ಆ್ಯಪ್ನಗರ

ರಿಷಬ್ ಪಂತ್ ಆಯ್ತು; ಕೆಎಲ್ ರಾಹುಲ್‌ಗೆ ಕಾಡಿದ 'ಧೋನಿ' ಕಾಟ!

ಹೆಲ್ಮೆಟ್‌ಗೆ ಚೆಂಡು ಬಡಿದ ಕಾರಣ ತಲೆಗೆ ಗಾಯ ಮಾಡಿಕೊಂಡಿರುವ ಆತಂಕಕ್ಕೊಳಗಾಗಿರುವ ರಿಷಬ್ ಪಂತ್, ವಿಕೆಟ್ ಕೀಪಿಂಗ್‌ಗಾಗಿ ಮೈದಾನಕ್ಕಿಳಿದಿರಲಿಲ್ಲ. ಇದರಿಂದಾಗಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಜವಾಬ್ದಾರಿಯನ್ನು ವಹಿಸಿದರು. ಆದರೆ ಸ್ಟಂಪಿಂಗ್ ಅವಕಾಶ ಮಿಸ್ ಮಾಡಿದಾಗ ಅಭಿಮಾನಿಗಳು 'ಧೋನಿ ಧೋನಿ' ಎಂದು ಕೂಗಿ ರಾಹುಲ್‌ಗೆ ಜರೆದರು.

Vijaya Karnataka Web 15 Jan 2020, 4:55 pm
ಮುಂಬಯಿ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ 10 ವಿಕೆಟ್ ಅಂತರದ ಹೀನಾಯ ಸೋಲಿಗೆ ಗುರಿಯಾಗಿರುವ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 0-1ರ ಅಂತರದ ಹಿನ್ನೆಡೆಗೊಳಗಾಗಿದೆ. ಅಲ್ಲದೆ ಸರಣಿ ವಶಪಡಿಸಿಕೊಳ್ಳಲು ಮುಂದಿನ ಎರಡು ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
Vijaya Karnataka Web ಕೆಎಲ್ ರಾಹುಲ್ - ರಿಷಬ್ ಪಂತ್ - ಮಹೇಂದ್ರ ಸಿಂಗ್ ಧೋನಿ


ಮೊದಲು ಬ್ಯಾಟಿಂಗ್ ನಡೆಸಿದ ಭಾರತ 49.1 ಓವರ್‌ಗಳಲ್ಲಿ 255 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಮಧ್ಯೆ ಯುವ ವಿಕೆಟ್ ಕೀಪರ್ ಎಡಗೈ ಬ್ಯಾಟ್ಸ್‌ಮನ್ ರಿಷಬ್ ಪಂತ್ ತಲೆಗೆ ಚೆಂಡು ಬಡಿದು ಗಾಯ ಮಾಡಿಕೊಂಡಿದ್ದರು. ಇದರಿಂದಾಗಿ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ವೈದ್ಯಕೀಯ ಪರೀಕ್ಷೆಯ ಹಿನ್ನೆಲೆಯಲ್ಲಿ ಭಾರತದ ಫೀಲ್ಡಿಂಗ್ ವೇಳೆಯಲ್ಲಿ ಮೈದಾನಕ್ಕಿಳಿದಿರಲಿಲ್ಲ.

ಇದರಿಂದಾಗಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಜವಾಬ್ದಾರಿಯನ್ನು ವಹಿಸಿದರು. ಆದರೆ ರಾಹುಲ್‌ಗೆ ನಿರೀಕ್ಷಿದಷ್ಟು ಉತ್ತಮವಾಗಿ ವಿಕೆಟ್ ಕೀಪಿಂಗ್ ಮಾಡಲು ಸಾಧ್ಯವಾಗಲಿಲ್ಲ. ಪರಿಣಾಮ ಭಾರತದ ಇನ್ನಿಂಗ್ಸ್‌ನ 24ನೇ ಓವರ್‌ನಲ್ಲಿ ಸ್ಟಂಪಿಂಗ್ ಅವಕಾಶವೊಂದನ್ನು ಕೈಚೆಲ್ಲಿದ್ದರು. ಈ ವೇಳೆಯಲ್ಲಿ ವಾಂಖೆಡೆ ಅಭಿಮಾನಿಗಳು ಜೋರಾಗಿ 'ಧೋನಿ ಧೋನಿ' ಎಂದು ಕೂಗಾಡಿದರು.

2020ರ ಮೊದಲ ಬಲವಾದ ಹೊಡೆತ; 15 ವರ್ಷದಲ್ಲೇ ಹೀನಾಯ ಸೋಲಿಗಿರುವ 5 ಪ್ರಮುಖ ಕಾರಣಗಳು

ಈ ಹಿಂದೆ ಅನೇಕ ಬಾರಿ ಸ್ಟಂಪ್ ಹಿಂದುಗಡೆ ತಪ್ಪು ಎಸಗಿದಾಗ ರಿಷಬ್ ಪಂತ್‌ಗೆ ಇದೇ ಪರಿಸ್ಥಿತಿ ಎದುರಾಗಿತ್ತು. ಇದೀಗ ಕೆಎಲ್ ರಾಹುಲ್ ಕೂಡಾ ವಿಕೆಟ್ ಕೀಪಿಂಗ್‌ನಲ್ಲಿ ಎಡವಟ್ಟು ಮಾಡುವ ಮೂಲಕ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಏತನ್ಮಧ್ಯೆ ದ್ವಿತೀಯ ಏಕದಿನ ಪಂದ್ಯಕ್ಕಾಗಿ ಟೀಮ್ ಇಂಡಿಯಾ ರಾಜ್‌ಕೋಟ್‌ನತ್ತ ಪ್ರಯಾಣ ಬೆಳೆಸಿದೆ. ಆದರೆ ರಿಷಬ್ ಪಂತ್ ಮುಂಬಯಿನಲ್ಲೇ ಉಳಿದುಕೊಂಡಿದ್ದಾರೆ. ಪಂತ್ ಗಾಯದ ಬಗ್ಗೆ ಇನ್ನಷ್ಟೇ ಖಚಿತ ಮಾಹಿತಿ ಲಭಿಸಬೇಕಿದೆ. ಹಾಗೊಂದು ವೇಳೆ ದ್ವಿತೀಯ ಪಂದ್ಯಕ್ಕೆ ಅಲಭ್ಯವಾದರೆ ಯಾರು ವಿಕೆಟ್ ಕೀಪರ್ ಹೊಣೆ ವಹಿಸಲಿದ್ದಾರೆ ಎಂಬುದು ಪ್ರಶ್ನೆಯ ವಿಷಯವಾಗಿದೆ.

ರೋಹಿತ್ ಶರ್ಮಾ ಐಸಿಸಿ 2019 'ವರ್ಷದ ಏಕದಿನ ಕ್ರಿಕೆಟಿಗ'; ಕಿಂಗ್ ಕೊಹ್ಲಿಗೆ 'ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿ'

ಶಿಖರ್ ಧವನ್ ಜೊತೆಗೆ ಕೆಎಲ್ ರಾಹುಲ್‌ಗೆ ಅವಕಾಶ ನೀಡುವ ನಿಟ್ಟಿನಲ್ಲಿ ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸಿಗಳಿದಿದ್ದರು. ಆದರೆ ಈ ನಿರ್ಣಯ ಭಾರತಕ್ಕೆ ಮುಳುವಾಗಿ ಪರಿಣಮಿಸಿತ್ತು. ಧವನ್ ಹಾಗೂ ರಾಹುಲ್ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರೂ ದೊಡ್ಡ ಮೊತ್ತವಾಗಿ ಪರಿವರ್ತಿಸಲು ವಿಫಲವಾದರು. ನಿರಂತರ ಅಂತರಾಳದಲ್ಲಿ ಪದೇ ಪದೇ ವಿಕೆಟ್‌ಗಳು ಪತನಗೊಂಡಿರುವುದು ಹಿನ್ನೆಡೆಗೆ ಕಾರಣವಾಯಿತು. 61 ಎಸೆತಗಳನ್ನು ಎದುರಿಸಿದ ರಾಹುಲ್ ನಾಲ್ಕು ಬೌಂಡರಿಗಳಿಂದ 47 ರನ್ ಗಳಿಸಿದರು. ಅತ್ತ ರಿಷಬ್ ಪಂತ್ 33 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 28 ರನ್ ಗಳಿಸಿದರು.

ಟೀಮ್ ಮ್ಯಾನೇಜ್‌ಮೆಂಟ್ ಮೂಲಗಳ ಪ್ರಕಾರ, ಚೆಂಡು ಹೆಲ್ಮೆಟ್‌ಗೆ ಬಡಿದಿರುವ ಹಿನ್ನೆಲೆಯಲ್ಲಿ 24 ತಾಸುಗಳ ವರೆಗೂ ನಿಗಾ ವಹಿಸಲಾಗುತ್ತಿದೆ. ಭಾರತದ ಇನ್ನಿಂಗ್ಸ್‌ನ 44 ನೇ ಓವರ್‌ನಲ್ಲಿ ಘಟನೆ ನಡೆದಿತ್ತು. ಪ್ಯಾಟ್ ಕಮಿನ್ಸ್ ದಾಳಿಯಲ್ಲಿ ಪಂತ್ ಬ್ಯಾಟ್‌ಗೆ ತಗುಲಿ ಹೆಲ್ಮೆಟ್‌ಗೆ ಬಡಿದ ಚೆಂಡು ನೇರವಾಗಿ ಫೀಲ್ಡರ್ ಕೈ ಸೇರಿತು. ಇದರಿಂದಾಗಿ ವಿಕೆಟ್ ಒಪ್ಪಿಸಬೇಕಾಯಿತು.

ಕೆಟ್ಟ ಮೇಲೆ ಬುದ್ಧಿ ಬಂತು; ನಂ.3 ಕ್ರಮಾಂಕಕ್ಕೆ ಮರಳುವ ಸೂಚನೆ ನೀಡಿದ ವಿರಾಟ್ ಕೊಹ್ಲಿ

ಸ್ಟಂಪಿಂಗ್ ಅವಕಾಶ ಮಿಸ್; 'ಧೋನಿ ಧೋನಿ' ಎಂದು ಕೂಗಿ ಕೆಎಲ್ ರಾಹುಲ್‌ಗೂ ಬಿಸಿ ಮುಟ್ಟಿಸಿದ ಫ್ಯಾನ್ಸ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌