ಆ್ಯಪ್ನಗರ

ಶಕಿಬ್ ಅನುಪಸ್ಥಿತಿಯಿಂದಲೇ ಉತ್ತೇಜನ ಪಡೆಯಲಿರುವ ಬಾಂಗ್ಲಾದೇಶ

ಐಸಿಸಿಯಿಂದ ನಿಷೇಧಕ್ಕೊಳಗಾಗಿರುವ ಶಕಿಬ್ ಅಲ್ ಹಸನ್ ಅನುಪಸ್ಥಿತಿಯಿಂದ ಬಾಂಗ್ಲಾದೇಶ ಗಾಯಗೊಂಡ ಹುಲಿಯಂತಾಗಿದೆ. ಪ್ರಸ್ತುತ ಇದೇ ವಿಚಾರವನ್ನು ಬಾಂಗ್ಲಾದೇಶಕ್ಕೆ ಉತ್ತೇಜನವಾಗಿ ಪರಿಣಮಿಸಲಿದೆ ಎಂದು ನೂತನ ಟಿ20 ನಾಯಕ ಮಹಮುದುಲ್ಲಾ ತಿಳಿಸಿದ್ದಾರೆ.

Vijaya Karnataka Web 31 Oct 2019, 11:57 am
ಹೊಸದಿಲ್ಲಿ: ಎರಡು ವರ್ಷಗಳ ಹಿಂದೆ ಮ್ಯಾಚ್ ಫಿಕ್ಸಿಂಗ್ ಸಂಬಂಧ ಬುಕ್ಕಿಗಳು ಸಂಪರ್ಕಿಸಿದ ವಿವರವನ್ನು ಬಚ್ಚಿಟ್ಟುಕೊಂಡಿರುವ ಬಾಂಗ್ಲಾದೇಶ ಟ್ವೆಂಟಿ-20 ಹಾಗೂ ಟೆಸ್ಟ್ ನಾಯಕ ಶಕಿಬ್ ಅಲ್ ಹಸನ್ ಮೇಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಎರಡು ವರ್ಷಗಳ ನಿಷೇಧವನ್ನು ಹೇರಿದೆ. ಐಸಿಸಿ ಭ್ರಷ್ಟಾಚಾರ ತಡೆ ಘಟಕದ ನಿಯಮಗಳನ್ನು ಉಲ್ಲಂಘಿಸಿರುವ ಹಿನ್ನಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ.
Vijaya Karnataka Web mahmudullah-01


ಪ್ರಸ್ತುತ ಭಾರತ ವಿರುದ್ಧದ ಸರಣಿಗೆ ಶಕಿಬ್ ಅಲ್ ಹಸನ್ ಅಲಭ್ಯವಾಗಿದ್ದಾರೆ. ಇದರಿಂದಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತಾಜಾ ತಂಡವನ್ನು ಘೋಷಿಸಿದೆ. ಹಾಗೆಯೇ ಟ್ವೆಂಟಿ-20 ನಾಯಕರನ್ನಾಗಿ ಮಹಮುದುಲ್ಲಾ ರಿಯಾದ್ ಮತ್ತು ಟೆಸ್ಟ್ ಕಪ್ತಾನರಾಗಿ ಮೊಮಿನುಲ್‌ರನ್ನು ಹೆಸರಿಸಿದೆ.

ಚೊಚ್ಚಲ ಪಿಂಕ್ ಬಾಲ್ ಟೆಸ್ಟ್ ಆಡಲು ಭಾರತಕ್ಕೆ ಯಾರು ನೆರವಾಗಲಿದ್ದಾರೆ ಗೊತ್ತಾ?

ಏಕದಿನದಲ್ಲಿ ನಂ.1 ಆಲ್‌ರೌಂಡರ್ ಅಲಭ್ಯದಿಂದಾಗಿ ಬಾಂಗ್ಲಾದೇಶಕ್ಕೆ ಭಾರಿ ಹಿನ್ನಡೆಯುಂಟಾಗಿದೆ. ಆದರೆ ನೂತನ ನಾಯಕ ಮಹಮಹುದುಲ್ಲಾ, ಇದನ್ನೇ ತಂಡದ ಉತ್ತೇಜನವಾಗಿ ಪರಿವರ್ತಿಸುವ ಇರಾದೆಯಲ್ಲಿದ್ದಾರೆ.

ಬಾಂಗ್ಲಾದೇಶ ಕ್ರಿಕೆಟ್ ತಂಡವು ಅಕ್ಟೋಬರ್ 30ರಂದು ಭಾರತಕ್ಕೆ ಬಂದಿಳಿದೆ. ಈ ವೇಳೆಯಲ್ಲಿ ಪ್ರತಿಕ್ರಿಯಿಸಿರುವ ಮಹಮುದುಲ್ಲಾ, ದೇಶಕ್ಕಾಗಿ ನಮ್ಮ ಹೃದಯದಿಂದ ಆಡಬೇಕಿದೆ ಎಂದಿದ್ದಾರೆ.

ಹಲವು ಪ್ರಥಮಗಳಿಗೆ ಸಾಕ್ಷಿಯಾಗಿರುವ 'ಈಡನ್ ಗಾರ್ಡನ್' ಮೈದಾನದ ಬಗ್ಗೆ ನಿಮಗೆಷ್ಟು ಗೊತ್ತು?

ನನಗನಿಸುತ್ತದೆ ಶಕಿಬ್ ಅನುಪಸ್ಥಿಯು ನಮಗೆ ಉತ್ತೇಜನವಾಗಿ ಪರಿಣಮಿಸಲಿದೆ. ದೇಶಕ್ಕಾಗಿ ಆಡುವುದಕ್ಕಿಂತ ಮಿಗಿಲಾದ ಗೌರವ ಇನ್ನೊಂದಿಲ್ಲ. ತಂಡವನ್ನು ಮುನ್ನಡೆಸುವ ಜಬಾಬ್ದಾರಿ ನನ್ನ ಮೇಲಿದೆ. ಹಾಗಾಗಿ ನನ್ನ ಸರ್ವಸ್ವವನ್ನು ಮುಡಿಪಾಗಿಡಲಿದ್ದೇನೆ ಎಂದರು.

ಹಾಗಿದ್ದರೂ ಭಾರತದ ವಿರುದ್ಧ ಸರಣಿ ಸವಾಲಿನಿಂದ ಕೂಡಿರಲಿದೆ ಎಂದರು. ಅಂಕಿಅಂಶಗಳು ಸುಳ್ಳನ್ನು ಹೇಳಲಾರದು. ಇದೊಂದು ಕಠಿಣ ಸರಣಿಯಾಗಿದ್ದು, ಹಾಗಿದ್ದರೂ ಅಸಾಧ್ಯವೇನಲ್ಲ. ಒಂದು ತಂಡವಾಗಿ ಆಡಿ ಪ್ರತಿಯೊಂದು ಅವಕಾಶದ ಪ್ರಯೋಜನ ಪಡೆಯಬೇಕಿದೆ ಎಂದರು.

ಚೊಚ್ಚಲ ಡೇ-ನೈಟ್ ಟೆಸ್ಟ್ ವೀಕ್ಷಣೆ ಭಾರಿ ಅಗ್ಗ; ಟಿಕೆಟ್ ಬೆಲೆ ಬರಿ 50 ರೂ.!

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಹಿರಿಯ ವಿಕೆಟ್ ಕೀಪರ್ ಮುಶ್ಪಿಕರ್ ರಹೀಂ, ಖಂಡಿತವಾಗಿಯೂ ಶಕಿಬ್‌ರನ್ನು ಮಿಸ್ ಮಾಡಲಿದ್ದೇವೆ. ನಾವಿಬ್ಬರೂ ಸುದೀರ್ಘ ಅವಧಿಯ ವರೆಗೂ ಜತೆಯಾಗಿ ಆಡಿದ್ದೇವೆ ಎಂದರು.

ನಂ.1 ಆಟಗಾರನ ಅನುಪಸ್ಥಿತಿಯಲ್ಲಿ ಆಡುವುದು ಕಷ್ಟ. ಹಾಗೊಂದು ವೇಳೆ ಗಾಯದಿಂದಾಗಿ ಯಾವನೇ ಒಬ್ಬ ಆಟಗಾರ ಒಂದು ವರ್ಷದ ವರೆಗೆ ಅಲಭ್ಯವಾದರೆ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ದೊರಕುತ್ತದೆ. ಭಾರತವನ್ನು ಅವರದ್ದೇ ದೇಶದಲ್ಲಿ ಮಣಿಸುವುದು ನಿಜಕ್ಕೂ ಸವಾಲಿನಿಂದ ಕೂಡಿರಲಿದೆ. ಆದರೆ ಸವಾಲಿನ ಎಂದರೆ ಅವಕಾಶ ಎಂದರ್ಥ ಎಂದು ತಿಳಿಸಿದರು.

ಬಿಸಿಸಿಐ ಅಧ್ಯಕ್ಷ ಗಾದಿಗೇರಿದ ಒಂದು ವಾರದಲ್ಲೇ ಭಾರತೀಯ ಕ್ರಿಕೆಟ್ ಇತಿಹಾಸ ಬದಲಾಯಿಸಿದ ದಾದಾ

ನವೆಂಬರ್‌ 3ರಂದು ದಿಲ್ಲಿಯ ಅರುಣ್‌ ಜೇಟ್ಲಿಸ್ಟೇಡಿಯಮ್‌ನಲ್ಲಿ ಟಿ20 ಸರಣಿಗೆ ಚಾಲನೆ ದೊರೆಯಲಿದೆ. ನ.7 ಮತ್ತು 10ರಂದು ಕ್ರಮವಾಗಿ ರಾಜ್‌ಕೋಟ್‌ ಹಾಗೂ ನಾಗಪುರದಲ್ಲಿಸರಣಿಯ 2 ಮತ್ತು 3ನೇ ಪಂದ್ಯ ನಡೆಯಲಿವೆ. ನವೆಂಬರ್‌ 14ರಿಂದ 18ರವರೆಗೆ ಇಂದೋರ್‌ನಲ್ಲಿ ಮೊದಲ ಟೆಸ್ಟ್‌ ಹಾಗೂ ನ.22ರಿಂದ 26ರವರೆಗೆ ಕೋಲ್ಕೊತಾದಲ್ಲಿಎರಡನೇ ಟೆಸ್ಟ್‌ ನಿಗದಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌