ಆ್ಯಪ್ನಗರ

ಪ್ಲೇ ಆಫ್‌ಗೆ ರಾಯಲ್‌ ಚಾಲೆಂಜರ್ಸ್‌

ಯಜುವೇಂದ್ರ ಚಹಲ್‌(32ಕ್ಕೆ 3) ಮತ್ತು ಕ್ರಿಸ್‌ ಗೇಲ್‌ (11ಕ್ಕೆ 2) ಅವರ ಸ್ಪಿನ್‌ ಮೋಡಿಯ ಜತೆಗೆ ನಾಯಕ ವಿರಾಟ್‌ ಕೊಹ್ಲಿ (ಅಜೇಯ 54) ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ರಾಯಲ್‌ ಚಾಲೆಂಜಸ್‌ ಬೆಂಗಳೂರು ತಂಡ 6 ವಿಕೆಟ್‌ಗಳಿಂದ ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡವನ್ನು ಬಗ್ಗು ಬಡಿದು ಐಪಿಎಲ್‌-9ರ ಅಂಕಪಟ್ಟಿಯಲ್ಲಿ 2ನೇ ಸ್ಥಾನಿಯಾಗಿ ಪ್ಲೇ ಆಫ್‌ ಪ್ರವೇಶಿಸಿದೆ.

ಏಜೆನ್ಸೀಸ್ 23 May 2016, 10:58 am
ವಿರಾಟ್‌ ಕೊಹ್ಲಿ ಬಳಗಕ್ಕೆ 6ವಿಕೆಟ್‌ ಜಯ | ಕ್ವಾಲಿಫೈಯರ್‌ನಲ್ಲಿ ಆರ್‌ಸಿಬಿ ಲಯನ್ಸ್‌ ಸವಾಲು
Vijaya Karnataka Web royal challengers play off
ಪ್ಲೇ ಆಫ್‌ಗೆ ರಾಯಲ್‌ ಚಾಲೆಂಜರ್ಸ್‌


ರಾಯ್ಪುರ: ಯಜುವೇಂದ್ರ ಚಹಲ್‌(32ಕ್ಕೆ 3) ಮತ್ತು ಕ್ರಿಸ್‌ ಗೇಲ್‌ (11ಕ್ಕೆ 2) ಅವರ ಸ್ಪಿನ್‌ ಮೋಡಿಯ ಜತೆಗೆ ನಾಯಕ ವಿರಾಟ್‌ ಕೊಹ್ಲಿ (ಅಜೇಯ 54)
ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ರಾಯಲ್‌ ಚಾಲೆಂಜಸ್‌ ಬೆಂಗಳೂರು ತಂಡ 6 ವಿಕೆಟ್‌ಗಳಿಂದ ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡವನ್ನು ಬಗ್ಗು ಬಡಿದು ಐಪಿಎಲ್‌-9ರ ಅಂಕಪಟ್ಟಿಯಲ್ಲಿ 2ನೇ ಸ್ಥಾನಿಯಾಗಿ ಪ್ಲೇ ಆಫ್‌ ಪ್ರವೇಶಿಸಿದೆ.

ಬೆಂಗಳೂರಿನಲ್ಲಿ ಇದೇ 25ರಂದು ನಡೆಯಲಿರುವ ಕ್ವಾಲಿಫೈಯರ್‌ 1ರಲ್ಲಿ ಫೈನಲ್‌ ಪ್ರವೇಶಕ್ಕಾಗಿ ಆರ್‌ಸಿಬಿ ಮತ್ತು ಗುಜರಾತ್‌ ಲಯನ್ಸ್‌ ತಂಡಗಳು ಮುಖಾಮುಖಿಯಾದರೆ, 26ರಂದು ದಿಲ್ಲಿಯಲ್ಲಿ ನಡೆಯಲಿರುವ ಎಲಿಮಿನೇಟರ್‌ ಪಂದ್ಯದಲ್ಲಿ ಕೋಲ್ತೊತಾ ನೈಟ್‌ ರೈಡರ್ಸ್‌ ಮತ್ತು ಸನ್‌ ರೈಸರ್ಸ್‌ ಹೈದರಾಬಾದ್‌ ಎದುರಾಗಲಿವೆ.

ಇಲ್ಲಿನ ಶಾಹೀದ್‌ ವೀರ್‌ ನಾರಾಯಾಣ್‌ ಸಿಂಗ್‌ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ ಕೇವಲ 138 ರನ್‌ ಗಳಿಸಿತು. ಬಳಿಕ ಇದಕ್ಕುತ್ತರವಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು 18.1 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 139 ರನ್‌ಗಳಿಸಿ ಜಯದ ಸಂಭ್ರಮ ಆಚರಿಸಿತು.

ಕ್ರಿಸ್‌ ಗೇಲ್‌(1), ಎಬಿಡಿ’ ವಿಲಿಯರ್ಸ್‌(6) ಅವರ ಆರಂಭಿಕ ಆಘಾತ ನಡುವೆಯೂ ಮತ್ತೊಮ್ಮೆ ಕಂಗೊಳಿಸಿದ ನಾಯಕ ವಿರಾಟ್‌ ಕೊಹ್ಲಿ 45 ಎಸೆತಗಳಲ್ಲಿ 6 ಬೌಂಡರಿ 54 ರನ್‌ ಗಳಿಸಿ ತಂಡವನ್ನು ಜಯದತ್ತ ಕೊಂಡೊಯ್ದರು. ಇವರಿಗೆ ಸಾಥ್‌ ನೀಡಿದ ವಿಕೆಟ್‌ ಕೀಪರ್‌ ಕೆ.ಎಲ್‌. ರಾಹುಲ್‌(38) ರನ್‌ ಬಾರಿಸಿ ತಂಡಕ್ಕೆ ನೆರವಾದರು.

ಇದಕ್ಕೂ ಮುನ್ನ ಪ್ಲೇ ಆಫ್‌ ಹಂತ ತಲುಪಲು ಗೆಲ್ಲಲೇಬೇಕಾದ ಒತ್ತಡದಲ್ಲಿ ಕಣಕ್ಕಿಳಿದ ಡೆಲ್ಲಿ ಡೇರ್‌ ಡೇವಿಲ್ಸ್‌ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಆರಂಭಿಕ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌(1) ಮಧ್ಯಮ ವೇಗಿ ಶ್ರೀನಾಥ್‌ ಅರವಿಂದ್‌ಗೆ ವಿಕೆಟ್‌ ನೀಡಿ ನೀರಾಸೆ ಮೂಡಿಸಿದರು. ನಂತರ ಬಂದ ಕರುಣ್‌ ನಾಯರ್‌(10) ತಂಡವನ್ನು ಆಧರಿಸುವ ಮೊದಲೇ ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ಗೆ ವಿಕೆಟ್‌ ಒಪ್ಪಿಸಿ ಹೊರ ನಡೆದರು. ಒಂದೆಡೇ ವಿಕೆಟ್‌ ಉರಳುತ್ತಿದ್ದರೂ ಇನ್ನೊಂದೆಡೆ ಆರಂಭಿಕ ಬ್ಯಾಟ್ಸ್‌ಮನ್‌ ಕ್ವಿಂಟನ್‌ ಡಿ ಕಾಕ್‌ ಸಮಯೋಚಿತ ಬ್ಯಾಟಿಂಗ್‌ ನಡೆಸಿ ತಂಡವನ್ನು ಆಧರಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಯಾವೊಬ್ಬ ಬ್ಯಾಟ್ಸ್‌ಮನ್‌ ಸಾಥ್‌ ನೀಡಲಿಲ್ಲ. ಏಕಾಂಗಿ ಹೋರಾಟ ನಡೆಸಿದ ಕ್ವಿಂಟನ್‌ ಡಿ ಕಾಕ್‌ 52 ಎಸೆತಗಳಲ್ಲಿ 5 ಬೌಂಡರಿ, ಏಕೈಕ ಸಿಕ್ಸರ್‌ ಸಹಿತ 60 ಗಳಿಸಿದರು. ಇವರನ್ನು ಹೊರತುಪಡಿಸಿದರೆ ಕೆಳ ಕ್ರಮಾಂಕದಲ್ಲಿ ಕ್ರಿಸ್‌ ಮಾರಿಸ್‌ 18 ಎಸೆತಗಳಲ್ಲಿ 3 ಬೌಂಡರಿ ಸೇರಿ 27 ರನ್‌ ಗಳಿಸಿ ಔಟಾಗದೆ ಉಳಿದರು.

ಮಿಂಚಿದ ಚಹಲ್‌

ಶಿಸ್ತು ಬದ್ಧ ಬೌಲಿಂಗ್‌ ದಾಳಿಯೊಂದಿಗೆ ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿದ ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ ಆರ್‌ಸಿಬಿಯ ಫ್ಲೇ ಆಫ್‌ ಹಾದಿಗೆ ನಿರೆರೆದರು. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಡಿ ಕಾಕ್‌, ಕರುಣ್‌ ನಾಯರ್‌ ಮತ್ತು ಸಂಜು ಸ್ಯಾಮ್ಸನ್‌ ಅವರ ವಿಕೆಟ್‌ ಉರುಳಿಸುವ ಮೂಲಕ ಕೊಹ್ಲಿ ಪಡೆಗೆ ಮತ್ತಷ್ಟು ಬಲ ತುಂಬಿದರು. ಇವರಿಗೆ ಸಾಥ್‌ ನೀಡಿದ ಕ್ರಿಸ್‌ಗೇಲ್‌ 2 ವಿಕೆಟ್‌ ಪಡೆದು ಮಿಂಚಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌