ಆ್ಯಪ್ನಗರ

ವೈಯಕ್ತಿಕ ನಿಂದನೆ; ವಿಂಡೀಸ್ ಕ್ರಿಕೆಟಿಗನಿಗೆ 4 ಪಂದ್ಯಗಳ ನಿಷೇಧ

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು 2-1ರ ಅಂತರದಲ್ಲಿ ವೆಸ್ಟ್‌ಇಂಡೀಸ್ ಗೆದ್ದಿರಬಹುದು. ಆದರೆ ವಿಂಡೀಸ ವೇಗಿ ಶನಾನ್ ಗೇಬ್ರಿಯಲ್ ವೈಯಕ್ತಿಕ ನಿಂದನೆ ಆರೋಪದಲ್ಲಿ ಐಸಿಸಿಯಿಂದ ನಾಲ್ಕು ಏಕದಿನ ಪಂದ್ಯಗಳ ನಿಷೇಧಕ್ಕೊಳಗಾಗಿದ್ದಾರೆ.

Vijaya Karnataka Web 14 Feb 2019, 11:29 am
ಹೊಸದಿಲ್ಲಿ: ವೈಯಕ್ತಿಕ ನಿಂದನೆ ಆರೋಪಕ್ಕೊಳಗಾಗಿರುವ ವೆಸ್ಟ್‌ಇಂಡೀಸ್‌ನ ವೇಗದ ಬೌಲರ್ ಶನಾನ್ ಗೇಬ್ರಿಯಲ್ ಅವರ ಮೇಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ನಾಲ್ಕು ಏಕದಿನ ಪಂದ್ಯಗಳ ನಿಷೇಧವನ್ನು ಹೇರಿದೆ.
Vijaya Karnataka Web shannon-gabriel


ಇಂಗ್ಲೆಂಡ್ ವಿರುದ್ಧ ಸೈಂಟ್ ಲೂಸಿಯಾ ಟೆಸ್ಟ್ ಪಂದ್ಯದಲ್ಲಿ 30ರ ಹರೆಯದ ಗೇಬ್ರಿಯಲ್ ನಿಯಮ ಉಲ್ಲಂಘನೆ ಮಾಡಿದ್ದರು.

ಇಂಗ್ಲೆಂಡ್ ನಾಯಕ ಜೋ ರೂಟ್ ವಿರುದ್ಧ ಗೇಬ್ರಿಯಲ್ ನಿಂದನೆ ಮಾಡಿದ್ದರು. ಈ ಬಗ್ಗೆ ತನಿಖೆ ನಡೆಸಿರುವ ಐಸಿಸಿ ಶಿಸ್ತು ಸಮಿತಿಯು ಕಠಿಣ ಕ್ರಮವನ್ನು ಕೈಗೊಂಡಿದೆ.

ಈ ಹಿಂದಿನ ಎರಡು ಘಟನೆಗಳಿಂದಾಗಿ ಗೇಬ್ರಿಯಲ್ ಮೇಲೆ ಐದು ಡಿಮೆರಿಟ್ ಪಾಯಿಂಟ್‌ ಹೇರಲಾಗಿದೆ. 2017ರಲ್ಲಿ ಪಾಕಿಸ್ತಾನ ಹಾಗೂ 2018ರಲ್ಲಿ ಬಾಂಗ್ಲಾದೇಶ ವಿರುದ್ದ ಟೆಸ್ಟ್ ಪಂದ್ಯದಲ್ಲಿ ಐಸಿಸಿಯಿಂದ ಡಿಮೆರಿಟ್ ಪಾಯಿಂಟ್‌ಗೊಳಗಾಗಿದ್ದರು.

ಇದೀಗ ಮತ್ತೆ ಮೂರು ಡಿಮೆರಿಟ್ ಪಾಯಿಂಟ್ ಪಡೆದಿದ್ದರಿಂದ ಗರಿಷ್ಠ ನಾಲ್ಕು ಪಂದ್ಯಗಳ ನಿಷೇಧಕ್ಕೊಳಗಾಗಿದ್ದಾರೆ. ಇದರಿಂದ ಇಂಗ್ಲೆಂಡ್ ವಿರುದ್ದ ಏಕದಿನ ಸರಣಿಗೆ ಅಲಭ್ಯವಾಗಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌