ಆ್ಯಪ್ನಗರ

ಕಾಮಿಕ್ ಹೀರೊ ಆಗಲಿರುವ ಸಚಿನ್

ಬ್ಯಾಟ್‌ಮನ್, ಸೂಪರ್ ಮ್ಯಾನ್ ಹೀಗೆ ಹಲವಾರು ಕಥಾಪಾತ್ರಗಳು ಪಾಶ್ಚತ್ಯ ರಾಷ್ಟ್ರಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ. ಭಾರತದಲ್ಲೂ ಕಾಮಿಕ್ ಪಾತ್ರಗಳಿಗೆ ಹೆಚ್ಚಿನ ಅಭಿರುಚಿಯನ್ನುಂಟು ಮಾಡಿದೆ.

ಟೈಮ್ಸ್ ಆಫ್ ಇಂಡಿಯಾ 18 Oct 2017, 3:17 pm
ಹೊಸದಿಲ್ಲಿ: ಬ್ಯಾಟ್‌ಮನ್, ಸೂಪರ್ ಮ್ಯಾನ್ ಹೀಗೆ ಹಲವಾರು ಕಥಾಪಾತ್ರಗಳು ಪಾಶ್ಚತ್ಯ ರಾಷ್ಟ್ರಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ. ಭಾರತದಲ್ಲೂ ಕಾಮಿಕ್ ಪಾತ್ರಗಳಿಗೆ ಹೆಚ್ಚಿನ ಅಭಿರುಚಿಯನ್ನುಂಟು ಮಾಡಿದೆ.
Vijaya Karnataka Web sachin tendulkar coming soon as comic hero
ಕಾಮಿಕ್ ಹೀರೊ ಆಗಲಿರುವ ಸಚಿನ್


ಇದೀಗ ಕ್ರಿಕೆಟ್‌ನ ಜೀವಂತ ದಿಗ್ಗಜ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಕಾಮಿಕ್ ಹೀರೊ ಆಗಲಿದ್ದಾರೆ.

ಹ್ಯಾಚೆಟ್ ಇಂಡಿಯಾ ಪ್ರಕಾಶಕರು ಇದನ್ನು ಖಚಿತಪಡಿಸಿದ್ದು, ಪ್ರಮುಖವಾಗಿಯೂ ಮಕ್ಕಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಸಚಿನ್ ಅವರನ್ನು ಕಾಮಿಕ್ ರೂಪದಲ್ಲಿ ಚಿತ್ರಿಸಲಾಗುವುದು.

ಸಚಿನ್ ಆತ್ಮಕಥನ 'ಪ್ಲೇಯಿಂಗ್ ಇಟ್ ಮೈ ವೇ' ಆಧಾರವಾಗಿಟ್ಟುಕೊಂಡು 25 ಪುಟುಗಳು ಕಾಮಿಕ್ ರೂಪದಲ್ಲಿ ಮುದ್ರಿತವಾಗಲಿದೆ. ಇಲ್ಲಿ ಸಚಿನ್ ಕ್ರೀಡಾ ಜೀವನದ ರೋಚಕತೆಯನ್ನು ಮಕ್ಕಳಿಗೂ ತಲುಪಿಸಲಾಗುವುದು.

1998ರಲ್ಲಿ ಶಾರ್ಜಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಸಚಿನ್ ಅಮೋಘ ಬ್ಯಾಟಿಂಗ್ ಇದರ ಭಾಗವಾಗಲಿದೆ. ಸಚಿನ್ ಸತತ ಎರಡು ಶತಕಗಳನ್ನು ಸಿಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌