ಆ್ಯಪ್ನಗರ

ಅರ್ಜುನ್, ಸಾರಾ ನಕಲಿ ಖಾತೆಗಳ ಹಾವಳಿ; ಸಿಡಿದೆದ್ದ ಸಚಿನ್

ಮಕ್ಕಳ ಹೆಸರಲ್ಲಿ ನಕಲಿ ಸಾಮಾಜಿಕ ಖಾತೆ ಸೃಷ್ಟಿಯಾಗುತ್ತಿರುವ ಬಗ್ಗೆ ಭಾರತದ ಮಾಜಿ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸಿಡಿದೆದ್ದಿದ್ದಾರೆ. ಅಲ್ಲದೆ ಅಗತ್ಯ ಕ್ರಮ ಕೈಗೊಳ್ಳುವಂತೆ ಟ್ವಿಟರ್ ಇಂಡಿಯಾದಲ್ಲಿ ವಿನಂತಿಸಿದ್ದಾರೆ.

Vijaya Karnataka Web 28 Nov 2019, 10:43 am
ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಐಕಾನ್ 'ಕ್ರಿಕೆಟ್ ದೇವರು' ಖ್ಯಾತಿಯ ಸಚಿನ್ ತೆಂಡೂಲ್ಕರ್, ಮಗದೊಮ್ಮೆ ತಮ್ಮ ಮಕ್ಕಳ ಹೆಸರಲ್ಲಿರುವ ಸೃಷ್ಟಿಯಾಗಿರುವ ನಕಲಿ ಸಾಮಾಜಿಕ ಖಾತೆಗಳ ವಿರುದ್ಧ ಸಿಡಿದೆದ್ದಿದ್ದಾರೆ.
Vijaya Karnataka Web ಸಚಿನ್ ತೆಂಡೂಲ್ಕರ್


ತಮ್ಮ ಮಕ್ಕಳಾದ ಅರ್ಜುನ್ ಹಾಗೂ ಸಾರಾ ಯಾವುದೇ ಟ್ವಿಟರ್ ಖಾತೆಗಳನ್ನು ಹೊಂದಿಲ್ಲ. ಆದರೂ ಅವರ ಹೆಸರಿನಲ್ಲಿ ಟ್ವಿಟರ್ ಖಾತೆ ಸೃಷ್ಟಿ ಮಾಡಿ ದುರದ್ದೇಶಪೂರಿತ ಟ್ವಿಟ್‌ಗಳನ್ನು ಹರಡುತ್ತಿದ್ದಾರೆ. ಇದರ ವಿರುದ್ಧ ಟ್ವಿಟರ್ ಇಂಡಿಯಾ ಕ್ರಮ ಕೈಗೊಳ್ಳುವಂತೆ ವಿನಂತಿ ಮಾಡಿದ್ದಾರೆ.

ತಕ್ಷಣ ಜಾಗೃತವಾಗಿರುವ ಟ್ವಿಟರ್ ಇಂಡಿಯಾ, ಜೂನಿಯರ್ ತೆಂಡೂಲ್ಕರ್ ಹೆಸರಲ್ಲಿದ್ದ ಟ್ವಿಟರ್ ಖಾತೆಯನ್ನು ಡಿಲೀಟ್ ಮಾಡಿದೆ.

ಬಹಳ ಹಿಂದಿನಿಂದಲೇ ಸಚಿನ್ ತೆಂಡೂಲ್ಕರ್‌ಗೆ ಈ ಸಮಸ್ಯೆ ಕಾಡುತ್ತಿದೆ. ಮಕ್ಕಳ ಹೆಸರಲ್ಲಿ ಉಂಟಾಗುತ್ತಿರುವ ನಕಲಿ ಸಾಮಾಜಿಕ ಖಾತೆಗಳ ಬಗ್ಗೆ ಬಹಿರಂಗವಾಗಿಯೇ ಹೇಳಿಕೊಂಡಿದ್ದರು.

ಇದೀಗ ತಮ್ಮ ಮಕ್ಕಳು ಟ್ವಿಟರ್ ಅಥವಾ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತ ಖಾತೆಗಳನ್ನು ಹೊಂದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಸಚಿನ್ ಹೇಳಿಕೆಗೆ ಟ್ವಿಟರ್‌ನಿಂದ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.

ಈ ಮಧ್ಯೆ ನೇಪಾಳಕ್ಕೆ ಭೇಟಿ ಕೊಟ್ಟಿರುವ ಸಚಿನ್ ತೆಂಡೂಲ್ಕರ್, ಮಕ್ಕಳೊಂದಿಗೆ ಅಮೂಲ್ಯ ಸಮಯವನ್ನು ಕಳೆದಿದ್ದಾರೆ. ಈ ಬಗ್ಗೆ ಚಿತ್ರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಅರ್ಜುನ್ ತೆಂಡೂಲ್ಕರ್ ಹೆಸರಲ್ಲಿ ಸೃಷ್ಟಿಯಾಗಿರುವ ನಕಲಿ ಖಾತೆ:

ಜೂ.ತೆಂಡೂಲ್ಕರ್ ಖಾತೆ ಡಿಲೀಟ್ ಮಾಡಿದ ಟ್ವಿಟರ್:

ನೇಪಾಳಕ್ಕೆ ಭೇಟಿಕೊಟ್ಟಿರುವ ಸಚಿನ್:

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌