ಆ್ಯಪ್ನಗರ

ಆಫ್ರಿದಿ ಆಲ್‌ ಟೈಮ್ ವಿಶ್ವಕಪ್ ಇಲೆವೆನ್‌ನಲ್ಲಿ ಸಚಿನ್, ಧೋನಿಗೆ ಸ್ಥಾನವಿಲ್ಲ

ಪಾಕಿಸ್ತಾನದ ಮಾಜಿ ನಾಯಕ ಶಾಹೀದ್ ಆಫ್ರಿದಿ, ಆಯ್ಕೆ ಮಾಡಿದ ಸಾರ್ವಕಾಲಿಕ ಶ್ರೇಷ್ಠ ಏಕದಿನ ವಿಶ್ವಕಪ್ ತಂಡದಿಂದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹಾಗೂ ಮಹೇಂದ್ರ ಸಿಂಗ್ ಧೋನಿರನ್ನು ಹೊರಗಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ.

Vijaya Karnataka Web 1 May 2019, 6:43 pm
ಹೊಸದಿಲ್ಲಿ: ಪಾಕಿಸ್ತಾನದ ಮಾಜಿ ನಾಯಕ ಶಾಹೀದ್ ಆಫ್ರಿದಿ ಸಾರ್ವಕಾಲಿಕ ಏಕದಿನ ವಿಶ್ವಕಪ್ ಇಲೆವೆನ್ ಆಯ್ಕೆ ಮಾಡಿದ್ದಾರೆ. ಆದರೆ ಅಚ್ಚರಿಯೆಂಬಂತೆ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಹಾಗೂ ಮಹೇಂದ್ರ ಸಿಂಗ್ ಧೋನಿ ಅವರನ್ನು ಹೊರಗಟ್ಟಲಾಗಿದೆ.
Vijaya Karnataka Web sachin-100th-century-fb


ಆಫ್ರಿದಿ ತಂಡದಲ್ಲಿ ಕಾಣಿಸಿಕೊಂಡಿರುವ ಏಕಮಾತ್ರ ಭಾರತೀಯ ಆಟಗಾರ ವಿರಾಟ್ ಕೊಹ್ಲಿ ಅವರಾಗಿದ್ದಾರೆ. ಇದರ ಹೊರತಾಗಿ ಬಹುತೇಕ ಪಾಕಿಸ್ತಾನ ಆಟಗಾರರಿಂದಲೇ ತುಂಬಿಕೊಂಡಿದೆ.

ಕ್ರಿಕೆಟ್ ದೇವರು ಎಂದೇ ಪರಿಗಣಿಸಲ್ಪಡುವ ಸಚಿನ್ ತೆಂಡೂಲ್ಕರ್ ವಿಶ್ವಕಪ್‌ನಲ್ಲಿ ಆಡಿರುವ 44 ಇನ್ನಿಂಗ್ಸ್‌ಗಳಲ್ಲಿ 56.95ರ ಸರಾಸರಿಯಲ್ಲಿ 2278 ರನ್ ಗಳಿಸಿದ್ದಾರೆ. ಇದರಲ್ಲಿ 16 ಶತಕ ಹಾಗೂ ಆರು ಶತಕಗಳು ಸೇರಿವೆ.

ಅತ್ತ ಧೋನಿ 2011ರಲ್ಲಿ ಭಾರತದ ವಿಶ್ವಕಪ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು .ಫೈನಲ್‌ನಲ್ಲಿ ಅಜೇಯ ಇನ್ನಿಂಗ್ಸ್ ಕಟ್ಟುವ ಮೂಲಕ ಭಾರತಕ್ಕೆ ವಿಶ್ವಕಪ್ ದೊರಕಿಸಿಕೊಟ್ಟಿದ್ದರು.

ಸದ್ಯ ಆಫ್ರಿದಿ ವಿಶ್ವಕಪ್ ತಂಡಕ್ಕೆ ಭಾರತೀಯ ಅಭಿಮಾನಿಗಳಿಂದ ಟ್ರೋಲ್‌ಗೆ ಗುರಿಯಾಗುತ್ತಿದೆ.

ಆಫ್ರಿದಿ ಆಲ್ ಟೈಮ್ ವಿಶ್ವಕಪ್ ಇಲೆವೆನ್ ಇಂತಿದೆ:
ಸಯೀದ್ ಅನ್ವರ್, ಆ್ಯಡಂ ಗಿಲ್‌ಕ್ರಿಸ್ಟ್, ರಿಕಿ ಪಾಂಟಿಂಗ್, ವಿರಾಟ್ ಕೊಹ್ಲಿ, ಇನ್ಜಾಮಾಮ್ ಉಲ್ ಹಕ್, ಜಾಕ್ವಾಸ್ ಕ್ಯಾಲಿಸ್, ವಾಸೀಂ ಅಕ್ರಂ, ಗ್ಲೆನ್ ಮೆಕ್‌ಗ್ರಾಥ್, ಶೇನ್ ವಾರ್ನ್, ಶೋಯಿಬ್ ಅಖ್ತರ್ ಮತ್ತು ಸಕ್ಲೈನ್ ಮುಶ್ತಾಕ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌