ಆ್ಯಪ್ನಗರ

ಒಂಬುಡ್ಸ್‌ಮನ್‌ ನೇಮಕಕ್ಕೆ ಸಿಒಎ ಸುಪ್ರೀಂಗೆ ಮನವಿ

ಮಹಿಳೆಯರ ಕುರಿತಾಗಿ ಅಸಭ್ಯ ಹೇಳಿಕೆ ನೀಡಿ ಅಮಾನತ್ತಿನಲ್ಲಿರುವ ಹಾರ್ದಿಕ್‌ ಪಾಂಡ್ಯ ಮತ್ತು ಕೆ.ಎಲ್‌ ರಾಹುಲ್‌ ಅವರ ವಿರುದ್ಧದ ಶಿಕ್ಷೆಯ ಪ್ರಮಾಣವನ್ನು ಆದಷ್ಟು ಬೇಗ ನಿರ್ಧರಿಸಲು ಒಂಬುಡ್ಸ್‌ಮನ್‌ ನೇಮಕ ಮಾಡಬೇಕಾಗಿ ಬಸಿಸಿಐ ಆಡಳಿತಾತ್ಮಕ ಸಮಿತಿ (ಸಿಒಎ) ಗುರುವಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

PTI 18 Jan 2019, 5:00 am
ಹೊಸದಿಲ್ಲಿ : ಮಹಿಳೆಯರ ಕುರಿತಾಗಿ ಅಸಭ್ಯ ಹೇಳಿಕೆ ನೀಡಿ ಅಮಾನತ್ತಿನಲ್ಲಿರುವ ಹಾರ್ದಿಕ್‌ ಪಾಂಡ್ಯ ಮತ್ತು ಕೆ.ಎಲ್‌ ರಾಹುಲ್‌ ಅವರ ವಿರುದ್ಧದ ಶಿಕ್ಷೆಯ ಪ್ರಮಾಣವನ್ನು ಆದಷ್ಟು ಬೇಗ ನಿರ್ಧರಿಸಲು ಒಂಬುಡ್ಸ್‌ಮನ್‌ ನೇಮಕ ಮಾಡಬೇಕಾಗಿ ಬಸಿಸಿಐ ಆಡಳಿತಾತ್ಮಕ ಸಮಿತಿ (ಸಿಒಎ) ಗುರುವಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.
Vijaya Karnataka Web sc urged to appoint ombudsman for rahul pandya issue
ಒಂಬುಡ್ಸ್‌ಮನ್‌ ನೇಮಕಕ್ಕೆ ಸಿಒಎ ಸುಪ್ರೀಂಗೆ ಮನವಿ


ಪ್ರಕರಣ ಕುರಿತಾಗಿ ಬಿಸಿಸಿಐಗೆ ನ್ಯಾಯವಾದಿ ಹಿರಿಯ ಅಡ್ವೋಕೇಟ್‌ ಪಿ.ಎಸ್‌ ನರಸಿಂಹ ಅವರು ಅಗತ್ಯದ ನೆರವು ನೀಡಲಿದ್ದು, ಮುಂದಿನವಾರ ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ. ಎಸ್‌.ಎ ಬೋಬ್ಡೆ ಮತ್ತು ಎ.ಎಂ ಸಾಪ್ರೇ ಅವರನ್ನೊಳಗೊಂಡ ದ್ವಿ ಸದಸ್ಯ ಪೀಠ, ''ನರಸಿಂಹ ಅವರು ಕಾರ್ಯ ಆರಂಭಿಸಿದ ಬಳಿಕ ಪ್ರಕರಣದ ಕುರಿತಾಗಿ ವಿಚಾರಣೆ ನಡೆಸಲಾಗುವುದು,'' ಎಂದು ಹೇಳಿದೆ.

ಇನ್ನು ಸಿಒಎ ಪರವಾಗಿ ವಾದ ಮಂಡಿಸಿದ ಅಡ್ವೋಕೇಟ್‌ ಪರಾಗ್‌ ತ್ರಿಪಾಠಿ, ''ಸಿಒಎನಲ್ಲಿ ಉಳಿದಿರುವ ಸದಸ್ಯರಾದ ವಿನೋದ್‌ ರಾಯ್‌ ಮತ್ತು ಡಯಾನ ಎಡುಲ್ಜಿ ದ್ವಂದ್ವ ನಿಲುವು ವ್ಯಕ್ತ ಪಡಿಸಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಆದಷ್ಟು ಬೇಗ ಇತ್ಯರ್ಥಗೊಳಿಸಲು ಒಂಬುಡ್ಸ್‌ಮನ್‌ ನೇಮಕ ಅಗತ್ಯವಿದೆ,'' ಎಂದು ಮನವಿ ಮಾಡಿದ್ದಾರೆ.

''ಪಾಂಡ್ಯ ಮತ್ತು ರಾಹುಲ್‌ ಇಬ್ಬರೂ ಯುವ ಆಟಗಾರರು. ಅವರ ಭವಿಷ್ಯದ ದೃಷ್ಟಿಯಿಂದ ಕೂಡಲೇ ನಿರ್ಧಾರ ತೆಗೆದುಕೊಳ್ಳ ಬೇಕಿದೆ. ಒಂಬುಡ್ಸ್‌ಮನ್‌ ನೇಮಕದ ಮೂಲಕ ಶಿಕ್ಷಿಯ ಪ್ರಮಾಣವನ್ನು ನಿಗದಿ ಪಡಿಸಬೇಕಿದೆ,'' ಎಂದು ತ್ರಿಪಾಠಿ ವಾದ ಮಂಡಿಸಿದ್ದಾರೆ.

ಮುಂದೆ ಸಾಗುವುದು ಒಳಿತು: ಗಂಗೂಲಿ
ಮುಂಬಯಿ: ಪಾಂಡ್ಯ ಮತ್ತು ರಾಹುಲ್‌ಗೆ ಅವರ ತಪ್ಪಿನ ಅರಿವಾಗಿದ್ದು, ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳುವ ಕಡೆಗೆ ಇದೊಂದು ಪಾಠವಾಗಲಿದೆ. ಹೀಗಾಗಿ ಪ್ರಕರಣವನ್ನು ಹೆಚ್ಚು ಎಳೆಯುವದರ ಬದಲು ಇಲ್ಲಿಯೇ ಅಂತ್ಯಗೊಳಿಸಿ ಮುಂದೆ ಸಾಗುವುದು ಒಳಿತು ಎಂದು ಭಾರತ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌