ಯೊ' ಫಿಟ್ನೆಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಹೊರತಾಗಿಯೂ ಅನುಭವಿ ಆಟಗಾರರಾದ ಯುವರಾಜ್ ಸಿಂಗ್ ಮತ್ತು ಸುರೇಶ್ ರೈನಾ ಅವರನ್ನು ಆಯ್ಕೆ ಸಮಿತಿ ಕಡೆಗಣಿಸಲಾಗಿತ್ತು.

Vijaya Karnataka Web 24 Dec 2017, 3:31 pm
ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 'ಯೊ-ಯೊ' ಫಿಟ್ನೆಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಹೊರತಾಗಿಯೂ ಅನುಭವಿ ಆಟಗಾರರಾದ ಯುವರಾಜ್ ಸಿಂಗ್ ಮತ್ತು ಸುರೇಶ್ ರೈನಾ ಅವರನ್ನು ಆಯ್ಕೆ ಸಮಿತಿ ಕಡೆಗಣಿಸಲಾಗಿತ್ತು.
Vijaya Karnataka Web reason for yuvraj raina omission from india squad to face south africa
ಫಿಟ್ನೆಸ್ ಇದ್ದರೂ ಯುವಿ, ರೈನಾ ಕಡೆಗಣಿಸಿದ್ದು ಏಕೆ?


ಇದುವರೆಗೆ ಯೊ-ಯೊ ಫಿಟ್ನೆಸ್ ಟೆಸ್ಟ್‌ನಲ್ಲಿ ಫೇಲಾಗಿರುವ ಕಾರಣ ನೀಡುತ್ತಿದ್ದ ಆಯ್ಕೆ ಸಮಿತಿ ಇದೇ ಮೊದಲ ಬಾರಿಗೆ ದೈಹಿಕ ಸಾಮರ್ಥ್ಯ ಹೊಂದಿರುವ ಹೊರತಾಗಿಯೂ ಇವರಿಬ್ಬರನ್ನು ಕಡೆಗಣಿಸಲಾಗಿದೆ.

ಕಳೆದ ದಿನ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಏಕದಿನ ಸರಣಿಗಾಗಿನ 17 ಮಂದಿ ಸದಸ್ಯರ ತಂಡವನ್ನು ಘೋಷಿಸಲಾಗಿತ್ತು. ದಕ್ಷಿಣ ಆಫ್ರಿಕಾದಂತಹ ಪ್ರಮುಖ ಸರಣಿಯಿಂದ ಯುವಿ ಹಾಗೂ ರೈನಾ ಕೈಬಿಟ್ಟಿರುವುದು ಹೆಚ್ಚಿನ ವಿಮರ್ಶೆಗೆ ಕಾರಣವಾಗುತ್ತಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್, ದುರದೃಷ್ಟವಶಾತ್ ಮ್ಯಾಚ್ ಪ್ರಾಕ್ಟಿಸ್ ಕೊರತೆಯಿರುವುದರಿಂದ ಕಡೆಗಣಿಸಲಾಗಿದೆ ಎಂದಿದ್ದಾರೆ.
ಯೊ-ಯೊ ಫಿಟ್ನೆಸ್‌ನಲ್ಲಿ ತೇರ್ಗಡೆ ಹೊಂದುವಲ್ಲಿ ಗಮನ ಕೇಂದ್ರಿತವಾಗಿರುವ ಯುವಿ ರಣಜಿ ಟ್ರೋಫಿಯಲ್ಲಿ ಪಂಜಾಬ್ ಪರ ಕೇವಲ ಒಂದು ಪಂದ್ಯದಲ್ಲಷ್ಟೇ ಆಡಿದ್ದರು.

ಯುವರಾಜ್ ಆಯ್ಕೆ ವಿಚಾರ ಪರಿಗಣಿಸಿದಾದ ಫಿಟ್ನೆಸ್ ಸಮಸ್ಯೆ ಸಹ ಕಾಣಿಸಿಕೊಳ್ಳುತ್ತದೆ. ಯುವಿ ಯೊ-ಯೊ ಫಿಟ್ನೆಸ್ ಪಾಸಾಗಿರುವುದು ಸಂತಸ ತಂದಿದೆ. ಕಳೆದ ಕೆಲವು ಸಮಯಗಳಿಂದ ಆಡದಿರುವುದರಿಂದ ಮೊದಲು ಮ್ಯಾಚ್ ಪ್ರಾಕ್ಟಿಸ್ ಆಗಲಿ. ನಾವು ಖಂಡಿತವಾಗಿಯೂ ಅವರನ್ನು ಪರಿಗಣಿಸಲಿದ್ದೇವೆ ಎಂದಿದ್ದಾರೆ.

ಯುವಿ ತರಹನೇ ರೈನಾ ಸಹ ಯೊ-ಯೊ ಟೆಸ್ಟ್‌ನಲ್ಲಿ ಪಾಸಾಗಿದ್ದರು. ಆದರೆ ದೇಶೀಯ ಟೂರ್ನಿಯಲ್ಲಿ ಭಾರಿ ವೈಫಲ್ಯ ಅನುಭವಿಸಿದ್ದರು. ರಣಜಿ ಟ್ರೋಫಿಯಲ್ಲಿ ಉತ್ತರ ಪ್ರದೇಶ ಪರ ಆಡಿರುವ 12 ಪಂದ್ಯಗಳಲ್ಲಿ 11.66ರ ಸರಾಸರಿಯಲ್ಲಿ 105 ರನ್‌ಗಳನ್ನಷ್ಟೇ ಗಳಿಸಿದ್ದರು. ರೈನಾ ಗರಿಷ್ಠ ಮೊತ್ತ 33. ಇದರಿಂದಾಗಿ ಸಹಜವಾಗಿಯೇ ಸ್ಥಾನ ಕಳೆದುಕೊಳ್ಳುವಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌