ಆ್ಯಪ್ನಗರ

ಸಚಿನ್‌ , ಧೋನಿ, ಕೊಹ್ಲಿ ಅಲ್ಲವೇ ಅಲ್ಲ: ಇವರೇ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ!

Who is world's richest cricketer: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ ಯಾರು? ಎಂಬ ಪ್ರಶ್ನೆ ನಿಮ್ಮ ಕಿವಿಗೆ ಬಿದ್ದಾಗ ಮೊದಲಿಗೆ ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌, ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್‌ ಕೊಹ್ಲಿ ಹೆಸರುಗಳು ನೆನಪಿಗೆ ಬರುವುದು ಸಹಜ. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗರು ಇವರಲ್ಲಿ ಯಾರೂ ಇಲ್ಲ. ಆದರೆ, ಬರೋಡ ಪರ ಪ್ರಥಮ ದರ್ಜೆ ಕ್ರಿಕೆಟ್‌ ಆಡಿರುವ ಸಮರ್ಜಿತ್‌ ಸಿನ್ಹ್‌ ಗಾಯಕ್ವಾಡ್‌ ಇಡೀ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗರಾಗಿದ್ದಾರೆ. ಆದರೆ, ಇವರು ಒಮ್ಮೆಯೂ ಭಾರತ ತಂಡವನ್ನು ಪ್ರತಿನಿಧಿಸಿಲ್ಲ.

Authored byರಮೇಶ ಕೋಟೆ | Vijaya Karnataka Web 7 Jul 2023, 9:36 pm

ಹೈಲೈಟ್ಸ್‌:

  • ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ ಬರೋಡ ರಣಜಿ ಮಾಜಿ ಆಟಗಾರ ಸಮರ್ಜಿತ್ ಸಿನ್ಹ್‌ ಗಾಯಕ್ವಾಡ್‌.
  • ಸಚಿನ್ ತೆಂಡೂಲ್ಕರ್‌, ವಿರಾಟ್‌ ಕೊಹ್ಲಿ ಮತ್ತು ಎಂಎಸ್‌ ಧೋನಿಗಿಂತಲೂ ಸಮರ್ಜಿತ್‌ ಅಗರ್ಭ ಶ್ರೀಮಂತ.
  • ರಾಜ ಸಮರ್ಜಿತ್‌ ಸಿನ್ಹ್ ಗಾಯಕ್ವಾಡ್‌ ಅವರು 20 ಸಾವಿರ ಕೋಟಿ ರೂ. ಗಳ ಒಡೆಯರಾಗಿದ್ದಾರೆ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Samarjitsinh Gaekwad
ಸಮರ್ಜಿತ್‌ ಸಿನ್ಹ್‌ ಗಾಯಕ್ವಾಡ್‌ (ಚಿತ್ರ: ಟ್ವಿಟರ್)
ಹೊಸದಿಲ್ಲಿ: ಭಾರತ ತಂಡದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಆಸ್ತಿ ಇತ್ತೀಚೆಗಷ್ಟೇ ಸಾವಿರ ಕೋಟಿ ರೂ. ಮೌಲ್ಯ ದಾಟಿರುವುದು ಗೊತ್ತೇ ಇದೆ. ಪ್ರಸ್ತುತ ಸಕ್ರಿಯ ಕ್ರಿಕೆಟಿಗರ ಪೈಕಿ ಕಿಂಗ್‌ ಖ್ಯಾತಿಯ ವಿರಾಟ್‌ ಕೊಹ್ಲಿ ಅತ್ಯಂತ ಶ್ರೀಮಂತ ಆಟಗಾರ ಎನ್ನುವುದರಲ್ಲಿ ಎರಡು ಮಾತಿಲ್ಲ. 'ಎ' ಪ್ಲಸ್ ಗ್ರೇಡ್ ಗುತ್ತಿಗೆ ಪಡೆದಿರುವ ವಿರಾಟ್, ಬಿಸಿಸಿಐನಿಂದ ವರ್ಷಕ್ಕೆ 7 ಕೋಟಿ ರೂ. ಪಡೆಯುತ್ತಾರೆ.
ಒಂದು ಟೆಸ್ಟ್ ಪಂದ್ಯ ಆಡಿದರೆ 15 ಲಕ್ಷ ರೂ., ಏಕದಿನ ಪಂದ್ಯ ಆಡಿದರೆ 6 ಲಕ್ಷ ರೂ. ಹಾಗೂ ಟಿ20 ಪಂದ್ಯ ಆಡಿದರೆ 3 ಲಕ್ಷ ರೂ.ಗಳನ್ನು ರನ್‌ ಮಷಿನ್‌ ಖ್ಯಾತಿಯ ವಿರಾಟ್‌ ಕೊಹ್ಲಿ ಪಡೆಯುತ್ತಾರೆ. ಆದರೆ, ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಆಡುವ ಮೂಲಕ ವಿರಾಟ್‌ ಕೊಹ್ಲಿ ಪ್ರತಿ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ 15 ಕೋಟಿ ರೂ. ಸಂಬಳ ಪಡೆಯುತ್ತಿದ್ದಾರೆ. ಇದಲ್ಲದೇ ಜಾಹೀರಾತು ಮತ್ತು ವ್ಯವಹಾರಗಳ ಮೂಲಕ ವಿರಾಟ್‌ ಕೊಹ್ಲಿ ಭಾರೀ ಮೊತ್ತವನ್ನು ಜೇಬಿಗಿಳಿಸಿಕೊಳ್ಳುತ್ತಿದ್ದಾರೆ.

ಕ್ರಿಕೆಟ್‌ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಸಂಪತ್ತು 1250 ಕೋಟಿ ರೂ.ಗಳಾಗಿದ್ದರೆ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಆಸ್ತಿ 1040 ಕೋಟಿ ರೂಗಳಾಗಿವೆ. ಸಚಿನ್ ಮತ್ತು ಧೋನಿ ಇಬ್ಬರೂ ಜಾಹೀರಾತುಗಳ ಮೂಲಕ ಕೋಟಿ ಕೋಟಿ ರೂ. ಗಳನ್ನು ಜೇಬಿಗಿಳಿಸಿಕೊಂಡಿದ್ದಾರೆ. ಈ ಮೂವರು ಆಟಗಾರರ ನಿವ್ವಳ ಮೌಲ್ಯವನ್ನು ನೋಡಿದರೆ, ಇವರೇ ಭಾರತೀಯ ಕ್ರಿಕೆಟ್‌ನ ಶ್ರೀಮಂತ ಆಟಗಾರರು ಎಂದು ಭಾವಿಸುವುದು ನಿಜ. ಆದರೆ ಈ ಮೂವರ ಹೊರತಾಗಿ ಭಾರತೀಯ ಕ್ರಿಕೆಟ್‌ನಲ್ಲಿ ಅತ್ಯಂತ ಶ್ರೀಮಂತ ಕ್ರಿಕೆಟಿಗನಿದ್ದಾನೆಂದರೆ ನಂಬುತ್ತೀರಾ?
ODI World Cup: ಈ ಬಾರಿ ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡವನ್ನು ಹೆಸರಿಸಿದ ಕ್ರಿಸ್‌ ಗೇಲ್‌!
ಹೌದು, ನಂಬಲೇಬೇಕು! ಅವರೇ ಸಮರ್ಜಿತ್ ಸಿಂಗ್ ರಂಜಿತ್ ಸಿನ್ ಗಾಯಕ್ವಾಡ್. ಅವರು 1967ರ ಏಪ್ರಿಲ್ 25 ರಂದು ಜನಿಸಿದ್ದರು. ಅವರು ಪ್ರಥಮ ದರ್ಜೆ ಕ್ರಿಕೆಟಿಗರಾಗಿ ಗುರುತಿಸಲ್ಪಟ್ಟರು. ರಂಜಿತ್ ಸಿನ್ಹ್ ಪ್ರತಾಪ್ ಸಿಂಹ ಗಾಯಕ್ವಾಡ್ ಹಾಗು ಶುಭಾಂಗಿನಿರಾಜೆಯ ಏಕೈಕ ಪುತ್ರ ಸಮರ್ಜಿತ್ ಸಿನ್ಹ್, ಬರೋಡಾ ರಾಜರೂ ಆಗಿದ್ದರು.

ಸಮರ್ಜಿತ್ ಸಿನ್ಹ್ ಓದಿದ್ದು ಡೆಹ್ರಾಡೂನ್‌ನ ಡೂನ್ ಶಾಲೆಯಲ್ಲಿ. 2012ರಲ್ಲಿ ಅವರ ತಂದೆಯ ಮರಣದ ನಂತರ, ಅವರು ಮಹಾರಾಜ ಪಟ್ಟವನ್ನು ಅಲಂಕರಿಸಿದ್ದರು. ಅವರು 20 ಸಾವಿರ ಕೋಟಿ ರೂ. ಸಂಪತ್ತನ್ನು ಪಿತ್ರಾರ್ಜಿತವಾಗಿ ಪಡೆದಿದ್ದಾರೆ. ಸಮರ್ಜಿತ್ ಅವರು ವಿಶ್ವದ ಅತಿದೊಡ್ಡ ಖಾಸಗಿ ನಿವಾಸವಾದ ಲಕ್ಷ್ಮಿ ವಿಲಾಸ್ ಅರಮನೆಯ ಮಾಲೀಕರಾಗಿದ್ದಾರೆ. ಅವರು ಗುಜರಾತ್ ಮತ್ತು ವಾರಣಾಸಿಯಲ್ಲಿ 17 ದೇವಾಲಯಗಳ ಟ್ರಸ್ಟ್‌ಗಳ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಾರೆ.
ವಿರಾಟ್‌ ಕೊಹ್ಲಿ vs ಬಾಬರ್‌ ಆಝಮ್‌, ಬೆಸ್ಟ್‌ ಬ್ಯಾಟರ್‌ ಆಯ್ಕೆ ಮಾಡಿದ ಶೊಯೇಬ್ ಅಖ್ತರ್‌!

6 ಪಂದ್ಯಗಳಲ್ಲಿ ಬರೋಡ ತಂಡವನ್ನು ಪ್ರತಿನಿಧಿಸಿದ್ದರು


ಸಮರ್ಜಿತ್ ಸಿನ್ಹ್ ಗಾಯಕ್ವಾಡ್ ವಂಕನೀರ್ ರಾಜಮನೆತನದ ರಾಧಿಕರಾಜೆಯನ್ನು ವಿವಾಹವಾಗಿದ್ದರೆ. ಅವರು ರಣಜಿ ಟ್ರೋಫಿಯಲ್ಲಿ ಬರೋಡಾವನ್ನು ಪ್ರತಿನಿಧಿಸಿದ್ದರು ಮತ್ತು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಆರು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಆದರೆ, ಒಂದೇ ಒಂದು ಬಾರಿ ಅವರು ಭಾರತ ತಂಡವನ್ನು ಪ್ರತಿನಿಧಿಸಲು ಸಾಧ್ಯವಾಗಿರಲಿಲ್ಲ. ಅಂದ ಹಾಗೆ ಒಮ್ಮೆ ಅವರು ಬರೋಡಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ವಿರಾಟ್ ಕೊಹ್ಲಿಯ ವಿಶ್ವಕಪ್ ಅಭಿಯಾನದ ಬಗ್ಗೆ ಮಹತ್ತರ ಹೇಳಿಕೆ ಕೊಟ್ಟ ಕ್ರಿಸ್ ಗೇಲ್!

20 ಸಾವಿರ ಕೋಟಿ ರೂ. ಪಿತ್ರಾರ್ಜಿತ ಆಸ್ತಿ


ಸಚಿನ್ ತೆಂಡೂಲ್ಕರ್‌, ವಿರಾಟ್‌ ಕೊಹ್ಲಿ, ಎಂಎಸ್‌ ಧೋನಿ, ವೀರೇಂದ್ರ ಸೆಹ್ವಾಗ್‌ ಮುಂತಾದವರು ಕ್ರಿಕೆಟ್ ಆಡುವ ಮೂಲಕ ಹಣವನ್ನು ಗಳಿಸಿದರೆ, ಸಮರ್ಜಿತ್ ಸಿನ್ಹ್‌ ಅವರು ಸಾವಿರಾರು ಕೋಟಿ ಆಸ್ತಿಯನ್ನು ಪಿತ್ರಾರ್ಜಿತವಾಗಿ ಪಡೆದಿದ್ದಾರೆ. ಇದರೊಂದಿಗೆ ಅವರು ನಮ್ಮ ದೇಶದಲ್ಲಿ ಮಾತ್ರವಲ್ಲದೆ ವಿಶ್ವದ ಶ್ರೀಮಂತ ಕ್ರಿಕೆಟಿಗರಾಗಿ ಹೆಸರು ಮಾಡಿದ್ದಾರೆ.
ಲೇಖಕರ ಬಗ್ಗೆ
ರಮೇಶ ಕೋಟೆ
ವಿಜಯ ಕರ್ನಾಟಕ ಡಿಜಿಟಲ್‌ನಲ್ಲಿ 2020ರ ಮಾರ್ಚ್‌ನಿಂದ ಕ್ರೀಡಾ ಪತ್ರಕರ್ತರಾಗಿ ಇವರು ಕೆಲಸ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ವಿಶ್ವವಾಣಿ ದಿನ ಪತ್ರಿಕೆ, ಯುನೈಟೆಡ್‌ ನ್ಯೂಸ್‌ ಆಫ್‌ ಇಂಡಿಯಾ ಸುದ್ದಿ ಸಂಸ್ಥೆ, ಸಂಜೆ ವಾಣಿ ಹಾಗೂ ಈ ಸಂಜೆ ಪತ್ರಿಕೆಗಳಲ್ಲಿ ಕೆಲಸ ಮಾಡಿರುವ ಅನುಭವವನ್ನು ಇವರು ಹೊಂದಿದ್ದಾರೆ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ ಹಾಗೂ ಅಂಕಣಗಳನ್ನು ಬರೆಯುವುದು ಇವರ ಆಸಕ್ತದಾಯಕ ವಿಷಯಗಳು. ಕನ್ನಡ ಸಾಹಿತ್ಯ ಓದುವುದು, ಕ್ರಿಕೆಟ್‌ ಆಡುವುದು, ಟ್ರೆಕ್ಕಿಂಗ್‌, ಬೈಕ್‌ ರೈಡಿಂಗ್‌, ಫೋಟೋಗ್ರಫಿ ಇವು ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌