ಆ್ಯಪ್ನಗರ

ಕ್ರಿಕೆಟ್‌ ಅಭಿಮಾನಿಗಳಿಗೊಂದು ಸಿಹಿ ಸುದ್ದಿ, ಟಿ20 ಕ್ರಿಕೆಟ್‌ಗೆ ಮರಳಲಿದ್ದಾರೆ ತೆಂಡೂಲ್ಕರ್‌, ಲಾರಾ!

ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಾದ ಸಚಿನ್‌ ತೆಂಡೂಲ್ಕರ್‌ ಮತ್ತು ವೆಸ್ಟ್‌ ಇಂಡೀಸ್‌ನ ಬ್ರಿಯಾನ್‌ ಲಾರಾ ಮತ್ತೆ ಬ್ಯಾಟ್‌ ಹಿಡಿದು ರನ್‌ ಸುರಿಮಳೆಗೈಯಲು ಸಜ್ಜಾಗುತ್ತಿದ್ದಾರೆ. ಅಷ್ಟೇ ಅಲ್ಲದೆ ಜಗತ್ತಿನ 5 ಕ್ರಿಕೆಟ್‌ ರಾಷ್ಟ್ರಗಳ ಸ್ಟಾರ್‌ ನಿವೃತ್ತಿ ಕ್ರಿಕೆಟರ್‌ಗಳು ಕೂಡ ಅಭಿಮಾನಿಗಳನ್ನು ರಂಜಿಸಲು ಸಜ್ಜಾಗುತ್ತಿದ್ದಾರೆ.

Vijaya Karnataka Web 15 Oct 2019, 7:21 pm
ಮುಂಬೈ: ಸಚಿನ್‌ ತೆಂಡೂಲ್ಕರ್‌ ಮತ್ತು ಬ್ರಿಯಾನ್‌ ಲಾರಾ ಅವರ ಬ್ಯಾಟಿಂಗ್‌ ವೈಭವಕ್ಕೆ ಮನ ಸೋಲದವರಿಲ್ಲ. ಜಾಗತಿಕ ಕ್ರಿಕೆಟ್‌ನ ದೈತ್ಯ ತಾರೆಗಳ ನಿವೃತ್ತಿ ನಂತರ ಅವರ ಆಟವನ್ನು ಮರಳಿ ವೀಕ್ಷಿಸಲಾಗದು ಎಂಬ ಕೊರಗು ಕ್ರಿಕೆಟ್‌ ಅಭಿಮಾನಿಗಳಲ್ಲಿ ಈಗಲೂ ಇದೆ.
Vijaya Karnataka Web sachin tendulkar and brian lara 2019


ತಮ್ಮ ಆರಾದ್ಯ ದೈವರ ಆಟವನ್ನು ಮಿಸ್‌ ಮಾಡಿಕೊಳ್ಳುತ್ತಿರುವ ಕ್ರಿಕೆಟ್‌ ಪ್ರಿಯರಿಗೆ ಇದೀಗ ಸಹಿ ಸುದ್ದಿ ಲಭ್ಯವಾಗಿದ್ದು, ಸಚಿನ್‌ ತೆಂಡೂಲ್ಕರ್‌ ಮತ್ತು ಬ್ರಿಯಾನ್‌ ಲಾರಾ ಸೇರಿದಂತೆ 5 ರಾಷ್ಟ್ರಗಳ ನಿವೃತ್ತ ಕ್ರಿಕೆಟ್‌ ತಾರೆಗಳು ಟಿ20 ಕ್ರಿಕೆಟ್‌ ಅಖಾಡದಲ್ಲಿ ಮರಳಿ ಪೈಪೋಟಿ ನಡೆಸಲು ಸಜ್ಜಾಗುತ್ತಿದ್ದಾರೆ. ಮುಂದಿನ ವರ್ಷ ಭಾರತದಲ್ಲಿ ಆರಂಭಗೊಂಡು ಪ್ರತಿವರ್ಷ ನಡೆಯಲಿರುವ 'ರೋಡ್‌ ಸೇಫ್ಟಿ ವರ್ಲ್ಡ್‌ ಸೀರೀಸ್‌' ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ನಿವೃತ್ತ ಕ್ರಿಕೆಟಿಗರು ಅಭಿಮಾನಿಗಳನ್ನು ರಂಜಿಸಲಿದ್ದಾರೆ.

ನೀರು ನಿಂತ ಪಿಚ್‌ನಲ್ಲೇ ಸಚಿನ್‌ ಬ್ಯಾಟಿಂಗ್‌ ಅಭ್ಯಾಸ! ವೈರಲ್‌ ವಿಡಿಯೊ ಇಲ್ಲಿದೆ

ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಹಾಗೂ ವೆಸ್ಟ್‌ ಇಂಡೀಸ್‌ನ ನಿವೃತ್ತ ಕ್ರಿಕೆಟಿಗರು ಈ ವಿಶೇಷ ಟೂರ್ನಿಯಲ್ಲಿ ಸ್ಪರ್ಧೆಗಿಳಿಯಲಿದ್ದಾರೆ. ತೆಂಡೂಲ್ಕರ್‌ ಮತ್ತು ಬ್ರಿಯಾನ್‌ ಲಾರಾ ಅವರನ್ನು ಹೊರತು ಪಡಿಸಿ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹ್ವಾಗ್‌, ಲಂಕಾದ ಸ್ಟಾರ್‌ ಆಲ್‌ರೌಂಡರ್‌ ತಿಲಕರತ್ನೇ ದಿಲ್ಷಾನ್‌ ಹಾಗೂ ದಕ್ಷಿಣ ಆಫ್ರಿಕಾದ ಜಾಂಟಿ ರೋಡ್ಸ್‌ ಕೂಡ ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ವರ್ಷ ಫೆ.2ರಿಂದ 16ರವರೆಗೆ ಟೂರ್ನಿ ಭಾರತದಲ್ಲಿ ನಡೆಯಲಿದೆ.

ಹಳಿ ತಪ್ಪಿರೋ ಮುಂಬೈ ಕ್ರಿಕೆಟ್‌ ಸುಧಾರಣೆಗೆ ತೆಂಡೂಲ್ಕರ್‌ ಮಾಸ್ಟರ್‌ ಪ್ಲಾನ್‌!

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌(34 ಸಾವಿರಕ್ಕೂ ಅಧಿಕ)ಗಳನ್ನು ಗಳಿಸಿದ ವಿಶ್ವ ದಾಖಲೆ ಹೊಂದಿರುವ 46 ವರ್ಷದ ಕ್ರಿಕೆಟರ್‌ ಸಚಿನ್‌ ತೆಂಡೂಲ್ಕರ್‌, ತಮ್ಮ 24 ವರ್ಷಗಳ ಸುದೀರ್ಘಾವಧಿಯ ವೃತ್ತಿಬದುಕಿನಲ್ಲಿ ಒಟ್ಟಾರೆ 100 ಶತಕಗಳನ್ನು ಬಾರಿಸಿದ್ದಾರೆ. 2013ರಲ್ಲಿ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಸಚಿನ್‌, ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲೂ ಬ್ಯಾಟ್‌ ಬೀಸಿದ್ದಾರೆ.

125 ಎಸೆತಗಳಲ್ಲೇ ದ್ವಿಶತಕ ಸಿಡಿಸಿ ಸಚಿನ್, ಸೆಹ್ವಾಗ್ ಸಾಲಿಗೆ ಸೇರಿದ ಸಂಜು ಸ್ಯಾಮ್ಸನ್

ಸಚಿನ್‌ ತೆಂಡೂಲ್ಕರ್‌ 2008ರಲ್ಲಿ ಬ್ರಿಯಾನ್‌ ಲಾರಾ (11,963) ಅವರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಕೆಯ ವಿಶ್ವ ದಾಖಲೆಯನ್ನು ಮುರಿದಿದ್ದರು. ಲಾರಾ 2007ರ ಐಸಿಸಿ ಕ್ರಿಕೆಟ್‌ ವಿಶ್ವಕಪ್‌ ಬಳಿಕ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಲಾರಾ ನಿವೃತ್ತಿ ಘೋಷಿಸಿದ್ದರು. ಆದರೆ, ಟೆಸ್ಟ್‌ ಕ್ರಿಕೆಟ್‌ನ ಇನಿಂಗ್ಸ್‌ ಒಂದರಲ್ಲಿ ಗರಿಷ್ಠ ರನ್‌ ಗಳಿಸಿದ ವಿಶ್ವ ದಾಖಲೆ (400*) ಈಗಲೂ ಲಾರಾ ಹೆಸರಲ್ಲಿದೆ. 2004ರಲ್ಲಿ ಇಂಗ್ಲೆಂಡ್‌ ವಿರುದ್ಧ ಆಂಟಿಗಾದಲ್ಲಿ ನಡೆದ ಟೆಸ್ಟ್‌ನಲ್ಲಿ ಈ ದಾಖಲೆ ಬರೆದಿದ್ದರು.



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌