ಆ್ಯಪ್ನಗರ

10 ಶತಕ, 2442 ರನ್; 2019ನೇ ಸಾಲಿಗೆ ಹಿಟ್‌ಮ್ಯಾನ್ 'ಬಾಸ್'

ಹೊಸದಿಲ್ಲಿ: ಹಿಟ್‌ಮ್ಯಾನ್ ಖ್ಯಾತಿಯ ಭಾರತದ ಬಲಗೈ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಪಾಲಿಗೆ 2019ನೇ ವರ್ಷ ಅತ್ಯಂತ ಸ್ಮರಣೀಯವೆನಿಸಿದೆ. ಓರ್ವ ಪರಿಪೂರ್ಣ ಬ್ಯಾಟ್ಸ್‌ಮನ್ ಆಗಿ ರೋಹಿತ್ ಶರ್ಮಾ ರೂಪಂತಾರಗೊಂಡಿರುವ ರೀತಿಯು ನಿಜಕ್ಕೂ ಅದ್ಭುತ. ಅಲ್ಲದೆ ರೋಹಿತ್ ಪಾಲಿಗೆ 2019ನೇ ವರ್ಷ ನಿಜಕ್ಕೂ ಮರೆಯಲಾಗದ ವರ್ಷವಾಗಿದ್ದು, ಅನೇಕ ದಾಖಲೆಗಳನ್ನು ಬರೆದಿದ್ದಾರೆ. ಏಕದಿನ, ಟ್ವೆಂಟಿ-20 ಅಷ್ಟೇ ಅಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲೂ ರೋಹಿತ್ ಶರ್ಮಾ ದಾಖಲೆಗಳನ್ನು ಧೂಳೀಪಟಗೈದಿದ್ದಾರೆ.

Vijaya Karnataka Web 23 Dec 2019, 3:57 pm
ಹೊಸದಿಲ್ಲಿ: ಹಿಟ್‌ಮ್ಯಾನ್ ಖ್ಯಾತಿಯ ಭಾರತದ ಬಲಗೈ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಪಾಲಿಗೆ 2019ನೇ ವರ್ಷ ಅತ್ಯಂತ ಸ್ಮರಣೀಯವೆನಿಸಿದೆ. ಓರ್ವ ಪರಿಪೂರ್ಣ ಬ್ಯಾಟ್ಸ್‌ಮನ್ ಆಗಿ ರೋಹಿತ್ ಶರ್ಮಾ ರೂಪಂತಾರಗೊಂಡಿರುವ ರೀತಿಯು ನಿಜಕ್ಕೂ ಅದ್ಭುತ. ಅಲ್ಲದೆ ರೋಹಿತ್ ಪಾಲಿಗೆ 2019ನೇ ವರ್ಷ ನಿಜಕ್ಕೂ ಮರೆಯಲಾಗದ ವರ್ಷವಾಗಿದ್ದು, ಅನೇಕ ದಾಖಲೆಗಳನ್ನು ಬರೆದಿದ್ದಾರೆ. ಏಕದಿನ, ಟ್ವೆಂಟಿ-20 ಅಷ್ಟೇ ಅಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲೂ ರೋಹಿತ್ ಶರ್ಮಾ ದಾಖಲೆಗಳನ್ನು ಧೂಳೀಪಟಗೈದಿದ್ದಾರೆ.
Vijaya Karnataka Web rohit sharma memorable year in 2019 ten hundred and 2442 runs
10 ಶತಕ, 2442 ರನ್; 2019ನೇ ಸಾಲಿಗೆ ಹಿಟ್‌ಮ್ಯಾನ್ 'ಬಾಸ್'


ಏಕದಿನಕ್ಕೆ ರೋ'ಹಿಟ್' ಬಾಸ್

ತಮ್ಮ ಸಹ ಆಟಗಾರ ಹಾಗೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (1377) ಅವರನ್ನು ಹಿಂದಿಕ್ಕಿರುವ ರೋಹಿತ್ ಶರ್ಮಾ 2019ನೇ ಸಾಲಿನಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ 1490 ರನ್ ಕಲೆ ಹಾಕಿದ ದಾಖಲೆಗೆ ಭಾಜನವಾಗಿದ್ದಾರೆ. ವಿಂಡೀಸ್ ವಿರುದ್ಧ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ 159 ರನ್ ಚಚ್ಚಿದ್ದರು. ಈ ಮೂಲಕ ಸತತ ಆರನೇ ಸಾಲಿನಲ್ಲೂ (2013ರಿಂದ 2019ರ ವರೆಗೆ) ವೈಯಕ್ತಿಕ ಗರಿಷ್ಠ ಮೊತ್ತ ದಾಖಲಿಸಿದ ಹಿರಿಮೆಗೆ ಭಾಜನವಾಗಿದ್ದರು.

ಸ್ಮರಣೀಯ ದಾಖಲೆ ಬರೆದ ವಿರಾಟ್ ಕೊಹ್ಲಿ

ವಿರಾಟ್ 2455, ರೋಹಿತ್ 2442

2019ರಲ್ಲಿ ಟೆಸ್ಟ್, ಏಕದಿನ ಹಾಗೂ ಟ್ವೆಂಟಿ-20 ಸೇರಿದಂತೆ ಎಲ್ಲ ಪ್ರಕಾರದ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ವಿರಾಟ್ ಕೊಹ್ಲಿ ಬಳಿಕ ರೋಹಿತ್ ಶರ್ಮಾ ದ್ವಿತೀಯ ಸ್ಥಾನ ಆಲಂಕರಿಸಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅನುಕ್ರಮವಾಗಿ 2455 ಹಾಗೂ 2442 ರನ್ ಕಲೆ ಹಾಕಿದ್ದಾರೆ.

Twitter-@ImRo45 #RohitSharma https://t.co/88KDpI7l6v

ವರ್ಷವೊಂದರಲ್ಲೇ 10 ಶತಕ

2019ನೇ ಸಾಲಿನಲ್ಲಿ ರೋಹಿತ್ ಶರ್ಮಾ ಒಟ್ಟು 10 ಶತಕಗಳನ್ನು ಬಾರಿಸಿದ್ದಾರೆ. ಇದರಲ್ಲಿ ಏಕದಿನದಲ್ಲಿ ಏಳು ಶತಕ ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಸೇರಿದಂತೆ ಮೂರು ಶತಕಗಳು ಸೇರಿವೆ. ಕಳೆದ ಏಕದಿನ ವಿಶ್ವಕಪ್‌ನಲ್ಲಂತೂ ರೋಹಿತ್ ದಾಖಲೆಯ ಐದು ಶತಕಗಳನ್ನು ಸಿಡಿಸಿದ್ದರು. ಏಕದಿನ ವಿಶ್ವಕಪ್‌ನಲ್ಲಿ ಆಡಿದ ಒಂಬತ್ತು ಪಂದ್ಯಗಳಲ್ಲೇ 81ರ ಸರಾಸರಿಯಲ್ಲಿ ರೋಹಿತ್ 648 ರನ್ ಕಲೆ ಹಾಕಿದ್ದರು.

22 ವರ್ಷಗಳ ಹಿಂದಿನ ದಾಖಲೆ ಮುರಿದ ರೋಹಿತ್

2019ರಲ್ಲಿ ರೋಹಿತ್ ಶರ್ಮಾ ಅಂಕಿಅಂಶ:

ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಆರಂಭಿಕನಾಗಿ ಚೊಚ್ಚಲ ಪಂದ್ಯದ ಎರಡೂ ಇನ್ನಿಂಗ್ಸ್‌ನಲ್ಲೂ ಶತಕ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಗೆ ಅರ್ಹವಾಗಿದ್ದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ಗೂ ಸೈ ಎನಿಸಿದ್ದರು. 2019ನೇ ಸಾಲಿನಲ್ಲೇ 400 ಸಿಕ್ಸರ್ ದಾಖಲೆಯನ್ನು ರೋಹಿತ್ ಶರ್ಮಾ ಬರೆದಿದ್ದಾರೆ.

2019ರಲ್ಲಿ ರೋಹಿತ್ ಶರ್ಮಾ ಅಂಕಿಅಂಶ:

ಏಕದಿನ: ಪಂದ್ಯ: 28, ರನ್: 1490, ಶತಕ: 7, ಗರಿಷ್ಠ: 159, ಸರಾಸರಿ: 57.86

ಟ್ವೆಂಟಿ-20: ಪಂದ್ಯ: 14, ರನ್: 396, ಗರಿಷ್ಠ: 85, ಸರಾಸರಿ: 28.29

ಟೆಸ್ಟ್: ಪಂದ್ಯ: 5, ರನ್: 556, ಶತಕ: 3, ಗರಿಷ್ಠ: 212, ಸರಾಸರಿ: 92.67

Twitter-@ImRo45 Rohit Sharma records highest individual sc...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌