ಆ್ಯಪ್ನಗರ

ಏಷ್ಯಾ ಕಪ್; ಕೊನೆಯ ಓವರ್‌ನಲ್ಲಿ ಭಾರತದ ಥ್ರಿಲ್ಲಿಂಗ್ ವಿನ್ ನೋಡಲು ಮರೆಯದಿರಿ!

ಕೊನೆಯ ಓವರ್‌ನಲ್ಲಿ ಕೇದರ್ ಜಾಧವ್-ಕುಲ್‌ದೀಪ್ ಯಾದವ್ ಗೆಲುವಿನ ಓಟ

Times Now 29 Sep 2018, 3:36 pm
ದುಬೈ: ಏಷ್ಯಾ ಕಪ್ 2018 ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಕೊನೆಯ ಎಸೆತದಲ್ಲಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ದಾಖಲೆಯ ಏಳನೇ ಬಾರಿಗೆ ಕಿರೀಟ ಎತ್ತಿ ಹಿಡಿದಿದೆ.
Vijaya Karnataka Web kedar-jadhav-09


ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ಲಿಟನ್ ದಾಸ್ (121) ಅಮೋಘ ಶತಕದ ಹೊರತಾಗಿಯೂ 222 ರನ್‌ಗಳಿಗೆ ಸರ್ವಪತನವನ್ನು ಕಂಡಿತ್ತು. ಬಳಿಕ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ರೋಹಿತ್ ಶರ್ಮಾ (48) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಒಂದು ಹಂತದಲ್ಲಿ ಸುಲಭ ಗೆಲುವು ದಾಖಲಿಸಿದೆಯೆಂದು ಅಂದುಕೊಂಡರೂ ಬಾಂಗ್ಲಾ ಹುಲಿಗಳ ನಿಖರ ದಾಳಿ ಹಾಗೂ ಫೀಲ್ಡಿಂಗ್ ಮುಂದೆ ಗೆಲುವಿಗಾಗಿ ಹರಸಾಹಸ ಪಡಬೇಕಾಯಿತು.

ಅದರಲ್ಲೂ ಮೊಹ್ಮದುಲ್ಲಾ ಅವರ ಕೊನೆಯ ಓವರ್‌ನಲ್ಲಿ ಗೆಲುವಿಗೆ 6 ರನ್‌ಗಳ ಅವಶ್ಯಕತೆಯಿತ್ತು. ಕ್ರೀಸಿನಲ್ಲಿದಿದ್ದು ಕುಲ್‌ದೀಪ್ ಯಾದವ್ ಹಾಗೂ ಕೇದರ್ ಜಾಧವ್. ಆಗಲೇ ಸ್ನಾಯು ಸೆಳೆತಕ್ಕೂಳಗಾಗಿ ಮೈದಾನ ತೊರೆದಿದ್ದ ಜಾಧವ್ ತಂಡವು ಆರು ವಿಕೆಟುಗಳನ್ನು ಪತನಗೊಂಡಾಗ ಮತ್ತೆ ಕ್ರೀಸ್‌ಗೆ ಆಗಮಿಸಿದ್ದರು.

ನೋವಿನ ನಡುವೆಯೂ ಕುಲ್‌ದೀಪ್ ಜತೆ ಸೇರಿಕೊಂಡು ವಿನ್ನಿಂಗ್ ರನ್ ಬಾರಿಸಿದ ಜಾಧವ್ ಭಾರತಕ್ಕೆ ಗೆಲುವು ಒದಗಿಸಿಕೊಡುವಲ್ಲಿ ನೆರವಾದರು. ಭಾರತ ಗೆಲುವಿನ ಕೊನೆಯ ಓವರ್‌ನ ರೋಚಕ ಕ್ಷಣಗಳನ್ನು ನೋಡಲು ಮರೆಯದಿರಿ.

ಕೊನೆಯ ಓವರ್:
49.1: ಕುಲ್‌ದೀಪ್ ಸಿಂಗಲ್
49.2: ಜಾಧವ್ ಸಿಂಗಲ್
49.3: ಕುಲ್‌ದೀಪ್‌ ಬ್ಯಾಟ್‌ನಿಂದ ಎರಡು ರನ್
49.4: ಡಾಟ್ ಬಾಲ್
49.5: ಕುಲ್‌ದೀಪ್ ಸಿಂಗಲ್
49.6: ಲೆಗ್ ಬೈ, ಭಾರತಕ್ಕೆ ರೋಚಕ ಗೆಲುವು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌