ಆ್ಯಪ್ನಗರ

ಸಾನಿಯಾ ಬೆಂಬಲಕ್ಕೆ ನಿಂತ ಅಖ್ತರ್‌

ಟೀಮ್‌ ಇಂಡಿಯಾ ವಿರುದ್ಧ ಪಾಕಿಸ್ತಾನ ತಂಡ ಸೋತ ಬಳಿಕ ಪಾಕಿಸ್ತಾನದ ಕ್ರಿಕೆಟ್‌ ಅಭಿಮಾನಿಗಳು ಭಾರತದ ಮಾಜಿ ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ವಿರುದ್ಧ ಟೀಕೆಗಳ ಸುರಿಮಳೆಗೈದಿದ್ದರು. ಇದಕ್ಕೆ ಪಾಕ್‌ ತಂಡದ ಮಾಜಿ ವೇಗಿ ಶೋಯಿಬ್‌ ಅಖ್ತರ್‌ ಖೇದ ವ್ಯಕ್ತಪಡಿಸಿದ್ದು, ಅನ್ಯಾಯವಾಗಿ ಆಟಗಾರನೊಬ್ಬನ ಕುಟುಂಬ ಸದಸ್ಯರನ್ನು ಗುರಿಯಾಗಿಸಲಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Vijaya Karnataka Web 21 Jun 2019, 5:00 am
ಕರಾಚಿ: ಟೀಮ್‌ ಇಂಡಿಯಾ ವಿರುದ್ಧ ಪಾಕಿಸ್ತಾನ ತಂಡ ಸೋತ ಬಳಿಕ ಪಾಕಿಸ್ತಾನದ ಕ್ರಿಕೆಟ್‌ ಅಭಿಮಾನಿಗಳು ಭಾರತದ ಮಾಜಿ ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ವಿರುದ್ಧ ಟೀಕೆಗಳ ಸುರಿಮಳೆಗೈದಿದ್ದರು. ಇದಕ್ಕೆ ಪಾಕ್‌ ತಂಡದ ಮಾಜಿ ವೇಗಿ ಶೋಯಿಬ್‌ ಅಖ್ತರ್‌ ಖೇದ ವ್ಯಕ್ತಪಡಿಸಿದ್ದು, ಅನ್ಯಾಯವಾಗಿ ಆಟಗಾರನೊಬ್ಬನ ಕುಟುಂಬ ಸದಸ್ಯರನ್ನು ಗುರಿಯಾಗಿಸಲಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web SANIA


ಪಾಕ್‌ ತಂಡದ ಶೋಯಿಬ್‌ ಮಲಿಕ್‌ ಪತ್ನಿಯಾಗಿರುವ ಸಾನಿಯಾ, ಭಾರತದ ವಿರುದ್ಧದ ಪಂದ್ಯದ ಮೊದಲ ದಿನ ಮಗುವಿನ ಸಮೇತ 'ಮಧ್ಯರಾತ್ರಿ ಪಾರ್ಟಿ'ಗೆ ಹೋಗಿದ್ದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ 'ಟ್ರೋಲ್‌' ಮಾಡಲಾಗಿತ್ತು. ಅದನ್ನು ಖಂಡಿಸಿರುವ ಅಖ್ತರ್‌ 'ಪತಿ ಜತೆ ಊಟಕ್ಕೆ ಹೋಗುವುದು ಹೇಗೆ ಅಪರಾಧವಾಗುತ್ತದೆ. ಶೋಯಿಬ್‌ ಮಲಿಕ್‌ಗೆ ಚೆನ್ನಾಗಿ ಆಡಬೇಡ ಎಂದು ಅವರು ಹೇಳಿರುತ್ತಾರೆಯೇ? ಇಂಥ ವಿಚಾರದಲ್ಲಿ ಆಟಗಾರರ ಕುಟುಂಬದ ಸದಸ್ಯರನ್ನು ಅನಗತ್ಯವಾಗಿ ಎಳೆದು ತರಬಾರದು,'' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌