ಆ್ಯಪ್ನಗರ

ತಮ್ಮ ಆತ್ಮಚರಿತ್ರೆಯನ್ನೇ ಓದದ ಭೂಪ ಆಫ್ರಿದಿ!

ತಮ್ಮ ಆತ್ಮಚರಿತ್ರೆಯನ್ನೇ ಓದಿಲ್ಲ ಎಂದು ಹೇಳುವ ಮೂಲಕ ಪಾಕಿಸ್ತಾನದ ಮಾಜಿ ನಾಯಕ ಶಾಹೀದ್ ಆಫ್ರಿದಿ ಪೇಚಿಗೆ ಸಿಲುಕಿದ್ದಾರೆ. ಅಲ್ಲದೆ ಆಫ್ರಿದಿ ವಿರುದ್ಧ ವ್ಯಾಪಕ ಟ್ರೋಲ್‌ಗಳು ಹರಿದಾಡುತ್ತಿದೆ.

Vijaya Karnataka Web 8 May 2019, 7:43 pm
ಹೊಸದಿಲ್ಲಿ: ಆತ್ಮಚರಿತ್ರೆ ಎಂದರೆ ಏನು? ಓರ್ವ ಸರಾಸರಿ ವ್ಯಕ್ತಿಯ ಅಂದಾಜಿನ ಪ್ರಕಾರ ವ್ಯಕ್ತಿಯ ಜೀವನ ಚರಿತ್ರೆಯು ಆತ್ಮಚರಿತ್ರೆ ಆಗಿರುತ್ತದೆ. ಅಂತಹ ಆತ್ಮಚರಿತ್ರೆಯನ್ನು ಸ್ವತ: ತಾವೇ ಬರೆಯುತ್ತಾರೆ. ಇನ್ನು ಕೆಲವರು ತಜ್ಞರ ನೆರವನ್ನು ಪಡೆಯುತ್ತಾರೆ. ಅಷ್ಟಕ್ಕೂ ಆತ್ಮಕಥೆಯ ಬಗ್ಗೆ ಸ್ಪಷ್ಟ ಪರಿಜ್ಞಾನವನ್ನು ಹೊಂದಿರುತ್ತಾರೆ.
Vijaya Karnataka Web shahid-afridi-01


ಅಂಥದ್ದರಲ್ಲಿ ಪಾಕಿಸ್ತಾನದ ಮಾಜಿ ನಾಯಕ ಶಾಹೀದ್ ಆಫ್ರಿದಿ ತಾವು ತಮ್ಮ ಆತ್ಮಚರಿತ್ರೆಯನ್ನೇ ಓದಿಲ್ಲ ಎಂದು ಹೇಳುವ ಮೂಲಕ ಟ್ರೋಲ್‌ಗೆ ಗುರಿಯಾಗಿದ್ದಾರೆ.

ಇತ್ತೀಚೆಗಷ್ಟೇ ಆಫ್ರಿದಿ ಗೇಮ್ ಚೇಂಜರ್ ಆತ್ಮಚರಿತ್ರೆಯನ್ನು ಬಿತ್ತರಿಸಲಾಗಿತ್ತು. ಇದರಲ್ಲಿ ಭಾರತದ ವಿಶ್ವಕಪ್ ಹೀರೊ ಗೌತಮ್ ಗಂಭೀರ್ ಬಗ್ಗೆ ಹಗುರವಾಗಿ ಮಾತನಾಡಲಾಗಿತ್ತು. ಈಗ ತಾವೇ ಆತ್ಮಚರಿತ್ರೆಯನ್ನು ಓದಿಲ್ಲ ಎಂದು ಹೇಳುವ ಮೂಲಕ ಆಫ್ರಿದಿ ಟೀಕೆಗೆ ಗುರಿಯಾಗಿದ್ದಾರೆ.

ಆಫ್ರಿದಿ ಆತ್ಮಚರಿತ್ರೆಯಲ್ಲಿ ತಮ್ಮ ನೈಜ ವಯಸ್ಸಿನ ಬಗ್ಗೆಯೂ ಬರೆದುಕೊಂಡಿದ್ದರು. ಈ ಮೂಲಕ ತಮ್ಮ ಆಡುವ ಕಾಲಘಟ್ಟದಲ್ಲಿ ವಯಸ್ಸಿನ ಬಗ್ಗೆ ತಪ್ಪು ಮಾಹಿತಿ ನೀಡಿ ಮೋಸ ಮಾಡಿದ್ದರು ಎಂಬುದರ ಬಗ್ಗೆಯೂ ಆರೋಪಗಳು ಎದ್ದಿದ್ದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌