ಆ್ಯಪ್ನಗರ

ಪರಿಸರ ಸ್ನೇಹಿ ಗಣೇಶ ವಿಸರ್ಜನೆಗೆ ಸಚಿನ್ ಅಮೂಲ್ಯ ಸಲಹೆ

ಭಾರತೀಯ ಕ್ರಿಕೆಟ್ ತಂಡದ ಮಹಾನ್ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪ್ರತಿ ವರ್ಷದಂತೆ ಈ ಬಾರಿಯೂ ತಮ್ಮ ಕುಟುಂಬದ ಜತೆ ವಿನಾಯಕ ಚತುರ್ಥಿ ಹಬ್ಬವನ್ನು ಆಚರಿಸಿದ್ದಾರೆ.

Vijaya Karnataka Web 16 Sep 2018, 7:14 pm
ಮುಂಬಯಿ: ಭಾರತೀಯ ಕ್ರಿಕೆಟ್ ತಂಡದ ಮಹಾನ್ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪ್ರತಿ ವರ್ಷದಂತೆ ಈ ಬಾರಿಯೂ ತಮ್ಮ ಕುಟುಂಬದ ಜತೆ ವಿನಾಯಕ ಚತುರ್ಥಿ ಹಬ್ಬವನ್ನು ಆಚರಿಸಿದ್ದಾರೆ.
Vijaya Karnataka Web sachin-tendulkar-08


ಆದರೆ ಇತರೆಲ್ಲ ವರ್ಷಗಳಿಗಿಂತಲೂ ವಿಭಿನ್ನವಾಗಿ ಈ ಬಾರಿ ತಮ್ಮ ಮನೆಯಲ್ಲೇ ಗಣೇಶ ವಿಸರ್ಜನೆ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಈ ಬಗ್ಗೆ ಹಿಂದೂ ಬಾಂಧವರಿಗೆ ಟ್ವಿಟರ್‌ನಲ್ಲಿ ಪರಿಸರ ಸ್ನೇಹಿ ಗಣೇಶ ವಿಸರ್ಜನೆ ಮಾಡುವ ಬಗ್ಗೆ ಅಮೂಲ್ಯ ಸಲಹೆಯನ್ನು ನೀಡಿದ್ದಾರೆ.

"ನಾವು ಏನೆಲ್ಲ ಸಮುದ್ರದಲ್ಲಿ ವಿಸರ್ಜಿಸುತ್ತೇವೆಯೋ ಅವೆಲ್ಲವೂ ಮತ್ತೆ ಮರಳಿ ಭೂಮಿಯನ್ನು ತಲುಪುತ್ತದೆ. ಇದು ನನಗೆ ಇಷ್ಟವಿರಲಿಲ್ಲ. ಹಾಗಾಗಿ ಈ ಬಾರಿ ಮನೆಯಲ್ಲೇ ಗಣೇಶ ವಿಸರ್ಜನೆ ಮಾಡಲು ನಿರ್ಧರಿಸಿದೆ. ಇದಕ್ಕೆಗಾಗಿಯೇ ತಾಯಿ ಹಾಗೂ ಪುರೋಹಿತರ ಸಲಹೆಯನ್ನು ಪಡೆದುಕೊಂಡೆ. ಅವರೆಲ್ಲವೂ ಅಭಿಮತವೂ ಇದಾಗಿತ್ತು. ನಮ್ಮ ಪ್ರಕೃತಿಯನ್ನು ನಾವೇ ರಕ್ಷಿಸಬೇಕು. ಭಾರತ ಸ್ವಚ್ಛತೆಯಿಂದರಬೇಕು. ನಿಮಗೆಲ್ಲರಿಗೂ ಇದೇ ಸಂದೇಶ ನೀಡಲು ಬಯಸುತ್ತೇನೆ. ಸಾಧ್ಯವಾದರೆ ಮನೆಯಲ್ಲೇ ಗಣೇಶ ವಿಸರ್ಜನೆಯನ್ನು ಮಾಡಿ" ಎಂದು ಮನವಿ ಮಾಡಿದರು.

ಸಚಿನ್ ತೆಂಡೂಲ್ಕರ್ ತಮ್ಮ ಮನೆಯಲ್ಲೇ ಬಕೆಟ್‌ನಲ್ಲಿ ನೀರು ತುಂಬಿಸಿ ಗಣೇಶ ವಿಸರ್ಜನೆಯನ್ನು ಮಾಡಿದ್ದರು. ಸಚಿನ್ ವಹಿಸಿರುವ ಖಾಳಜಿಗೆ ಟ್ವಿಟರ್‌ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌